ವಿದ್ಯುತ್ ತಂತಿ‌ ತಗುಲಿ ಫೈಟರ್ ಸಾವು: ಲವ್ ಯೂ ರಚ್ಚು ಚಿತ್ರದ ಶೂಟಿಂಗ್ ವೇಳೆ ಅನಾಹುತ

ಬೆಂಗಳೂರು, ಆ. 09: ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ಶಾಕ್ ಹೊಡೆದು ಸಾವನ್ನಪಿದ ಘಟನೆ ರಾಮನಗರ ತಾಲೂಕಿನ ಜೋಗನ ದೊಡ್ಡಿಬಳಿ ನಡೆದಿದೆ.

ಲವ್ ಯೂ ರಚ್ಚು ಸಿನಿಮಾದ ಶೂಟಿಂಗ್ ವೇಳೆ ಸಾಹಸ ದೃಶ್ಯದ ಚಿತ್ರಿಕರಿಸುವ ಸಂದರ್ಭದಲ್ಲಿ ಕ್ರೇನ್ ಗೆ ಹೈಟೆನ್ಷನ್ ವೈಯರ್ ತಾಗಿದ ಪರಿಣಾಮ ಕ್ರೇನ್ ನಲ್ಲಿದ್ದ ಸಾಹಸ ಕಲಾವಿದ ವಿವೇಕ್ ಸ್ಥಳದಲ್ಲೇ ಅಸುನೀಗಿದ್ದಾರೆ.

ಗುರು ದೇಶಪಾಂಡೆ ನಿರ್ದೇಶನದ ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿನಯಿಸುತ್ತಿರುವ ಚಿತ್ರ ಇದಾಗಿದೆ.

Exit mobile version