“ಮುರುಗೇಶ್‌ ನಿರಾಣಿ ಪೇಮಂಟ್‌ ಕೋಟಾದಲ್ಲಿ ಮಂತ್ರಿಯಾದವರು” : ಬಸವನಗೌಡ ಯತ್ನಾಳ್‌

Bengaluru : ಮುರುಗೇಶ್‌ ನಿರಾಣಿ (explosive statement about Murugeshnirani) ಪೇಮಂಟ್‌ ಕೋಟಾದಲ್ಲಿ ಮಂತ್ರಿಯಾದವರು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ತಮ್ಮ ಪಕ್ಷದ ವಿರುದ್ಧವೇ ಸ್ಪೋಟಕ ಹೇಳಿಕೆ ನೀಡಿರುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.ರಾಜ್ಯ ರಾಜಕೀಯದಲ್ಲಿ ದಿನೇ ದಿನೇ ಪಕ್ಷಗಳ ನಡುವೆ ಚುನಾವಣಾ ರಂಗು ಕಾವೇರುತ್ತಿದ್ದು,

ಕಾಂಗ್ರೆಸ್-ಬಿಜೆಪಿ(Bjp) ನಡುವೆ ಮಾತಿನ ಚಕಮಕಿ ತಾರಕಕ್ಕೇರಿದೆ. ರಾಜ್ಯ ಕಾಂಗ್ರೆಸ್‌ (Congress), ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಪಟ್ಟಿ ಮಾಡಿ ವಾಗ್ವಾದ ನಡೆಸುತ್ತಿದೆ.

ಈ ಮಧ್ಯೆ ಮೀಸಲಾತಿ ವಿಚಾರವಾಗಿ ಭಾರಿ ಚರ್ಚೆ ನಡೆಸಿದ ಕಾಂಗ್ರೆಸ್‌, ಬಿಜೆಪಿ ಸರ್ಕಾರದ (explosive statement about Murugeshnirani) ವಿರುದ್ಧ ಕಿಡಿಕಾರಿತು.

ರಾಜ್ಯ ಕಾಂಗ್ರೆಸ್‌ ಸರಣಿ ಟ್ವೀಟ್‌ ಮೂಲಕ ಬಿಜೆಪಿ ಪಕ್ಷದ ಹಗರಣಗಳನ್ನು ಚುನಾವಣಾ ಸಲುವಾಗಿ ಬೆಂಬಿಡದೆ ಮುನ್ನೆಲೆಗೆ ತಂದು ಪ್ರಶ್ನಿಸುತ್ತಿರುವ ವೇಳೆಗೆ ಸರಿಯಾಗಿ, ಬಿಜೆಪಿ ಪಕ್ಷದ ಶಾಸಕರಾದ ಬಸವನಗೌಡ ಪಾಟೀಲ್‌ ಯತ್ನಾಳ್‌ (Basavana gowda patil yathnal) ನೀಡಿರುವ ಹೇಳಿಕೆ, ಕಾಂಗ್ರೆಸ್‌ಗೆ ವೈದ್ಯ ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದು ಹಾಲು ಅನ್ನ ಎಂಬಂತಾಗಿದೆ.

http://ಇದನ್ನೂ ನೋಡಿ:https://fb.watch/hxlS7UCah0/

ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ತಮ್ಮ ಪಕ್ಷದೊಳಗೆ ಭಿನ್ನಭಿಪ್ರಾಯ ಏಳುವಂತ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಸಚಿವ ಮುರುಗೇಶ್‌ ನಿರಾಣಿ ಪೇಮಂಟ್‌ ಕೋಟಾದಲ್ಲಿ(Payment quota) ಮಂತ್ರಿಯಾದವರು ಎಂದು ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆಯನ್ನು ಪ್ರತ್ಯೇಕವಾಗಿ ಗುರಿಯಾಗಿಸಿಕೊಂಡು ಪ್ರಶ್ನಿಸಿದ ರಾಜ್ಯ ಕಾಂಗ್ರೆಸ್, ನಿರಾಣಿಯವರು #ಪೇಸಿಎಂ ಮಾಡಿದಾರಾ? #ಪೇಪಿಎಂ ಮಾಡಿದಾರಾ? ಯಾರಿಗೆ? ಎಷ್ಟು ಹಣ ನೀಡಿದ್ದಾರೆ?

ಬಿಜೆಪಿಯಲ್ಲಿ ಎಲ್ಲವೂ ಪೇಮೆಂಟ್‌ ಆಧಾರದಲ್ಲಿಯೇ ನಡೆಯುತ್ತಿರುವುದು ಎಂಬುದು ಇತ್ತೀಚಿನ ಬಿಜೆಪಿ vs ಬಿಜೆಪಿ ಕಿತ್ತಾಟದಲ್ಲಿ ಹೊರಬರುತ್ತಿದೆ.

http://ಇದನ್ನೂ ಓದಿ:https://vijayatimes.com/cbi-raid-on-dkc-2/

ಆದ್ರೆ, ತನಿಖೆ ಮಾತ್ರ ಇಲ್ಲ ಯಾಕೆ? ಎಂದು ಟ್ವೀಟ್‌ ಮೂಲಕ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಹಿಂದೆಯೂ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಇದೇ ರೀತಿ ತಮ್ಮ ಪಕ್ಷದ ವಿರುದ್ಧವೇ ಭಿನ್ನ ಹೇಳಿಕೆ ನೀಡಿದ್ದರು! ಆ ಹೇಳಿಕೆ ಕೂಡ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಗೊಂದಲಗಳನ್ನು ಉಂಟು ಮಾಡಿತ್ತು.

ಸದ್ಯ ಇದೀಗ ಅದೇ ಸಾಲಿನಲ್ಲಿ ಮತ್ತೊಂದು ಸ್ಪೋಟಕ ಹೇಳಿಕೆ ಹೊರಬಂದಿರುವುದು, ರಾಜ್ಯ ಬಿಜೆಪಿ ಪಕ್ಷಕ್ಕೆ ಮುಳುವಾಗಿದೆ.

ವಿಪಕ್ಷ ಕಾಂಗ್ರೆಸ್‌ಗೆ ತಾವು ಬಯಸಿದ ಊಟ ತಮ್ಮ ಬಾಯಿಗೆ ಇಟ್ಟಂತಾಗಿದೆ ಎಂದೇ ಹೇಳಬಹುದು.

Exit mobile version