ವಿಮಾನ ನಿಲ್ದಾಣದಲ್ಲೇ ಗುಂಡು ಹಾರಿಸಿದ ತಾಲಿಬಾನ್‌ ಸಂಘಟನೆ: ಐವರ ಸಾವು

ಕಾಬೂಲ್, ಆ. 16: ತಾಲಿಬಾನ್ ಉಗ್ರಗಾಮಿಗಳ ಆಡಳಿತಕ್ಕೆ ಬೆದರಿ ಅಫ್ಘಾನಿಸ್ತಾನದಿಂದ ಬೇರೆ ದೇಶಗಳಿಗೆ ಹೋಗಲು ಕಾಬೂಲು ಅಂತರಾಷ್ಟ್ರೀಯ ವಿಮಾನ ಜನಸ್ತೋಮಕ್ಕೆ ವಿಮಾನ ನಿಲ್ದಾಣದಲ್ಲಿ ನೂಕು ನೂಗ್ಗಲು ಉಂಟಾಗಿದ್ದು, ಈ ಸಮಯದಲ್ಲೇ ಗುಂಡಿನ ದಾಳಿ ನಡೆದಿದ್ದು ಈ ದಾಳಿಯಲ್ಲಿ 5 ಜನ ಮೃತಪಟ್ಟಿದ್ದಾರೆ.

ತಾಲಿಬಾನಿಗಳ ಉಗ್ರ ಕಾನೂನುಗಳ ಹಿನ್ನಲೆಯಲ್ಲಿ ದೇಶ ಬಿಟ್ಟು ಪಲಾಯನಗೈಯಲು ಸಾವಿರಾರು ಮಂದಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆ ಸಮಯದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಅಮೆರಿಕ ಪಡೆ ಗುಂಡಿನದಾಳಿ ನಡೆಸಿದೆ. ಆ ದಾಳಿಯಿಂದಲೋ ಅಥವಾ ಕಾಲ್ತುಳಿತದಿಂದ ಸಾವನ್ನಪಿರುವುದರ ಬಗ್ಗೆ ಸಪ್ಟವಾಗಿಲ್ಲ.

ಅಫ್ಘಾನಿಸ್ತಾನದ ಹೈಮೀದ್ ಕರ್ಜೈ ವಿಮಾನ ನಿಲ್ದಾಣವೂ ಕೂಡ ಇಗಾಗಲೇ ಬಂದ್ ಆಗಿದ್ದರ ಪರಿಣಾಮ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೂಕುನುಗ್ಗಲು ಉಂಟಾಗಿದೆ.

Exit mobile version