ನಟ ಡಾ.ವಿಷ್ಣುವರ್ಧನ್ ಸ್ಮಾರಕ ಡಿಸೆಂಬರ್ಗೆ ಉದ್ಘಾಟನೆ : ಸಿಎಂ ಬೊಮ್ಮಾಯಿ ಭರವಸೆ

Bengaluru : ಅರಮನೆ ನಗರಿ ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ನಟ ಮತ್ತು ರಾಜ್ಯದ ಅತಿದೊಡ್ಡ ಸಾಂಸ್ಕೃತಿಕ ದಿಗ್ಗಜ ವಿಷ್ಣುವರ್ಧನ್ (Dr. Vishnuvardhan Memorial) ಅವರ,

ಸ್ಮಾರಕವನ್ನು ಡಿಸೆಂಬರ್ಗೆ ಉದ್ಘಾಟನೆ ಮಾಡಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

ಬೆಂಗಳೂರಿನ ಜಯನಗರದಲ್ಲಿ  ವಿಷ್ಣುವರ್ಧನ್ ಅವರ ಅಳಿಯ ಮತ್ತು ದತ್ತುಪುತ್ರ ಅನಿರುದ್ಧ್ ನೂತನವಾಗಿ ನಿರ್ಮಿಸಿರುವ ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ,

ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಭಾರತಿ (Dr. Vishnuvardhan Memorial) ವಿಷ್ಣುವರ್ಧನ್ ಅವರು ಗೃಹಪ್ರವೇಶ ಕಾರ್ಯಕ್ರಮಕ್ಕೆ ಖುದ್ದು ಆಗಮಿಸಿ ಆಹ್ವಾನ ನೀಡಿದ್ದರು.

ಹೀಗಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಮರುರೂಪಿಸಿದ ಮನೆಯ ಹಿಂದೆ ಅವರ ಶ್ರಮವನ್ನು ನೋಡಬಹುದು. ಇನ್ನು  ಮೈಸೂರಿನಲ್ಲಿ ನಿರ್ಮಿಸಲಾಗುತ್ತಿರುವ, 

ವಿಷ್ಣುವರ್ಧನ್ ಅವರ ಸ್ಮಾರಕದ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಮತ್ತು ಅದನ್ನು ಅದ್ಧೂರಿಯಾಗಿ ಉದ್ಘಾಟಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಇದನ್ನೂ ಓದಿ : https://vijayatimes.com/siddaramaiah-vote-bank/

ವಿಷ್ಣುವರ್ಧನ್ ಅವರ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ ನಂತರ ಉದ್ಘಾಟನಾ ದಿನವನ್ನು ಅಂತಿಮಗೊಳಿಸಲಾಗುವುದು.  ಡಾ.ವಿಷ್ಣುವರ್ಧನ್ ಅವರು ಶ್ರೇಷ್ಠ ನಟರಾಗಿದ್ದು, ಅವರ ನಿಲುವು ಮತ್ತು ಸ್ಥಾನಮಾನಕ್ಕೆ ಅನುಗುಣವಾಗಿ ಕಾರ್ಯಕ್ರಮ ಆಯೋಜಿಸಲಾಗುವುದು. 

https://fb.watch/h1MNPzgKYw/ S T ಸೋಮಶೇಖರ್ ಕ್ಷೇತ್ರ : 4 ವರ್ಷಗಳಾದ್ರೂ ಇಲ್ಲಿನ ಮನೆಗಳಿಗೆ ಸಿಕ್ಕಿಲ್ಲ ಮುಕ್ತಿ!

ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸಿದ ಹಿರಿಯ ನಟನಿಗೆ ಗೌರವ ಸಲ್ಲಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ಇನ್ನು ಹಿರಿಯ ನಟ ವಿಷ್ಣುವರ್ಧನ್ ಅವರ ಸ್ಮಾರಕವನ್ನು ನಿರ್ಮಿಸುವ ಕಾರ್ಯ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಹಿಂದಿನ ಅನೇಕ ಸರ್ಕಾರಗಳು ಈ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರಿವೆ.

ಸ್ಮಾರಕಕ್ಕೆ ಭೂಮಿ ಒದಗಿಸಲು ಸರ್ಕಾರ ತೀವ್ರ ವಿಳಂಬ ನೀತಿಯನ್ನು ಅನುಸರಿಸಿತು. ತದನಂತರ ಹೀಗೆ ಹಲವಾರು ಅಡೆತಡೆಗಳ ನಂತರ ಇದೀಗ ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ನಿರ್ಮಾಣವಾಗುತ್ತಿದೆ.

ನಾಡಿನ ಹಿರಿಯ ನಟನಿಗೆ ಗೌರವ ಸಲ್ಲಿಸುವ  ಕಾರ್ಯದಲ್ಲಿ ಹಿಂದಿನ ಎಲ್ಲ ಸರ್ಕಾರಗಳು (Government) ವಿಫಲವಾಗಿವೆ. ವಿಷ್ಣುವರ್ಧನ್ ಅವರ ಕುಟುಂಬದ ತೀವ್ರ ಹೋರಾಟ ಫಲವಾಗಿ ಇಂದು ಸ್ಮಾರಕ ನಿರ್ಮಾಣವಾಗುತ್ತಿದೆ.
Exit mobile version