ತೈಲ ತೆರಿಗೆ ಹಣ ಎಲ್ಲೋಯ್ತು? ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರ ಕೊಟ್ಟ ಸಚಿವೆ ನಿರ್ಮಲಾ ಸೀತಾರಾಮನ್!

finance minister

ವಿಶ್ವದಾದ್ಯಂತ(Worldwide) ತೈಲ(Oil) ಬೆಲೆ ಏರಿಕೆ ಕಾಣುತ್ತಿದೆ. ರಷ್ಯಾ-ಉಕ್ರೇನ್(Russia-Ukraine) ಯುದ್ದ ಪ್ರಾರಂಭವಾದ ಪರಿಣಾಮ ತೈಲ ಬೆಲೆ ಮತ್ತಷ್ಟು ಹೆಚ್ಚಾಯಿತು. ಆದರೆ ಕೇಂದ್ರ ಸರ್ಕಾರ(Central Government) ಮಾತ್ರ ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸಲು ಯಾವುದೇ ಸಬ್ಸಿಡಿಯನ್ನು ನೀಡಲಿಲ್ಲ. ಕೆಲ ತಿಂಗಳ ಹಿಂದೆ ಅಲ್ಪ ತೆರಿಗೆ ಇಳಿಕೆ ಮಾಡಿದ್ದರು ಕಳೆದೆರೆಡು ವಾರಗಳಿಂದ ದೇಶದಲ್ಲಿ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ.

ಹೀಗಾಗಿ ತೈಲ ತೆರಿಗೆ ಹಣವನ್ನು ಬಿಜೆಪಿ ಸರ್ಕಾರ ಏನು ಮಾಡುತ್ತಿದೆ? ಆ ಹಣವೆಲ್ಲಾ ಎಲ್ಲಿ ಹೋಯ್ತು? ಎಂದು ಪ್ರತಿಪಕ್ಷಗಳು ಬಿಜೆಪಿ ಸರ್ಕಾರವನ್ನು ಪ್ರಶ್ನಿಸುತ್ತಿವೆ. ಇದೀಗ ಕೇಂದ್ರ ಹಣಕಾಸು ಸಚಿವೆ(Finance Minister) ನಿರ್ಮಲಾ ಸೀತಾರಾಮನ್(Nirmala Sitharaman) ಈ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ತೈಲ ತೆರಿಗೆ ಹಣವನ್ನು ಎಲ್ಲೆಲ್ಲಿ ಖರ್ಚು ಮಾಡಲಾಗಿದೆ ಮತ್ತು ಈ ಹಿಂದೆ ಕಾಂಗ್ರೆಸ್ ಸರ್ಕಾರ ಎಷ್ಟು ಖರ್ಚು ಮಾಡಿತ್ತು ಎಂಬ ವಿವರಗಳನ್ನು ನಿರ್ಮಲಾ ಸೀತಾರಾಮನ್ ಅವರು ಟ್ವೀಟ್‍ರ್‍ನಲ್ಲಿ ಪ್ರಕಟಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಈ ಹಿಂದೆ ತೈಲ ಬಾಂಡ್ ಮೂಲಕ ಮಾಡಿದ್ದ ಸಾಲದಲ್ಲಿ 93 ಸಾವಿರ ಕೋಟಿ ರೂಪಾಯಿಗಳನ್ನು ಬಿಜೆಪಿ ಸರ್ಕಾರ ಮರುಪಾವತಿ ಮಾಡಿದೆ. 2026ರೊಳಗೆ 1.48 ಲಕ್ಷ ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡುವ ಗುರಿ ಹೊಂದಲಾಗಿದೆ. ಇದೇ ವೇಳೆಯಲ್ಲಿ ಬಿಜೆಪಿ ಸರ್ಕಾರ ತೈಲ ತೆರಿಗೆಯ ಬಹುಪಾಲು ಹಣವನ್ನು ಅಭಿವೃದ್ದಿ ಮತ್ತು ಬಂಡವಾಳ ನಿರ್ಮಾಣ ಕಾರ್ಯಗಳಿಗೆ ಉಪಯೋಗಿಸಿದೆ ಎಂದಿದ್ದಾರೆ.

ಕಳೆದ 8 ವರ್ಷಗಳಲ್ಲಿ ಅಭಿವೃದ್ದಿ ಯೋಜನೆಗಳಿಗಾಗಿ 91 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಆದರೆ ಕಾಂಗ್ರೆಸ್ ಆಡಳಿತದ 10 ವರ್ಷಗಳಲ್ಲಿ 49.2 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿತ್ತು. ಸುಮಾರು ಎರಡು ಪಟ್ಟು ಹೆಚ್ಚಿನ ಹಣವನ್ನು ನಮ್ಮ ಸರ್ಕಾರ ಅಭಿವೃದ್ದಿಗೆ ವಿನಿಯೋಗಿಸಿದೆ. ಇನ್ನು 8 ವರ್ಷಗಳಲ್ಲಿ ಆಹಾರ, ತೈಲ, ರಸಗೊಬ್ಬರ ಸಬ್ಸಿಡಿಗಳಿಗಾಗಿ 24.85 ಕೋಟಿ ರೂ. ನೀಡಲಾಗಿದ್ದು, ಬಂಡವಾಳ ನಿರ್ವಹಣೆಗಾಗಿ 26.3 ಲಕ್ಷ ಕೋಟಿ ಬಳಕೆ ಮಾಡಿದೆ.

ಇನ್ನು ಕಳೆದ 8 ವರ್ಷಗಳಲ್ಲಿ ಸುಮಾರು 100 ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ತೈಲ ತೆರಿಗೆ ಮೂಲಕ ಸಂಗ್ರಹಿಸಿದೆ. ಆದರೆ ಬಹುಪಾಲು ಹಣವನ್ನು ಅಭಿವೃದ್ದಿ ಯೋಜನೆಗಳಿಗೆ ವಿನಿಯೋಗಿಸಿದೆ ಮತ್ತು ಸಂಪತ್ತು ಸೃಷ್ಟಿಸಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Exit mobile version