ವರುಣನ ಆರ್ಭಟಕ್ಕೆ ತತ್ತರಿಸಿದ ದುಬೈ: ಜನಜೀವನ ಅಸ್ತವ್ಯಸ್ತ. ವಿಮಾನ ಸಂಚಾರ ಸ್ಥಗಿತ.

Dubai: ದುಬೈನಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಬಿರುಗಾಳಿ ಮಳೆ (Dubai in heavy flood) ಆರ್ಭಟಿಸುತ್ತಿದೆ. ಎಲ್ಲಿ ನೋಡಿದರೂ ಆಳೆತ್ತರ ನೀರು ತುಂಬಿಕೊಂಡಿದೆ. ಮಳೆ (Rain) ಕಾರಣದಿಂದ

ಯುಎಇ (UAE) ಮತ್ತು ಬಹರೇನ್ (Bahrain) ದೇಶಗಳ ಜನಜೀವನ ಅಸ್ತವ್ಯಸ್ತಗೊಂಡಿದೆ. ದುಬೈ(Dubai) ನಗರದಲ್ಲಿ ಇಡೀ ವರ್ಷ ಬೀಳುವ ಸರಾಸರಿ ಮಳೆಗಿಂತಲೂ ಹೆಚ್ಚು ಪ್ರಮಾಣದ

ಮಳೆ ಕೇವಲ 12 ಗಂಟೆಯಲ್ಲಿ ಸುರಿದಿದೆ.ದಾಖಲೆಯ ಮಳೆಯಿಂದ ವಿಮಾನಗಳ ಸಂಚಾರದಲ್ಲಿ ಬದಲಾವಣೆಗಳಾಗಿವೆ. ನದಿಯಂತಾಗಿರುವ ರಸ್ತೆಗಳಲ್ಲಿ ಕಾರುಗಳು ಅಡ್ಡಾದಿಡ್ಡಿ ಬಿದ್ದಿವೆ. ವಾಹನಗಳಲ್ಲಿ

ತೆರಳುತ್ತಿದ್ದವರು, ಜಲಾವೃತ ರಸ್ತೆಗಳಿಂದಾಗಿ (Dubai in heavy flood) ಅಲ್ಲಿಯೇ ಕಾರುಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.

ಯುಎಇಯ (UAE) ನೆರೆಯ ಒಮಾನ್ ಕೂಡ ಭಾರೀ ಮಳೆಯಿಂದಾಗಿ ಪ್ರವಾಹವನ್ನು ಅನುಭವಿಸುತ್ತಿದೆ. ವರುಣನ ಮುನಿಸಿಗೆ (Varuna’s sage) 18 ಮಂದಿ ಸಾವನ್ನಪ್ಪಿದ್ದು, ಹಲವರು

ನಾಪತ್ತೆಯಾಗಿದ್ದಾರೆ (disappeared) ಎಂದು ವರದಿಯಾಗಿದೆ. ದುಬೈನಲ್ಲಿ ಸೋಮವಾರ ಮತ್ತು ಮಂಗಳವಾರ ರಾತ್ರಿಯಿಂದ ಜೋರು ಗಾಳಿ ಸಹಿತ ಮಳೆಯಾಗುತ್ತಿದೆ. ಇದರಿಂದಾಗಿ ದುಬೈ

ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Dubai International Airport ) ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ. ದುಬೈ ವಿಮಾನ ನಿಲ್ದಾಣ ವಿಶ್ವದ ಅತ್ಯಂತ ಜನನಿಬಿಡ ವಿಮಾನ

ನಿಲ್ದಾಣಗಳಲ್ಲಿ ಒಂದಾಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.ದುಬೈ ವಿಮಾನ ನಿಲ್ದಾಣದಲ್ಲಿ ನೀರು ನಿಂತಿದ್ದರಿಂದ ವಿಮಾನಗಳ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.

ಸುಮಾರು 45 ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಮಂಗಳವಾರ (Tuesday) ಸಂಜೆಯವರೆಗೆ ಅಲ್ಲಿ ಮಳೆಯ ಸುಳಿವೇ ಇರಲಿಲ್ಲ. ಆದರೆ, ರಾತ್ರಿಯಾಗುತ್ತಿದ್ದಂತೆ ನಿಧಾನವಾಗಿ ಶುರುವಾದ (Friday) ಮಳೆ, ನೋಡನೋಡುತ್ತಿದ್ದಂತೆ ಮುಸಲಧಾರೆಯ

ಸ್ವರೂಪ ಪಡೆಯಿತು. ಮೊದಲು ತಗ್ಗು ಪ್ರದೇಶಗಳು (Lowlands) ಜಲಾವೃತಗೊಂಡರೆ, ಆನಂತರದಲ್ಲಿ ಇತರ ಸಮತಟ್ಟಾದ ಪ್ರಾಂತ್ಯಗಳಲ್ಲಿಯೂ ನೀರು ನಿಲ್ಲಲಾರಂಭಿಸಿತು. ನಿಧಾನವಾಗಿ

ನಗರಗಳಲ್ಲಿನ ರಸ್ತೆಗಳು, ಫುಟ್ ಪಾತ್ ಗಳು, ನಗರದಾಚೆಗಿನ ರಸ್ತೆಗಳು, ಹೈವೇಗಳು ಎಲ್ಲವೂ ಜಲಾವೃತವಾದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.1949 ರ ಬಳಿಕ ಇದೇ ಮೊದಲ ಬಾರಿಗೆ

ಯುಎಇಯಲ್ಲಿ (UAE) ದಾಖಲೆ ಪ್ರಮಾಣದ ಮಳೆ ಸುರಿದಿದೆ.ಪ್ರಮುಖ ಶಾಪಿಂಗ್ ಸೆಂಟರ್‌ಗಳಾದ (Shopping Centre) ದುಬೈ ಮಾಲ್ ಮತ್ತು ಮಾಲ್ ಆಫ್ ಎಮಿರೇಟ್ಸ್ ಎರಡೂ ಪ್ರವಾಹಕ್ಕೆ

ಸಿಲುಕಿದ್ದು, ಮೆಟ್ರೋ ನಿಲ್ದಾಣಗಳಿಗೂ ನೀರು ನುಗ್ಗಿರುವ ಕಾರಣ ಕೆಂಪು ಮತ್ತ ಹಸಿರು ಮಾರ್ಗಗಳ ನಿಲ್ದಾಣಗಳಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ನಿರ್ದಿಷ್ಟ ಮಾರ್ಗಗಳಲ್ಲಿ ಮಾತ್ರ

ಮೆಟ್ರೋ ಸಂಚಾರ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version