ಎಲೆಕ್ಟ್ರಾನಿಕ್‌ ಸಿಟಿ ಮತ್ತು ಮಾದವಾರ ನಡುವೆ ಹೊಸ ಮಾರ್ಗವಾಗಿ ಬಿಎಂಟಿಸಿ ಬಸ್‌ ಸೇವೆ ಆರಂಭ

Bengaluru: ಸಿಲಿಕಾನ್ ಸಿಟಿ (Silicon City) ಜನರ ಸಂಚಾರ ಜೀವನಾಡಿಯಾಗಿರುವ ಬಿಎಂಟಿಸಿ ಅವಶ್ಯಕತೆ ಹೆಚ್ಚಾಗಿದ್ದು, ಈಗ ಮಾದವಾರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಹೊಸ ಮಾರ್ಗವಾಗಿ ಬಿಎಂಟಿಸಿ ಬಸ್​ಗಳ ಸೇವೆ ಆರಂಭವಾಗಿದ್ದು, ಈ ಎರಡು ಸ್ಥಳಗಳಿಗೆ ನೈಸ್ ರೋಡ್ (Nice Road) ಮೂಲಕವಾಗಿ ಬಿಎಂಟಿಸಿ ಬಸ್ ಸಂಚಾರಗೊಳ್ಳಲಿದೆ. ಇನ್ನು ಬೆಳಗ್ಗೆ 6:40 ರಿಂದ ರಾತ್ರಿ 8 ಗಂಟೆವರೆಗೆ ಈ ಬಸ್ಗಳ ಸೇವೆ ಇರಲಿದೆ.

ಪ್ರಯಾಣಿಕರ ಬೇಡಿಕೆ ಮೇರೆಗೆ ನೈಸ್ ರಸ್ತೆಯಲ್ಲೂ ಬಿಎಂಟಿಸಿ (BMTC) ಬಸ್​ಗಳ ಸಂಚಾರಕ್ಕೆ ಸಾರಿಗೆ ಇಲಾಖೆ ನಿರ್ಧರಿಸಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಮಾದವಾರ ರೂಟ್​ಗೆ ಹೊಸ ಮಾರ್ಗವಾಗಿ ಬಿಎಂಟಿಸಿ ಬಸ್​ಗಳ ಸೇವೆ ಆರಂಭವಾಗಿದೆ. ಈ ಎರಡು ಸ್ಥಳಗಳಿಗೆ ನೈಸ್ ರೋಡ್ ಮೂಲಕವಾಗಿ ಬಿಎಂಟಿಸಿ ಬಸ್ ಸಂಚಾರ ನಡೆಸಲಿದೆ.

ಬೆಂಗಳೂರಿಗೆ (Bengaluru) ದೂರದ ಊರುಗಳಿಂದ ಬರುತ್ತಿದ್ದವರು ಮೆಜೆಸ್ಟಿಕ್‌ ತಲುಪಿ ಅಲ್ಲಿಂದ ಎಲೆಕ್ಟ್ರಾನಿಕ್‌ ಸಿಟಿ ಬಸ್‌ ಹಿಡಿದು ಸಂಚಾರ ನಡೆಸಬೇಕಿತ್ತು. ಇದಕ್ಕೆ ಕನಿಷ್ಠ 2 ಗಂಟೆ ವ್ಯರ್ಥವಾಗುತ್ತಿತ್ತು. ಸದ್ಯ ಪ್ರಯಾಣಿಕರ ಬೇಡಿಕೆ ಮೇರೆಗೆ ಹೆಚ್ಚವರಿ ರೂಟ್ ಗೆ ಬಸ್​ಗಳನ್ನು ನಿಯೋಜಿಸಲಾಗಿದೆ. ಬೆಂಗಳೂರು ನಗರಕ್ಕೆ ತುಮಕೂರು, ಹಾಸನ ಭಾಗಗಳಿಂದ ಬೆಂಗಳೂರಿಗೆ ಆಗಮಿಸುವವರು ಮಾದವಾರದಿಂದಲೇ ನೇರವಾಗಿ ಎಲೆಕ್ಟ್ರಾನಿಕ್‌ ಸಿಟಿ (Electronic City) ತಲುಪಲು ಅನುಕೂಲವಾಗಲಿದೆ.

ಬಿಎಂಟಿಸಿ ಬಸ್​ಗಳಿಲ್ಲದೇ ಪ್ರಯಾಣಿಕರು ಟೆಂಪೋ, ಆಟೋ (Auto), ಲಾರಿಗಳಲ್ಲಿ ಸಂಚಾರ ಮಾಡ್ತಿದ್ದರು. ಸದ್ಯ ಬಿಎಂಟಿಸಿ ಬಸ್ ಗಳಿಲ್ಲದೇ ತೊಂದರೆ ಅನುಭವಿಸುತ್ತಿದ್ದ ಜನರಿಗೆ ಶುಭ ಸುದ್ದಿ ಸಿಕ್ಕಿದೆ. ಇನ್ನು ಬಸ್ ಒದಗಿಸುವಂತೆ ಪ್ರಯಾಣಿಕರು ಹಲವಾರು ಬಾರಿ ಮನವಿ ಪತ್ರ ಬರೆದಿದ್ದರು. ಎಲೆಕ್ಟ್ರಾನಿಕ್ ಸಿಟಿಯಿಂದ ಮಾದವಾರ (Madavar) ಭಾಗಕ್ಕೆ ಬಿಎಂಟಿಸಿ ಬಸ್ ಸೇವೆ ಆರಂಭವಾಗಿದೆ.

ಬೆಳಗ್ಗೆ 6:40 ರಿಂದ ರಾತ್ರಿ 8 ಗಂಟೆವರೆಗೆ ಬಿಎಂಟಿಸಿ ಬಸ್ ಗಳ ಸೇವೆ ಇರಲಿದ್ದು, ನವೆಂಬರ್‌ (November) 20 ರಿಂದಲೇ ಈ ಬಸ್‌ ಸೌಲಭ್ಯ ಆರಂಭವಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ..

ಎಲೆಕ್ಟ್ರಾನಿಕ್‌ ಸಿಟಿ ಬಿಎಂಟಿಸಿ ಬಸ್‌ ನಿಲ್ದಾಣದಿಂದ ಬಸ್‌ ಹೊರಡುವ ಸಮಯ
ಬೆಳಿಗ್ಗೆ 7.10, 7.40, 8.10, 8.40, 9.10, 9.40, 10.10, 10.40, 11.10, 11.40, 12.15, 12.55, ಮಧ್ಯಾಹ್ನ 1.35, 2.05, 2.45, ಸಂಜೆ 4.00, 4.30, 5.00, 5.30, 6.00, 6.15, 6.30, 7.00, 7.30, ರಾತ್ರಿ 8.00.

ಮಾದವಾರ ಬಿಎಂಟಿಸಿ ಬಸ್‌ ನಿಲ್ದಾಣದಿಂದ ಹೊರಡುವ ಸಮಯ
ಬೆಳಿಗ್ಗೆ 6.40, 7.10, 7.40, 8.00, 8.30, 8.50, 9.20, 9.50, 10.20, 10.50, 11.40, ಮಧ್ಯಾಹ್ನ 12.10, 12.40, 1.10, 1.50, 2.30, 3.00, 3.40, ಸಂಜೆ 4.25, 4.50, 5.20, 6.00, 6.30, 7.00, 7.30, ರಾತ್ರಿ 8.00, 9.30.

ಭವ್ಯಶ್ರೀ ಆರ್.ಜೆ

Exit mobile version