ಜಪಾನ್‌ನಲ್ಲಿ 155 ಕಡೆ ಕಂಪಿಸಿದ ಭೂಮಿ: 13ಕ್ಕೂ ಅಧಿಕ ಮಂದಿ ಸಾವು

Japan: ಜಗತ್ತಿನೆಲ್ಲೆಡೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವಾಗ ಜಪಾನ್‌ (Japan) ದೇಶ ಪ್ರಬಲ ಭೂಕಂಪಕ್ಕೆ ನಲುಗಿದ್ದು, ಬಲಿಯಾದವರ ಸಂಖ್ಯೆ ಪ್ರಸ್ತುತ 13ಕ್ಕೆ ಏರಿಕೆಯಾಗಿದೆ. ಇನ್ನು ಈ ಭೂಕಂಪಕ್ಕೆ (Earthquake) ಜಪಾನ್ ಜನರು ಬೆಚ್ಚಿಬಿದ್ದಿದ್ದು, ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೂಕಂಪದ ಮಧ್ಯೆ ಸುನಾಮಿ ಸಿಡಿಯುವ ಆತಂಕ ಹೆಚ್ಚಾಗಿದೆ.

ಉತ್ತರ ಮಧ್ಯ ಜಪಾನ್‌ನಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಿಂದ ಇಶಿಕಾವಾ, ನಿಗಾಟಾ ಮತ್ತು ಟೊಯಾಮಾ (Ishikawa, Niigata and Toyama) ಪ್ರಾಂತ್ಯಗಳ ಕರಾವಳಿ ಪ್ರದೇಶಗಳಲ್ಲಿ ಜಪಾನ್ ಹವಾಮಾನ ಸಂಸ್ಥೆ ಸುನಾಮಿ ಎಚ್ಚರಿಕೆ ನೀಡಿತ್ತು. ಸುನಾಮಿ (Tsunami) ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಇಶಿಕಾವಾ ಕರಾವಳಿಗೆ ಬೃಹದಾಕಾರದ ಸಮುದ್ರದ ಅಲೆಗಳು ಬಂದು ಅಪ್ಪಳಿಸಿತ್ತು. ಇದರಿಂದ ಜನರು ಆತಂಕರಾಗಿದ್ದು, ಜಪಾನ್ ಸರ್ಕಾರ ಕೂಡ ಕರಾವಳಿ ಪ್ರದೇಶದ ಜನರು ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿತ್ತು.

ಇನ್ನು 7.6 ತೀವ್ರತೆಯ ಭೂಕಂಪಕ್ಕೆ ಜಪಾನ್ ನಲುಗಿದ್ದು, ಸೆಂಟ್ರಲ್ ಜಪಾನ್​​ನಲ್ಲಿ 90 ನಿಮಿಷಗಳಲ್ಲಿ 4 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆ ದಾಖಲಿಸುವ 155 ಕಡೆ ಭೂಕಂಪಗಳು ಸಂಭವಿಸಿದೆ. 2011ರ ಪುಕುಶಿಮಾ ಸುನಾಮಿ ಕಹಿನೆನಪು ಮಾಸುವ ಮುನ್ನವೇ ಜಪಾನ್​​ನ ಇಶಿಕಾವಾ, ನಿಗಾಟಾ ಹಾಗೂ ಟೊಯಾಮಾ ಭೂಕಂಪ ಸಂಭವಿಸಿ ಅಪಾರ ಹಾನಿ ಉಂಟು ಮಾಡಿದೆ.

ಕರಾವಳಿ ಪ್ರದೇಶಗಳ ಕೆಲ ಕಟ್ಟಡಗಳಿಗೆ ಭೂಕಂಪದಿಂದ ಹಾನಿಯಾಗಿದ್ದು, ರಸ್ತೆಗಳು ಬಿರುಕು ಬಿಟ್ಟಿದ್ದು, ಕೆಲವೆಡೆ ಬೆಂಕಿ ಅವಘಡ ಸಂಭವಿಸಿ ಕಟ್ಟಡಗಳು ಸುಟ್ಟು ಹೋಗಿವೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾದ ಕಾರಣ ವರ್ಷದ ಮೊದಲ ದಿನವೇ ನಾಗರಿಕರು ಇಡೀ ರಾತ್ರಿ ಕತ್ತಲೆಯಲ್ಲಿ ಸಯಮ ಕಳೆಯುವಂತಾಯಿತು. ಜಪಾನ್ ಮಿಲಿಟರಿ ಬೇಸ್ (Japan Military Base) ನಲ್ಲಿ ಕನಿಷ್ಠ ಸಾವಿರಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

155 ಬಾರಿ ಕಂಪನ :
ಇಶಿಕಾವಾ, ನಿಗಾಟಾ ಮತ್ತು ಟೊಯಾಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಲ್ಲಿ 7.5 ತೀವ್ರತೆಯ ಮೊದಲ ಪ್ರಬಲ ಕಂಪನದ ಬಳಿಕ ಸುಮಾರು 155 ಭಾರಿ ಭೂಮಿ ಕಂಪಿಸಿದ್ದು, ಮೊದಲ ಆರು ಕಂಪನಗಳು ಪ್ರಬಲವಾಗಿದ್ದವು ಬಳಿಕ ಈ ಕಂಪನಗಳು ರಿಕ್ಟರ್ ಮಾಪಕದಲ್ಲಿ 6.2 ರಿಂದ 6.7ರವರೆಗೂ ಎಂದು ವರದಿಗಳು ಹೇಳಿದ್ದು, ಬಳಿಕ ಕನಿಷ್ಠ 3ರಂತೆ 140ಕ್ಕೂ ಅಧಿಕ ಕಂಪನಗಳು ಸಂಭವಿಸಿವೆ ಎಂದು ಭೂಕಂಪನ ಮಾಪನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭವ್ಯಶ್ರೀ ಆರ್ ಜೆ

Exit mobile version