ಬೆಂಗಳೂರಿಗೆ ರಾಮನಗರ ಸೇರ್ಪಡೆ: ಡಿಕೆಶಿ v/s ಎಚ್‌ಡಿಕೆ ನಡುವೆ ಸವಾಲು ಪ್ರತಿಸವಾಲು

Bengaluru: ಡಿಸಿಎಂ ಡಿಕೆ ಶಿವಕುಮಾರ್ (D K Shivakumar) ಹಾಗೂ ಜೆಡಿಎಸ್ ಹಂಗಾಮಿ (DKS vs HDK) ರಾಜ್ಯಾಧ್ಯಕ್ಷ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನಡುವೆ ಬಹಿರಂಗ ಸವಾಲು

ಪ್ರತಿ ಸವಾಲಿಗೆ ಕಾರಣವಾಗಿದ್ದು, ರಾಮನಗರ , ಕನಕಪುರ, ಮಾಗಡಿ, ಚನ್ನಪಟ್ಟಣ (Channapattana) ತಾಲ್ಲೂಕುಗಳನ್ನು ಬೆಂಗಳೂರಿಗೆ ಸೇರ್ಪಡೆ ಮಾಡುವ ವಿಚಾರ ಇದೀಗ ನಾಯಕರಲ್ಲಿ ಭಿನ್ನ

ಅಭಿಪ್ರಾಯಕ್ಕೂ (DKS vs HDK) ಕಾರಣವಾಗುತ್ತಿದೆ.

ಡಿಕೆಶಿ ಅವರು ರಾಮನಗರ, ಕನಕಪುರ (Kanakapura), ಮಾಗಡಿ, ಚನ್ನಪಟ್ಟಣ ಭಾಗದ ಜನರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳುವ ಉದ್ದೇಶ ಎಂದು ನಿಲುವನ್ನು ಸಮರ್ಥನೆ

ಮಾಡಿಕೊಳ್ಳುತ್ತಿದ್ದು, ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಇದರ ಹಿಂದೆ ರಾಜಕೀಯ ಹಾಗೂ ಒಕ್ಕಲಿಗ ಮತ ಸೆಳೆಯುವ ಉದ್ದೇಶ ಇದೆ ಎಂಬುವುದು ವಾದವಾಗಿದೆ.

ಈ ಎಲ್ಲಾ ತಾಲ್ಲೂಕುಗಳನ್ನು ಒಟ್ಟು ಸೇರಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುವ ಚಿಂತನೆಯನ್ನು ಡಿಕೆಶಿ ವ್ಯಕ್ತಪಡಿಸಿದ್ದರು. ನಾವೆಲ್ಲರೂ ಬೆಂಗಳೂರಿನವರು (Bengaluru) ಎಂಬ ಅಸ್ತಿಸ್ಥವನ್ನು

ಉಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ಎಂದು ಅವರು ತಿಳಿಸಿದ್ದರು. ಆದರೆ ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಆಗಲಿ. ರಾಮನಗರ ಬೆಂಗಳೂರಿನ ಭಾಗವೇ ಆಗಿತ್ತು. ನಂತರ ಗ್ರಾಮಾಂತರ ಆಗಿ

ಪ್ರತ್ಯೇಕ ಜಿಲ್ಲೆಯಾಗಿದೆ ಎಂಬುದು ಡಿಕೆ ಶಿವಕುಮಾರ್ ಸಮರ್ಥನೆಯಾಗಿದೆ.

ರಾಮನಗರ ಜಿಲ್ಲೆಯನ್ನು ಒಡೆಯಲಾಗದು ಎಂದು ಹೇಳಿದ್ದು, ಡಿಕೆಶಿ ಹಾಗೂ ಸರ್ಕಾರದ ಈ ಚಿಂತನೆಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (H D Kumaraswamy) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಜನ್ಮವಷ್ಟೇ ಅಲ್ಲ, ಮುಂದಿನ ಏಳು ಜನ್ಮ ಎತ್ತಿ ಬಂದರೂ ಜಿಲ್ಲೆಯನ್ನು ಛಿದ್ರ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಜನರ ಅನುಕೂಲ ಹಾಗೂ ಅನಾನುಕೂಲವನ್ನು ವೈಜ್ಞಾನಿಕವಾಗಿ ಪರಿಗಣಿಸಿ

ರಾಮನಗರ ಜಿಲ್ಲೆಯನ್ನು ರಚನೆ ಮಾಡಲಾಗಿದೆ. ಒಡೆದು ಚೂರು ಮಾಡಲು ರಾಮನಗರ (Ramanagar) ಏನು ಬಂಡೆ ಕಲ್ಲೇ? ಎಂದು ಪ್ರಶ್ನಿಸಿದ್ದಾರೆ.

ಕನಕಪುರದ ಬಗ್ಗೆ ಕಾಳಜಿ ಇದ್ದಲ್ಲಿ ಬೆಂಗಳೂರು ಸೇರಿಸುವುದನ್ನು ಬಿಟ್ಟು ಪ್ರತ್ಯೇಕ ಜಿಲ್ಲೆ ಮಾಡಿಕೊಳ್ಳಲಿ ನಮ್ಮ ಅಭ್ಯಂತರವಿಲ್ಲ ಎಂದಿದ್ದಾರೆ. ಇನ್ನು ಮಾಜಿ ಸಚಿವ ಸಿ.ಪಿ ಯೋಗಶ್ವರ್ (C P Yogeshwar)

ತಮ್ಮದೇ ಆದ ರೀತಿಯಲ್ಲಿ ಇದನ್ನು ವಿಶ್ಲೇಷಣೆ ಮಾಡಿದ್ದು, ಬೆಂಗಳೂರಿನಲ್ಲಿ ಒಕ್ಕಲಿಗರ ಸಂಖ್ಯೆ ಜಾಸ್ತಿ ಇರುವುದರಿಂದ ಸಮುದಾಯ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಈ ಪ್ರಯತ್ನಕ್ಕೆ ಕೈಹಾಕಿದ್ದಾರೆ ಎಂದಿದ್ದಾರೆ.

ಇದನ್ನು ಓದಿ: ಹುಲಿ ಉಗುರು ಪ್ರಕರಣ : ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲ, ಮಾಡೋದಿಲ್ಲಾ – ನಟ ಜಗ್ಗೇಶ್ ಪ್ರತಿಕ್ರಿಯೆ

Exit mobile version