2014 ರ ಮೊದಲು ರಾಜಕೀಯ ಪಕ್ಷಗಳಿಗೆ ಕಂಪನಿಗಳು ಎಷ್ಟು ಪಾವತಿಸಿವೆ ಎಂದು ಯಾರಾದರೂ ಹೇಳಬಹುದೇ? ಮೌನ ಮುರಿದ ಮೋದಿ

New Delhi: 2014ರ ಮೊದಲು ದೇಶದಲ್ಲಿರುವ ಕಂಪನಿಗಳು ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ಎಷ್ಟು ಹಣವನ್ನು ನೀಡಿವೆ ಎಂದು ಯಾರಾದರೂ ಹೇಳಲು ಸಾಧ್ಯವೇ..? 2014ರಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜಕೀಯ ಪಕ್ಷಗಳು ಸಂಗ್ರಹಿಸುವ ದೇಣಿಗೆಯ ವಿವರಗಳೇ ಇರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚುನಾವಣಾ ಬಾಂಡ್ಗಳ ಕುರಿತು ಕೇಳಿ ಬರುತ್ತಿರುವ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮಿಳು ವಾಹಿನಿಗೆ ಸಂದರ್ಶನ ನೀಡಿದ್ದು, ಸಂದರ್ಶನದಲ್ಲಿ ಚುನಾವಣಾ ಬಾಂಡ್ಗಳ ದತ್ತಾಂಶವನ್ನು ಪ್ರಕಟಿಸಿದ್ದರಿಂದ ಬಿಜೆಪಿಗೆ (BJP) ಏನಾದರೂ ಮುಜುಗರ ಉಂಟಾಗಿದೆಯೇ ಎಂಬ ಪ್ರಶ್ನೆ ಉತ್ತರಿಸಿದ ಅವರು, ನಮ್ಮ ಸರ್ಕಾರ ಜಾರಿಗೆ ತಂದಿರುವ ಚುನಾವಣಾ ಬಾಂಡ್ಗಳ ವಿರುದ್ಧ ಪ್ರತಿಭಟಿಸುವ ಜನರು ಶೀಘ್ರದಲ್ಲೇ ಪಶ್ಚಾತ್ತಾಪ ಪಡುತ್ತಾರೆ. ನಾವು ಸದಾ ಪಾರದರ್ಶಕತೆಯ ಪರವಾಗಿದ್ದೇವೆ. ನಾವು ಸಂಗ್ರಹಿಸಿರುವ ಮತ್ತು ಇತರ ಪಕ್ಷಗಳು ಸಂಗ್ರಹಿಸಿರುವ ದೇಣಿಗೆಯ ವಿವರ ಎಲ್ಲೆಡೆ ಲಭ್ಯವಿದೆ.

ದೇಶದ ಪ್ರತಿಯೊಬ್ಬ ಪ್ರಜೆಯೂ ಅದರ ವಿವರಗಳನ್ನು ನೋಡಬಹುದು. ಆದರೆ 2014ರ ಮೊದಲು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ಹಣ ನೀಡಿದ ವಿವರ ಇರಲಿಲ್ಲ. ಹೀಗಾಗಿಯೇ ನಮ್ಮ ಸರ್ಕಾರ ಚುನಾವಣಾ ಬಾಂಡ್ಗಳನ್ನು (Electoral Bond) ಪರಿಚಯಿಸಿತು. ಈ ಮೂಲಕ ಪಾರದರ್ಶಕತೆ ತಂದಿತು ಎಂದು ಅವರು ಹೇಳಿದರು.

ಚುನಾವಣಾ ಬಾಂಡ್ಗಳ ವಿಷಯದಲ್ಲಿ ನಾವು ಏನು ತಪ್ಪು ಮಾಡಿದ್ದೇವೆ ಹೇಳಿ. ನಾನು ಅದನ್ನು ಯಾಕೆ ಹಿನ್ನಡೆಯಾಗಿ ನೋಡಬೇಕು? ಬಾಂಡ್ ವಿವರಗಳನ್ನು ನೋಡಿ ಹೆಮ್ಮೆ ಪಡುವವರು ಮುದೊಂದು ದಿನ ಪಶ್ಚಾತ್ತಾಪ ಪಡುತ್ತಾರೆ ಎಂದು ನಾನು ಈಗಲೇ ದೃಢವಾಗಿ ಹೇಳುತ್ತೇನೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

ಚುನಾವಣಾ ಬಾಂಡ್ ವಿವರಗಳನ್ನು ಸುಪ್ರೀಂಕೋರ್ಟ್ (Supreme Court) ಆದೇಶದ ಹಿನ್ನಲೆ ಬಹಿರಂಗವಾದ ನಂತರ ಬಿಜೆಪಿ ಮೇಲೆ ಆರೋಪ ಕೇಳಿ ಬಂದಿತ್ತು. ದೇಶದ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ಗಳ ಮೂಲಕ ದೇಣಿಗೆ ಪಡೆದಿವೆ. ಈ ಬಗ್ಗೆ ಯಾವುದೇ ವಿಪಕ್ಷ ಮಾತನಾಡುತ್ತಿಲ್ಲ ಎಂದು ಬಿಜೆಪಿ ತಿರುಗೇಟು ನೀಡಿತ್ತು.

Exit mobile version