2023 ರಲ್ಲಿ ಆರಂಭವಾಗಲಿದೆ ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ಸೇವೆ

underwater metro

ಭಾರತದ(India) ಮೊದಲ ನೀರೊಳಗಿನ ಮೆಟ್ರೋ(Underwater Metro) ಸುರಂಗ ಮಾರ್ಗ ಪಶ್ಚಿಮ ಬಂಗಾಳ(West Bengal) ರಾಜ್ಯದಲ್ಲಿ ನಿರ್ಮಾಣವಾಗುತ್ತಿದ್ದು, ಈ ಸುರಂಗ ಮಾರ್ಗ ಹೌರಾ(Howrah) ಹಾಗೂ ಕೋಲ್ಕತ್ತಾ(Calcutta) ನಡುವೆ ಸಂಪರ್ಕವನ್ನು ಕಲ್ಪಿಸಲಿದೆ. 16.6 ಕಿ.ಮೀ ಉದ್ದದ ಸುರಂಗ ಮಾರ್ಗದ 520 ಮೀ. ನದಿ ತಳದಲ್ಲಿ ಇರಲಿದೆ. 33 ಮೀ. ನದಿಯ ತಳದ ವರೆಗೆ ಸುರಂಗವನ್ನು ನಿರ್ಮಿಸಲಾಗಿದೆ.

ಭಾರೀ ನಿರೀಕ್ಷೆಯ ಯೋಜನೆಯಾಗಿದ್ದ ಹೂಗ್ಲಿ ನದಿಯ ಕೆಳಗಿನ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ 80% ಪೂರ್ತಿಯಾಗಿದ್ದು, ಕೋಲ್ಕತಾ ಮೆಟ್ರೋ ರೈಲು ನಿಗಮವು ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಹೀಗೆ ನಿರ್ಮಿಸಲಾದ, ನೀರೊಳಗಿನ ಮೆಟ್ರೋ ಸುರಂಗ ಮಾರ್ಗದ ಯೋಜನೆಯಲ್ಲಿ ಒದಗಿಸಲಾದ ಸೌಲಭ್ಯ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಮಾತನಾಡಿದ ಸೈಟ್ ಮೇಲ್ವಿಚಾರಕ ಮಿಥುನ್ ಘೋಷ್, ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರನ್ನು ಸ್ಥಳಾಂತರಿಸಲು ಸುರಂಗಗಳಲ್ಲಿ ವಾಕ್‌ವೇಗಳು(Walkway) ಇರುತ್ತವೆ ಎಂದು ತಿಳಿಸಿದ್ದಾರೆ.

ನೀರಿನ ಸುರಂಗದ ಪ್ರದೇಶದಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ, ವಿಶೇಷ ಮಾರ್ಗದ ಮೂಲಕ ಪ್ರಯಾಣಿಕರನ್ನು ಹೊರಕ್ಕೆ ಕರೆದೊಯ್ಯಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಪ್ಯಾಸೇಜ್ ಕಾಮಗಾರಿಯನ್ನೂ ಮಾಡಲಾಗಿದೆ ಎಂದು ಮಿಥುನ್ ವಿವರಣೆ ನೀಡಿದ್ದಾರೆ. ಪೂರ್ವ-ಪಶ್ಚಿಮ ಹೌರಾ ಮೆಟ್ರೋ ನಿಲ್ದಾಣದ ಸುಮಾರು ಶೇ.80 ರಷ್ಟು ಕೆಲಸ ಪೂರ್ಣಗೊಂಡಿದ್ದು, 2023 ರಲ್ಲಿ ಪೂರ್ಣ ಪ್ರಮಾಣದ ಸೇವೆ ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಈ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಮೆಟ್ರೋ ರೈಲು ಸೌಕರ್ಯ ಪಡೆದ ಹೆಗ್ಗಳಿಕೆ ಹೊಂದಿದ್ದ ಕೋಲ್ಕತಾ,

ಈಗ ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ಸುರಂಗ ಮಾರ್ಗ ಹೊಂದಿರುವ ಮೊದಲ ರಾಜ್ಯವೆಂಬ ಮತ್ತೊಂದು ಗರಿಯನ್ನು ತನ್ನದಾಗಿಸಿಕೊಂಡಿದೆ.

Exit mobile version