ಮೈತ್ರಿ ಜೆಡಿಎಸ್ ಜೊತೆಗೆ ಆದರೆ ಒಳಒಪ್ಪಂದ ಯಾರ ಜೊತೆಗೆ ಎಂದು ಯಡಿಯೂರಪ್ಪಗೆ ಟಾಂಗ್ ನೀಡಿದ ಈಶ್ವರಪ್ಪ

Shivamogga: ದಿನದಿಂದ ದಿನಕ್ಕೆ ಲೋಕಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದ್ದು (Eshwarappa vs B S Yediyurappa) ತಮ್ಮ ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದ್ದಕ್ಕೆ

ಮುನಿಸಿಕೊಂಡು ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆಎಸ್ ಈಶ್ವರಪ್ಪ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

(B.Y Vijayendra) ವಿರುದ್ಧ (Eshwarappa vs B S Yediyurappa) ಕಿಡಿ ಕಾರಿದ್ದಾರೆ.

ಜೆಡಿಎಸ್ ಜೊತೆಗೆ ಮೈತ್ರಿ ಮುಂದುವರಿಯುತ್ತದೆಂದು ಯಡಿಯೂರಪ್ಪ (Yediyurappa) ಅವರು ಹೇಳಿದ್ದಾರೆ. ಹಾಗಿದ್ದರೆ ಒಳಒಪ್ಪಂದ ಯಾರ ಜೊತೆಗೆ ಎಂದು ಪ್ರಶ್ವಿಸಿದ್ದಾರೆ. ಇನ್ನು ತನ್ನನ್ನು ಗೊತ್ತಿಲ್ಲವೆಂದ

ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ನನ್ನ ಮನೆಗೆ ಯಾಕೆ ಬಂದಿದ್ದರು ಎಂದು ಕುಟುಕಿದ್ದಾರೆ.

ಶಿವಮೊಗ್ಗದ (Shivamogga) ತಮ್ಮ ಚುನಾವಣೆ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಎಲ್ಲವುಗಳನ್ನು ಯೋಚಿಸಿಯೇ ರಾಜಕೀಯ ಬಲಿದಾನಕ್ಕೂ ಸಿದ್ಧ ಅಂದುಕೊಂಡೇ

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಮಗನಿಗೆ ಭವಿಷ್ಯ ಸಿಗಲ್ಲ, ನನಗೂ ಭವಿಷ್ಯ ಇಲ್ಲ ಅಪ್ಪಾ ಮಕ್ಕಳ ಆಡಳಿತ ಎಂದೇ ತೀರ್ಮಾನಿಸಿ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಜನ ಕೈಹಿಡಿಯಲಿದ್ದಾರೆ.

ಇದು ಮೊದಲ ಪ್ರಯತ್ನ‌ ಗೆಲ್ಲುವ ವಿಶ್ವಾಸ ಇದೆ. ಶಿವಮೊಗ್ಗದಲ್ಲಿ ಕನಿಷ್ಠ ಒಂದು ಲಕ್ಷ ಮತಗಳಿಂದ ನಾನು ಗೆಲ್ಲುತ್ತೇನೆ.

ಇನ್ನು ಚುನಾವಣೆ ಆಯೋಗದಿಂದ ನೀಡಿರುವ ಚಿಹ್ನೆಗಳೇ ಸುಡುಗಾಡು, ಅವು ಒಂದು ಕೂಡ ಸರಿಯಿಲ್ಲ. ನನಗೆ ಯಾವ ಚಿಹ್ನೆ ಪಡೆಯಬೇಕೆಂದು ಇನ್ನೂ ನಿರ್ಧರಿಸಿಲ್ಲ. ಪಕ್ಷೇತರರಿಗೆ ಲಭ್ಯ ಇರುವ ಚಿಹ್ನೆಗಳಿಗೆ

ಅರ್ಥವೇ ಇಲ್ಲ. ಜನರಿಗೆ ಇಷ್ಟವಾಗುವುದೂ ಇಲ್ಲ ಈ ಕುರಿತು ಚುನಾವಣೆ ಆಯೋಗಕ್ಕೆ (Election Commission) ಪತ್ರ ಬರೆಯುತ್ತೇನೆ .ಕನಿಷ್ಠ ಚಿಹ್ನೆ ನೀಡುವಾಗ ಜನರೊಂದಿಗೆ ಚರ್ಚಿಸಲಿ. ಅವರ ಅಭಿಪ್ರಾಯ

ಸಂಗ್ರಹಿಸಿ  ನೀಡಲಿ ಎಂದರು.

ಅಷ್ಟಕ್ಕೇ ಸುಮ್ಮನಾಗದೆ ಅವನ್ಯಾವನ್ರಿ ವಿಜಯೇಂದ್ರ? ಮೊದಲು ಅವನು ಹಿರಿಯರಿಗೆ ಗೌರವ ಕೊಡುವುದು ಕಲಿಯಲಿ, ಅವನಿನ್ನು ಎಳೆಸು ,ಅವನು ಯಾವ ಹೋರಾಟದಲ್ಲಿ ಪಾಲ್ಗೊಂಡಿದ್ದಾನೆ ಎಂದು ಅಷ್ಟೊಂದು

ಹಾರಾಟ ಮಾಡುತ್ತಾನೆ. ಅವರ ತಂದೆ ಮಾಡಿದ ಹೋರಾಟದ ಫಲವಾಗಿ ಅವನಿಗೆ ರಾಜ್ಯಾಧ್ಯಕ್ಷ ಸ್ಥಾನ ಲಭಿಸಿದೆ. ಅದಕ್ಕೂ ವಾರಗಟ್ಟಲೇ ದಿಲ್ಲಿಯಲ್ಲಿ ಠಿಕಾಣಿ ಹೂಡಿದ್ದರು ಎಲ್ಲ ನನಗೆ ತಿಳಿದಿದೆ.ತಾಕತ್ತಿದ್ದರೆ

ವಿಜಯೇಂದ್ರನೂ ಇದರ ಬಗ್ಗೆ ಮಾತಾಡ್ಲಿ ನೋಡೋಣ.

ಶೇ.70 ಬಿಜೆಪಿ (BJP) ಕಾರ್ಯಕರ್ತರು ನನ್ನ ಜತೆಗಿದ್ದಾರೆ. ಅಭಿವೃದ್ಧಿ ಮಾಡೇ ಮಾಡುತ್ತೇನೆ. ಅದು ಜನರಿಗೂ ಗೊತ್ತಿದೆ. ಹೀಗಾಗಿಯೇ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ.‌ ಮಾಡುವುದೂ ಇಲ್ಲ.

ಸುಳ್ಳು ಭರವಸೆ ನೀಡಲ್ಲ. ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ; ದಾವಣಗೆರೆಯಲ್ಲಿ ಕೈ ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್ ʼಕುರುಬಾಸ್ತ್ರʼ ; ಕೈ ಕಂಗಾಲು..?!

Exit mobile version