ಕಳೆದುಹೋದ ವಸ್ತುಗಳಿಗಾಗಿ `ಇ-ಲಾಸ್ಟ್ʼ ಆ್ಯಪ್ನಲ್ಲಿ ವರದಿಯನ್ನು ಸಲ್ಲಿಸಬಹುದು : ಡಿಜಿಪಿ ಪ್ರವೀಣ ಸೂದ್

Bengaluru Police

ಇನ್ನು ಮುಂದೆ ಕಳೆದುಹೋದ(Lost) ಅಥವಾ ಇತರ ಕಾರಣಗಳಿಂದ ನಮ್ಮಿಂದಲೇ ಕಳೆದುಹೋದ ವಸ್ತುಗಳ ನಕಲು ಪ್ರತಿ(Duplicate Copy) ಪಡೆಯಲು ಅಥವಾ ಇತರ ಯಾವುದೇ ಉದ್ದೇಶಕ್ಕಾಗಿ ಪೊಲೀಸ್‌ ವರದಿಯನ್ನು(Police Report) ಪಡೆಯಲು ನಾವು ಪೊಲೀಸ್‌ ಠಾಣೆಗೆ(Police Station) ಭೇಟಿ ನೀಡಬೇಕಾದ ಅಗತ್ಯವಿಲ್ಲ. ಮನೆಯಲ್ಲೇ ಕುಳಿತುಕೊಂಡು, ಕರ್ನಾಟಕ ರಾಜ್ಯ ಪೊಲೀಸ್‌(Karnataka State Police) ಇಲಾಖೆ ಸಿದ್ದಪಡಿಸಿರುವ ಇ-ಲಾಸ್ಟ್(E-Lost) ಆ್ಯಪ್ನಲ್ಲಿ ನೀವು ವರದಿಯನ್ನು ಸಲ್ಲಿಸಬಹುದು ಮತ್ತು ಸ್ವಯಂಚಾಲಿತ ಡಿಜಿಟಲ್ ಸಹಿ ಮಾಡಿದ ಸ್ವೀಕೃತಿಯನ್ನು ಪಡೆಯಬಹುದು.


ಹೌದು, ಈ ಕುರಿತು ಪೊಲೀಸ್‌ ಮಹಾನಿರ್ದೇಶಕರಾದ ಪ್ರವೀಣ ಸೂದ್‌(Praveen Sood) ಟ್ವೀಟ್‌(Tweet) ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದು, ಕಳೆದುಹೋದ/ತಪ್ಪಿಹೋದ (ಕದ್ದದ್ದಲ್ಲ) ವಸ್ತುವಿಗೆ ನಕಲು/ವಿಮೆ ಇತ್ಯಾದಿಗಳನ್ನು ಪಡೆಯಲು ಪೊಲೀಸ್ ವರದಿಯ ಅಗತ್ಯವಿದೆ. ಆದರೆ ಪೊಲೀಸ್ ಠಾಣೆಗೆ ಭೇಟಿ ನೀಡುವ ಅಗತ್ಯವಿಲ್ಲ. ನಮ್ಮ ಇ-ಲಾಸ್ಟ್ ಆ್ಯಪ್ನಲ್ಲಿ ನೀವು ವರದಿಯನ್ನು ಸಲ್ಲಿಸಬಹುದು ಮತ್ತು ಸ್ವಯಂಚಾಲಿತ ಡಿಜಿಟಲ್ ಸಹಿ(Digital Sign) ಮಾಡಿದ ಸ್ವೀಕೃತಿಯನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.


ಸದ್ಯ ಯಾವುದೇ ವಸ್ತುಗಳು ಕಳೆದುಹೋದರೆ ಅದರ ಕುರಿತು ನಾವು ನೇರವಾಗಿ ಪೊಲೀಸ್‌ ಠಾಣೆಗೆ ಭೇಟಿ ನೀಡಿ. ದೂರು ದಾಖಲಿಸಿ, ದೂರಿನ ಪ್ರತಿಯನ್ನು ಪಡೆದುಕೊಳ್ಳಬೇಕಿತ್ತು. ಸಿಮ್‌ ಅಥವಾ ಮೊಬೈಲ್‌ ಕಳೆದುಹೋದರು ಕೂಡಾ ನಾವು ಪೊಲೀಸ್‌ ಠಾಣೆಗೆ ಭೇಟಿ ನೀಡಿ, ದೂರು ದಾಖಲಿಸಿ, ದೂರಿನ ಪ್ರತಿಯ ಆಧಾರದ ಮೇಲೆ ಮತ್ತೊಂದು ಸಿಮ್‌ ಪಡೆದುಕೊಳ್ಳಬಹುದಿತ್ತು. ಆದರೆ ಇದೀಗ ಮನೆಯಲ್ಲೇ ಕುಳಿತು ಇ-ಲಾಸ್ಟ್ ಆ್ಯಪ್ನಲ್ಲಿ ವರದಿಯನ್ನು ಸಲ್ಲಿಸಬಹುದು ಮತ್ತು ಸ್ವಯಂಚಾಲಿತ ಡಿಜಿಟಲ್ ಸಹಿ ಮಾಡಿದ ಸ್ವೀಕೃತಿಯನ್ನು ಪಡೆಯಬಹುದು. ಈ ಸ್ವೀಕೃತಿಯನ್ನು ಇತರೆ ಕಾರ್ಯಗಳಿಗೆ ಬಳಸಬಹುದು.

Exit mobile version