ಸುಳ್ಳು ಸುದ್ದಿ ಹಬ್ಬಿಸಿದವರಿಗೆ ತಿರುಗೇಟು ಕೊಟ್ಟ ನಟ ಡಾಲಿ ಧನಂಜಯ್!

dolly dhananjay

ಸದ್ಯ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟ(Actor) ಡಾಲಿ ಧನಂಜಯ್(Dolly Dhananjay) ಅವರು ರಾಜಕೀಯ(Politics) ಪ್ರವೇಶ ಮಾಡುತ್ತಾರೆ ಎಂಬ ಸುದ್ದಿ ಎಲ್ಲೆಡೇ ಹರಿದಾಡುತ್ತಿದೆ.

ನಟ ಡಾಲಿ ಧನಂಜಯ್ ಜೆಡಿಎಸ್(JDS) ಅಭ್ಯರ್ಥಿಯಾಗಿ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ಹಾಲಿ ಶಾಸಕ ಶಿವಲಿಂಗೇಗೌಡರು ಕಾಂಗ್ರೆಸ್ ಸೇರುತ್ತಾರೆ. ಹೀಗಾಗಿ ಶಿವಲಿಂಗೇಗೌಡರ ವಿರುದ್ದ ಡಾಲಿ ಧನಂಜಯ್ ಅವರಿಗೆ ಟಿಕೆಟ್ ನೀಡಲು ದಳಪತಿಗಳು ಪ್ಲ್ಯಾನ್ ಮಾಡಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲೂ ಹಬ್ಬಿದೆ.

ಇನ್ನು ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಡಾಲಿ ಧನಂಜಯ್‍ಗೆ ರಾಜಕೀಯ ಎಲ್ಲಾ ಬೇಕಿತ್ತಾ ಎಂದು ಅವರ ಅಭಿಮಾನಿಗಳು ಸಾಮಾಜಿಕ ಮಾದ್ಯಮಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಡಾಲಿ ಧನಂಜಯ್ ತಮ್ಮದೇ ಶೈಲಿಯಲ್ಲಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿ ಉತ್ತರ ನೀಡಿದ್ದಾರೆ. “ಸುಮ್ನೇ ಏನೇನೋ ಸುದ್ದಿ ಬರೆಯೋದು, ತೋರಿಸೋದು, ಕೇಳೋದು, ನೋಡೋದು, ನಂಬೋದು ಇದೆಲ್ಲಾ ಬಿಟ್ಟು, ನಡೀರಿ ಏನಾರಾ ಒಂದಷ್ಟು ಒಳ್ಳೆ ಕೆಲಸ ಮಾಡೋಣ” ಎಂದು ಬರೆದುಕೊಂಡಿದ್ದಾರೆ.

ಇನ್ನು ಮಾದ್ಯಮವೊಂದಕ್ಕೆ ತಮ್ಮ ರಾಜಕೀಯ ಪ್ರವೇಶದ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಡಾಲಿ ಧನಂಜಯ್, ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ. ನಾನು ಎಂದಿಗೂ ರಾಜಕೀಯ ಪ್ರವೇಶಿಸುವ ಕುರಿತು ಯೋಚಿಸಿಲ್ಲ. ನಾನು ರಾಜಕೀಯ ಸೇರುತ್ತೇನೆ ಎಂದು ಯಾರಿಗೂ, ಎಲ್ಲೂ ಹೇಳಿಲ್ಲ. ಸದ್ಯ ಕಲಾವಿದನಾಗಿ ಜನರು ನನ್ನನ್ನು ಸ್ವೀಕರಿಸಿದ್ದಾರೆ. ಸಾಕಷ್ಟು ಅಭಿಮಾನಿಗಳು ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಹೀಗಾಗಿ ಅಭಿಮಾನಿಗಳನ್ನು ರಂಜಿಸುವುದು ಮಾತ್ರ ನನ್ನ ಕೆಲಸ. ಹೀಗಾಗಿ ರಾಜಕೀಯಕ್ಕೆ ಬರುತ್ತೇನೆ ಎಂಬುದು ಶುದ್ದ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.
Exit mobile version