ನಾಳೆ ಕಕ್ಷೆಗೆ ಹಾರಲಿದೆ “ಐ ಇನ್ ದಿ ಸ್ಕೈ” ಉಪಗ್ರಹ

ಆಂಧ್ರಪ್ರದೇಶ, ಆ. 11: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವದ ಯೋಜನೆಯಾದ ಐ ಇನ್ ದಿ ಸ್ಕೈ ಉಪಗ್ರಹ ನಾಳೆ ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಸಂಸ್ಥೆಯಿಂದ ಉಡಾವಣೆಗೊಳ್ಳಲಿದೆ.

ಆಂಧ್ರಪ್ರದೇಶದ ಶ್ರೀಹರಿ ಕೋಟಾದಿಂದ ನಾಳೆ ಬೆಳಗ್ಗೆ 4.30ಕ್ಕೆ ಜೆಎಸ್ಎಲ್ವಿ ಎಫ್ 10, ಇಓಎಸ್ 03 ಮಿಷನ್ ಐ ಎನ್ ದಿ ಸ್ಕೈ ಉಪಗ್ರಹವನ್ನು ಕಕ್ಷೆಗೆ ಸೇರಿಸಿಲಿದೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಉಪಗ್ರಹ ಉಡಾವಣೆಯಾಗಲಿದ್ದು ಈ ಉಪಗ್ರಹ ಉಡಾವಣೆಯನ್ನು ಇಡೀ ದೇಶವೆ ಎದುರು ನೋಡುತ್ತಿದೆ ಎಂದು ಇಸ್ರೋ ತಿಳಿಸಿದೆ.

ಈ ಉಪಗ್ರಹವು ನಿರ್ದಿಷ್ಟ ಸ್ಥಳಗಳ ಮೇಲೆ ಕಣ್ಗಾವಲಿಡಲು ಸಹಕಾರಿಯಾಗಲಿದೆ ಜೊತೆಗೆ ನೈಸರ್ಗಿಕ ವಿಕೋಪಗಳ ಮುನ್ಸೂಚನೆ ನೀಡುವ ಕುರಿತು ಕೂಡ ಕೆಲಸ ಮಾಡಲಿದೆ ಮತ್ತು ಕೃಷಿ, ಗಣಿಗಾರಿಕೆ, ಅರಣ್ಯದ ವಿಶೇಷ ಚಿತ್ರಗಳನ್ನು ಕಳಿಸಲು ಕೂಡ ಇದು ಸಹಕಾರಿಯಾಗಲಿದೆ  ಎಂದು ಇಸ್ರೋ ತಿಳಿಸಿದೆ.

Exit mobile version