ರೈತರನ್ನು ಭಿಕ್ಷುಕರನ್ನಾಗಿಸಿದೆ ಫಸಲ್ ಭೀಮಾ ಯೋಜನೆ: ರೈತ ಮುಖಂಡರ ಆಕ್ರೋಶ

Koppala : ಫಸಲ್ ಭೀಮಾ ಯೋಜನೆ (Fasal Bima Yojana) ರೈತರನ್ನು ಭಿಕ್ಷುಕರನ್ನಾಗಿಸಿದೆ ! ರೈತರಿಂದ ಹಣ ಹಾಕಿಸಿ, ರೈತರಿಗೇ ಮೋಸ ಮಾಡ್ತಿದೆ ಸರ್ಕಾರ. ವಿಮಾ ಕಂಪೆನಿಗಳಿಗೆ (Insurance company) ಲಾಭ ಮಾಡುವ ಉದ್ದೇಶದಿಂದ ಈ ಫಸಲ್ ಭೀಮಾ ಯೋಜನೆ (Fasal Bima Yojana) ಜಾರಿಗೆ ತರಲಾಗಿದೆ ಎಂದು ಕೊಪ್ಪಳ ರೈತ ಸಂಘ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಕೊಪ್ಪಳ ಜಿಲ್ಲಾಧ್ಯಂತ ಫಸಲು ಭೀಮಾ ಯೋಜನೆ ರೈತರಿಗೆ ಕಡಿಮೆ ಹಣ ಹಾಕಿ ರೈತರನ್ನು ನಿರಾಸೆ ಮಾಡಿದೆ.

ಉತ್ತರ ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ ಅಡಿಯಲ್ಲಿ ರೈತರು ತುಂಬಿದ ಬೆಳೆವಿಮೆ ಹಣ (Fasal Bima Yojana) ವಿಮಾ ಕಂಪನಿಗೆ ಕೋಟ್ಯಂತರ ರೂಪಾಯಿ

ಲಾಭ ಆದರು ಕೂಡ ಬೆಳೆವಿಮಾ ಕಂಪನಿಯವರು ರೈತರ ಖಾತೆಗೆ ಐವತ್ತು ರೂಪಾಯಿಂದ ಒಂದು ನೂರು,

ಎರಡು ನೂರು ರೂಪಾಯಿ ಅಂತೆ ತಮಗೆ ಮನ ಬಂದಂತೆ ಬೆಳೆವಿಮೆ ಹಣವನ್ನು ರೈತರ ಖಾತೆಗೆ ಕಡಿಮೆ ಹಣ ಹಾಕಿ ರೈತರಿಗೆ ಮೊಸ ಮಾಡಿದ್ದಾರೆ.

ಹೌದು ರೈತರಿಗೆ ಇನ್ನುಮುಂದೆ ಮೊಸ ಮಾಡದಂತೆ ಜಿಲ್ಲಾಧ್ಯಂತ ರೈತರಿಗೆ ಫಸಲು ಭೀಮಾ ಬೆಳೆವಿಮೆ ಹಣವನ್ನು ರೈತರಿಗೆ ಹಾಕಬೇಕೆಂದು ಒತ್ತಾಯಿಸಿ

ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ (State Vice President Dandappa Rudrappa Kolur)

ಹಾಗೂ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಎಸ್. ಹೂಗಾರ ಇವರ ನೇತೃತ್ವದಲ್ಲಿ ಖಂಡಿಸಿ ಅಪಾರ ಜಿಲ್ಲಾಧಿಕಾರಿಗಳ ಕಾರ್ಯಾಲಯ,ಕೊಪ್ಪಳ ಇವರಿಗೆ ಬುಧವಾರ ಮನವಿ ಸಲ್ಲಿಸಿದರು.

ಇದನ್ನೂ ಓದಿ : https://vijayatimes.com/12-lakh-fine-on-sanju-samson/

ಅದಕ್ಕಾಗಿ ಸರ್ಕಾರದ ಅಧಿಕಾರಿಗಳು ಈ ವಿಮಾ ಕಂಪನಿಯವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು .

ರೈತರಿಗೆ2018ರಿಂದ2023ವರಿಗೂ ಬೆಳೆವಿಮೆ ಬಂದಿರುವುದಿಲ್ಲ ರೈತರಿಗೆ ಯಾವ ವರ್ಷದ ಬೆಳೆವಿಮೆ ಬಂದಿಲ್ಲ

ಯಾವ ವರ್ಷದ ಬೆಳೆವಿಮೆ ಬೆಂದಿದೆ ಎಂದು ಸರ್ಕಾರದ ಅಧಿಕಾರಿಗಳು ಇದನ್ನು ಪರಿಶೀಲಿಸಿ ಎಲ್ಲಾ ಬೆಳೆವಿಮೆ ಹಣವನ್ನು ರೈತರಿಗೆ ಮೊಸ ಮಾಡದಂತೆ ರೈತರ ಖಾತೆಗೆ ಶೀಘ್ರದಲ್ಲಿ ಹಾಕಬೇಕೆಂದು ಮಲ್ಲಿಕಾರ್ಜುನಯ್ಯ ಗುತ್ತೂರು ಇವರು ತಿಳಿಸಿದರು

ಕುಕನೂರು ತಾಲ್ಲೂಕಿನ ಯರೇಹಂಚಿನಾಳ ಬಿನ್ನಾಳ ಸಿದ್ನಕೊಪ್ಪ ಮಂಡಲಗೇರಿ ರಾಜೂರು ಅನೇಕ ಪಂಚಾಯಿತಿ

ಸೇರಿದಂತೆ ಶೀರೂರ ಗ್ರಾಮ ಪಂಚಯತಿ ವ್ಯಾಪ್ತಿಗೆ ಬರುವ ಬೆದಪಟ್ಟಿ ಚಂಡೂರು, ಅರಕೇರಿ, ಯಡಿಯಾರ, ಸೇರಿದಂತೆ ಅನೇಕ ಗ್ರಾಮದ ರೈತರಿಗೆ ಫಸಲ್ ಭೀಮಾ ಯೋಜನೆ ಮೊಸ ಮಾಡಿದ್ದಾರೆ ಎಂದು ಮಹೆಶಪ್ಪ ಹಡಪದ ತಿಳಿಸಿದರು

Exit mobile version