ಬುರ್ಜ್​ ಖಲೀಫಾದಲ್ಲಿ ತ್ರಿವರ್ಣ ಧ್ವಜ ಪ್ರದರ್ಶಿಸಿ ಭಾರತಕ್ಕೆ ಧೈರ್ಯ ತುಂಬಿದ ದುಬೈ

ದುಬೈ, ಏ. 26: ಭಾರತದಲ್ಲಿ ದಿನೇ ದಿನೇ ಕೊರೊನಾ ಕಾಟ ಹೆಚ್ಚಾಗುತ್ತಿರುವಾಗ ಕೊಲ್ಲಿ ರಾಷ್ಟ್ರಗಳು ಭಾರತದ ಪರವಾಗಿ ನಿಂತಿದೆ. ಭಾರತೀಯರೇ ದೃಢವಾಗಿರಿ ಎಂದು ವಿಶ್ವದ ಅತಿ ದೊಡ್ಡ ಗಗನಚುಂಬಿ ಕಟ್ಟಡವಾದ ಬುರ್ಜ್​ ಖಲೀಫಾದಿಂದ (Burj Khalifa) ವಿದ್ಯುತ್ ದೀಪಬೆಳಗುವ ಮೂಲಕ ತನ್ನ ಒಗ್ಗಟ್ಟನ್ನು ಪ್ರದರ್ಶಿಸಿದೆ. ಭಾನುವಾರ ರಾತ್ರಿ ದುಬೈನಲ್ಲಿರುವ ಬುರ್ಜ್​ ಖಲೀಫಾ ಕಟ್ಟಡದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಬಿಂಬಿಸಿ, Stay Strong India ಎಂಬ ಸಂದೇಶವನ್ನೂ ಸಾರಿದೆ.

ಕೊಲ್ಲಿ ರಾಷ್ಟ್ರದಲ್ಲಿರುವ (UAE) ಭಾರತೀಯ ಅಂಬಾಸಿಡರ್ ಪವನ್ ಕಪೂರ್ ಅವರು ಈ ಬಗ್ಗೆ ಟ್ವೀಟ್​ ಮಾಡಿದ್ದು, ಇಂತಹ ಸಂಕಷ್ಟದ ಸಮಯದಲ್ಲಿ ಕೊಲ್ಲಿ ರಾಷ್ಟ್ರಗಳ ಬೆಂಬಲ, ಒಗ್ಗಟ್ಟನ್ನು ಭಾರತವು ಪ್ರಶಂಸಿಸುತ್ತದೆ ಎಂದು ಹೇಳಿದ್ದಾರೆ.

Latest News

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.