ಕೇಂದ್ರ ಸರ್ಕಾರಕ್ಕೆ ಶಾಕ್ ನೀಡಿದ ಚುನಾವಣಾ ಆಯೋಗ: ವಿಕಸಿತ ಭಾರತ ವಾಟ್ಸಾಪ್ ಸಂದೇಶ ಕಳುಹಿಸದಂತೆ ಆದೇಶ

ಕೇಂದ್ರ ಸರ್ಕಾರ ಇತ್ತೀಚಿಗೆ ವಿಕ್ಷಿತ್ ಭಾರತ್ ಅಭಿಯಾನದ (Viksit Bharat Abhiyan) ಹೆಸರಿನಲ್ಲಿ ಎಲ್ಲರ ವಾಟ್ಸಾಪ್‌ಗೆ ಸಂದೇಶಗಳನ್ನ (EC Warns for Central Govt) ಕಳುಹಿಸುತ್ತಿದ್ದು,

ಇದು PDF ಫೈಲ್ ಸಹ ಒಳಗೊಂಡಿದೆ. ಕೇಂದ್ರದ ಇಲ್ಲಿಯವರೆಗಿನ ಎಲ್ಲ ಯೋಜನೆಗಳನ್ನ ಪ್ರಗತಿ ಕಾರ್ಯಗಳನ್ನ ಇದರಲ್ಲಿ ನಮೂದಿಸುವುದರ ಜೊತೆಗೆ, ಅಲ್ಲಿ ಭರ್ತಿ ಮಾಡಲು ಪ್ರತಿಕ್ರಿಯೆ,

ಸಲಹೆಗಳನ್ನ ಕೇಳುವ ಸಂದೇಶಗಳನ್ನ ಕಳುಹಿಸುತ್ತಿದೆ. ಇವುಗಳನ್ನ ಕೂಡಲೇ ನಿಲ್ಲಿಸುವಂತೆ ಚುನಾವಣಾ ಆಯೋಗ ಆದೇಶಿಸಿ ಕೇಂದ್ರ ಸರ್ಕಾರಕ್ಕೆ ಶಾಕ್ ನೀಡಿದೆ.

ಈ ಸಂದೇಶವು ನರೇಂದ್ರ ಮೋದಿ (Narendra Modi) ಸರ್ಕಾರವನ್ನು ಉತ್ತೇಜಿಸುತ್ತಿದೆ. ಎಂಬ ಕಾರಣದಿಂದ ವಾಟ್ಸಾಪ್​ನಲ್ಲಿ ವಿಕಸಿತ ಭಾರತ ಅಭಿಯಾನ ನಿಲ್ಲಿಸಲು ಸರ್ಕಾರಕ್ಕೆ ಕೇಂದ್ರ ಚುನಾವಣಾ

ಆಯೋಗ ಸೂಚನೆ ನೀಡಿದೆ. ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಜನರಿಗೆ ವಾಟ್ಸಾಪ್​ನಲ್ಲಿ ವಿಕಸಿತ ಭಾರತಕ್ಕೆ ಸಂಬಂಧಿಸಿದ ಸಂದೇಶ ರವಾನೆಯಾಗುತ್ತಿದೆ. ಈ ಸಂದೇಶವು ನರೇಂದ್ರ ಮೋದಿ

ಸರ್ಕಾರವನ್ನು ಉತ್ತೇಜಿಸುತ್ತಿದೆ ಹಾಗೂ ಸರ್ಕಾರದ ಪರವಾಗಿ (EC Warns for Central Govt) ಮತ ಹಾಕಲು ಪ್ರೇರೇಪಿಸುವ ಹಾಗಿದೆ.

ಹಾಗಾಗಿ ಕೇಂದ್ರ ಚುನಾವಣಾ ಆಯೋಗವು ತಕ್ಷಣವೇ ಜಾರಿಗೆ ಬರುವಂತೆ ಈ ಸಂದೇಶಗಳನ್ನು ಕಳುಹಿಸುವುದನ್ನು ನಿಲ್ಲಿಸುವಂತೆ ಎಲೆಕ್ಟ್ರಾನಿಕ್ಸ್ (Electronics) ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು

(MeitY) ಕೇಳಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ದೇಶದ ನಾಗರಿಕರ ಮೊಬೈಲ್ ಫೋನ್ (Mobile Phone) ಗಳಿಗೆ ಇಂತಹ ಸಂದೇಶಗಳು ರವಾನೆಯಾಗುತ್ತಿರುವುದು ತಿಳಿದು ಬಂದಿರುವುದು ಖೇದಕರ

ಎಂದು ಚುನಾವಣಾ ಆಯೋಗ ಹೇಳಿದೆ.ಮಾರ್ಚ್ 16 ರಂದು ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಪ್ರಧಾನಿ ನರೇಂದ್ರ ಮೋದಿಯವರ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಸಚಿವಾಲಯವು

ಆಯೋಗಕ್ಕೆ ಮಾಹಿತಿ ನೀಡಿದೆ.

ಇನ್ನು ಈಗಾಗಲೇ ಈ ಸಂದೇಶದ ವಿರುದ್ದ ಕಾಂಗ್ರೆಸ್ (Congress) ಮತ್ತು ತೃಣಮೂಲ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಇದು,

ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ಇದನ್ನು ಓದಿ: ಕೆಲ ಮಾಧ್ಯಮಗಳು ಮುಸ್ಲಿಮರನ್ನು ದೇಶವಿರೋಧಿಗಳಂತೆ ಬಿಂಬಿಸುತ್ತಿದೆ: ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ

Exit mobile version