ಕರ್ನಲ್ ಶ್ರೇಣಿಗೆ ಬಡ್ತಿ ಪಡೆದ ಐವರು ಮಹಿಳಾ ಸೈನಾಧಿಕಾರಿಗಳು

ನವದೆಹಲಿ  ಆ 23 : ಭಾರತೀಯ ಸೈನ್ಯದಲ್ಲಿ 26 ವರ್ಷಗಳ ಕಾಲ ಗಣನೀಯ ಸೇವೆ ಸಲ್ಲಿಸಿದ್ದಕ್ಕಾಗಿ ಐವರು ಮಹಿಳಾ ಕಮಾಂಡೋಗಳಿಗೆ ಭಾರತೀಯ ಸೇನೆ ಕರ್ನಲ್ ಶ್ರೇಣಿಗೆ ಬಡ್ತಿ ನೀಡಿದೆ.

ಮೊದಲ ಬಾರಿಗೆ ಎಲೆಕ್ಟ್ರಾನಿಕ್ಸ್‌ ಮತ್ತು ಮೆಕಾನಿಕಲ್‌ ಇಂಜಿನಿಯರ್‌ಗಳ ವಿಭಾಗ ಹಾಗೂ ಇಂಜಿನಿಯರ್‌ಗಳ ವಿಭಾಗದಲ್ಲಿ ಮತ್ತು ಸಂಕೇತದಳದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕರ್ನಲ್ ಹುದ್ದೆ ಲಭಿಸಿದ್ದು, ಇದು ಮಹಿಳೆಯರಿಗೆ ಸಂದ ಅತಿ ದೊಡ್ಡ ಗೌರವವಾಗಿದೆ.  ಇದಕ್ಕೂ ಮೊದಲು ಕರ್ನಲ್ ಹುದ್ದೆ ಕೇವಲ ಸೇನಾ ವೈದ್ಯಕೀಯ ದಳ, ಜಡ್ಜ್‌ ಅಡ್ವೋಕೇಟ್ ಜನರಲ್ ಮತ್ತು ಸೇನಾ ಶಿಕ್ಷಣ ದಳದವರಿಗೆ ಮಾತ್ರವೇ ಲಭಿಸುತ್ತಿತ್ತು. ಆದರೆ ಇದೀಗ ಬೇರೆ ಕ್ಷೇತ್ರಗಳನ್ನು ಪರಿಗಣಿಸುತ್ತಿರುವುದು ಮಹಿಳಾ ಅಧಿಕಾರಿಗಳಿಗೆ ಮತ್ತಷ್ಟು ಉತ್ತೇಜನವನ್ನು ನೀಡಿದೆ.

ಕರ್ನಲ್ ಶ್ರೇಣಿಗೆ ಬಡ್ತಿ ಪಡೆದ ಮಹಿಳಾ ಅಧಿಕಾರಿಗಳು  

Exit mobile version