ವರನಟ ಡಾ. ರಾಜಕುಮಾರ್ ಅಭಿನಯದ ‘ಬೇಡರ ಕಣ್ಣಪ್ಪ’ ಚಿತ್ರದ ವಿಶೇಷತೆ ಏನು ಗೊತ್ತಾ? ಇಲ್ಲಿದೆ ಮಾಹಿತಿ!

Dr Rajkumar

ವರನಟ ಡಾ. ರಾಜ್ಕುಮಾರ್(Dr Rajkumar), ಕನ್ನಡ ಚಿತ್ರರಂಗದ(Kannada Film Industry) ಎವರ್ ಗ್ರೀನ್ ಸೂಪರ್ ಸ್ಟಾರ್. ಸ್ಯಾಂಡಲ್ವುಡ್(Sandalwood) ಪಾಲಿಗೆ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಪಾಲಿಗೆ ಮೇರು ಕಲಾವಿದ.

ವರನಟ, ನಟಸಾರ್ವಭೌಮ, ರಸಿಕರ ರಾಜ, ಕನ್ನಡ ಕಂಠೀರವ ಹೀಗೆ ಅನೇಕ ಬಿರುದುಗಳು ರಾಜ್ಕುಮಾರ್ ಅವರಿಗಿವೆ. ಡಾ. ರಾಜ್ಕುಮಾರ್ ಅವರು ಓದಿದ್ದು ಕೇವಲ 3ನೇ ತರಗತಿ. ಆದ್ರೆ ವಿದ್ಯೆಗಿಂತ ಕಲೆಯೇ ಮೇಲು ಎಂಬುದನ್ನು ಡಾ. ರಾಜ್ ತೋರಿಸಿಕೊಟ್ರು. ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ರು. ಅಭಿಮಾನಿಗಳನ್ನು ‘ದೇವರು’ ಎಂದು ಕರೆದು ತಮ್ಮ ಹೃದಯವಂತಿಕೆಯನ್ನು ತೋರಿಸಿದರು. ಕೇವಲ ನಟನೆ ಮಾತ್ರ ಡಾ. ರಾಜ್ಗೆ ಒಲಿದಿರಲಿಲ್ಲ. ಕಲೆಯ ಪ್ರತಿಯೊಂದು ವಿಧಗಳಲ್ಲೂ ನಟ ಸಾರ್ವಭೌಮನ(Natasarwabhowma) ಕೊಡುಗೆ ಅಪಾರ.

ಅದು ಇಂಗ್ಲೀಷ್ ಆಗಿರಲಿ ಅಥವಾ ಹಳೆಗನ್ನಡವೇ ಆಗಿರಲಿ ಡಾ.ರಾಜ್ ಎಲ್ಲದರಲ್ಲೂ ಪರಿಣಿತರಾಗಿದ್ದರು. ಚಿತ್ರಗಳಲ್ಲಿ ಸುಮಧುರವಾಗಿ ಹಾಡುತ್ತಿದ್ದರು. ಇಷ್ಟೆಲ್ಲಾ ಇದ್ರೂ ಡಾ.ರಾಜ್ ಎಂದೂ ಪರಭಾಷಾ ಚಿತ್ರಗಳಲ್ಲಿ ನಟಿಸಲಿಲ್ಲ. ಆಫರ್ಗಳ ಮೇಲೆ ಆಫರ್ಗಳು ಬಂದ್ರೂ ರಾಜ್ ಬೇರೆ ಚಿತ್ರಗಳನ್ನು ಒಪ್ಪಿಕೊಳ್ಳಲಿಲ್ಲ. ಡಾ.ರಾಜ್ಕುಮಾರ್ ಅವರು ರಾಷ್ಟ್ರಪ್ರಶಸ್ತಿ, ರಾಜ್ಯ ಫಿಲ್ಮ್ಫೇರ್ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಡಾ. ರಾಜ್ ಅವರ ಮೂಲ ಹೆಸರು ಮುತ್ತುರಾಜ್. ಮುತ್ತುರಾಜ್ 1929 ರಂದು ಗಾಜನೂರಿನಲ್ಲಿ ಜನಿಸಿದರು.

ಮಾತೃಭಾಷೆ ಕನ್ನಡ, ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನ್ ಮತ್ತು ತಾಯಿ ಲಕ್ಷ್ಮಮ್ಮ. ರಾಜ್ ತಂದೆ ನಾಟಕ ಮಂಡಳಿಯಲ್ಲಿ ಅಭಿನಯ ಮಾಡುತಿದ್ದರು. ಕಂಸ, ರಾವಣ ಹೀಗೆ ಹಲವು ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ತಮ್ಮ 25 ನೇ ವಯಸಿನವರೆಗೂ ಗುಬ್ಬಿ ವೀರಣ್ಣ ಅವರ ನಾಟಕ ಮಂಡಳಿಯಲ್ಲಿ ಅಭಿನಯ ಮಾಡುತ್ತಿದ್ದರು. ಈ ಮಧ್ಯೆ ಪಾರ್ವತಮ್ಮ ಅವರ ಕೈ ಹಿಡೀತಾರೆ. ರಾಜ್ ಅವರು ಗುಬ್ಬಿ ವೀರಣ್ಣ(Gubbi Veeranna) ನಾಟಕ ಮಂಡಳಿಯಲ್ಲಿ ಅಭಿನಯ ಮಾಡುತ್ತಿದ್ದ ಸಂದರ್ಭದಲ್ಲಿ ನಿರ್ದೇಶಕ ಸಿಂಹ ಅವರ ಕಣ್ಣಿಗೆ ಬೀಳ್ತಾರೆ.

ಸಿಂಹ ತಮ್ಮ ಚಿತ್ರ ಬೇಡರ ಕಣ್ಣಪ್ಪ(Bedara Kannappa) ಪಾತ್ರಕ್ಕೆ ಹೊಸ ಕಲಾವಿದರನ್ನು ಹುಡುಕುತ್ತಿದ್ದರು. ಆ ಸಮಯದಲ್ಲಿ ರಾಜ್ ಅವರ ಅಭಿನಯವನ್ನು ಮೆಚ್ಚಿ ತಮ್ಮ ಚಿತ್ರಕ್ಕೆ ನಾಯಕನಾಗಿ ಆಯ್ಕೆ ಮಾಡಿದರು. ಮುತ್ತುರಾಜ್ ಎಂಬ ಹೆಸರು ಬದಲಿಸಿ ರಾಜ್‌ಕುಮಾರ್ ಎಂದು ನಾಮಕರಣ ಮಾಡಿದರು. ಇದು ರಾಜ್ ಅಭಿನಯದ ಮೊದಲ ಚಿತ್ರ. ಅಭಿನಯ ಮಾಡಿದ ಮೊದಲ ಚಿತ್ರದಲ್ಲೇ ಅದ್ಭುತ ನಟನೆ ನೀಡಿ ಸೈ ಅನ್ನಿಸಿಕೊಂಡರು ಮತ್ತು ಆ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡಿತು. ಹಾಗೆಯೇ ಈ ಚಿತ್ರಕ್ಕೆ ರಾಷ್ಟೀಯ ಚಲನಚಿತ್ರ ಪ್ರಶಸ್ತಿ ಕೂಡ ದೊರೆತಿದೆ.

Exit mobile version