ನಿಮ್ಮ ಮೌಲ್ಯವಾದ ಮತವನ್ನು ಬಿಜೆಪಿಯಂತ ಪಕ್ಷಕ್ಕೆ ಹಾಕಿ ನಾಶ ಮಾಡಬೇಡಿ : ಮಮತಾ ಬ್ಯಾನರ್ಜಿ!

politics

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಮಮತಾ ಬ್ಯಾನರ್ಜಿ ಅವರು ಸಮಾಜವಾದಿ ಪಕ್ಷದ ಕುರಿತು ಪ್ರಚಾರಕ್ಕೆ ಎಂದು ಉತ್ತರ ಪ್ರದೇಶಕ್ಕೆ ತೆರಳಿದ್ದ ಸಮಯದಲ್ಲಿ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ನಿಮ್ಮ ಅಮೂಲ್ಯವಾದ ಮತವನ್ನು ಹಾಕಿ ವೇಸ್ಟ್ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಈ ಬಾರಿ ಸಮಾಜವಾದಿ ಪಕ್ಷ ಪರವಾಗಿ ಪ್ರಚಾರ ಮಾಡಲು ಉತ್ತರ ಪ್ರದೇಶಕ್ಕೆ ತೆರಳಿದ ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು.

ಜನರೇ ಬಿಜೆಪಿ ಸರ್ಕಾರ ಏನು ಮಾಡಿದೆ? ಏನು ಮಾಡುತ್ತಿದೆ? ಇದೇ ಕಳೆದ ಬಾರಿ ನಾವೆಲ್ಲರೂ ಕೊರೊನಾ ಎರಡನೇ ಅಲೆಯ ಆರ್ಭಟವಿದ್ದಾಗ ಸಂಕಷ್ಟದಲ್ಲಿದ್ದೆವು, ಆದರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಜನರ ಕಷ್ಟಗಳನ್ನು ಬಗೆಹರಿಸದೆ, ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ತೆರಳಿ ತುಂಬ ಬಿಝಿಯಾಗಿದ್ದರು ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಮಾತಿನ ಚಾವಟಿ ಬೀಸಿದರು. ನನ್ನನ್ನು ಸೋಲಿಸಲು ಇದೇ ಯೋಗಿ ಆದಿತ್ಯನಾಥ್ ಬಿಜೆಪಿ ಕಡೆಯಿಂದ ಬಂದಿದ್ದರು. ಜನರು ಊಟಕ್ಕೆ, ಬಟ್ಟೆಗೆ, ಜೀವನ ನಡೆಸಲು ಹಣವಿಲ್ಲದೇ ಕೊರೊನಾ ರೋಗಕ್ಕೆ ತುತ್ತಾಗಿ ಸಾಯುತ್ತಿದ್ದರೇ ನಿಮಗೆ ಚುನಾವಣೆಯ ಪ್ರಚಾರದಲ್ಲಿ ನಿರತರಾಗುವಂತ ಅಗತ್ಯವೇನಿತ್ತು?

ನಾವು ಗಂಗಾಮಾತೆಯನ್ನು ಭಕ್ತಿಯಿಂದ ನಂಬುತ್ತೇವೆ. ಆದರೆ ಇಲ್ಲಿ ಇವರು ಅದೇ ಗಂಗಾಮಾತೆಯ ಜಾಗಕ್ಕೆ ಹೆಣಗಳನ್ನು ಬಿಸಾಡುತ್ತಾರೆ. ಯಾಕೆ ಉತ್ತರ ಪ್ರದೇಶ ಸರ್ಕಾರಕ್ಕೆ ಸತ್ತ ದೇಹಗಳ ಸಂಸ್ಕಾರ ಮಾಡಲು ಕಟ್ಟಿಗೆ ಕೊರತೆ ಇದೆಯಾ ಎಂದು ಪ್ರಶ್ನಿಸುವ ಮುಖೇನ ಟಾಂಗ್ ನೀಡಿದ್ದಾರೆ. ಅಖಿಲೇಶ್ ಯಾದವ್ ಅವರ ಜೊತೆ ಲಕ್ನೋದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಇಂಥ ಬಿಜೆಪಿ ಸರ್ಕಾರಕ್ಕೆ ನೀವು ಮತ ಹಾಕಬೇಡಿ. ದಯಮಾಡಿ ನೀವೆಲ್ಲಾ ಎಚ್ಚೆತ್ತುಕೊಳ್ಳಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಅಮೂಲ್ಯ ಮತಗಳನ್ನು ಬಿಜಿಪಿಗೆ ಹಾಕಿ ನಿಮ್ಮ ಮತಕ್ಕೆ ಧಕ್ಕೆ ತಂದುಕೊಳ್ಳಬೇಡಿ ಎಂದು ಹೇಳಿದರು.

Exit mobile version