ಉತ್ತರ ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು: ಒಂದು ಕೆ.ಜಿ ಬಾಳೆಹಣ್ಣು 3.300 ರೂ

ಉತ್ತರ ಕೊರಿಯಾ,ಜೂ.21 ಉತ್ತರ ಕೊರಿಯಾ ತೀವ್ರ ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿದ್ದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದೆ.

ಕಳೆದ ವಷ೯ ಚಂಡಮಾರುತದಿಂದ ಉಂಟಾದ ಹಾನಿಯಿಂದಾಗಿ ಕೃಷಿ ವಲಯವು ತನ್ನ ಉತ್ಪದನಾ ಯೋಜನೆಯನ್ಜು ಪೂರೈಸಲು ವಿಫಲವಾದ ಕಾರಣ ಜನರ ಆಹಾರ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಉತ್ತರ ಕೊರಿಯಾದ ಸವೋ೯ಚ್ಚ ನಾಯಕ ಕಿಮ್‌ ಜೊಂಗ್ ಉನ್‌ ದೇಶದ ಆಡಳಿತ ಪಕ್ಷದ ಕೇಂದ್ರ ಸಮಿತಿಯ ಸಭೆಯಲ್ಲಿ ತಿಳಿಸಿದ್ದಾರೆ.

ವರದಿಯ ಪ್ರಕಾರ ಉತ್ತರ ಕೊರಿಯಾದ ರಾಜಧಾನಿ ಪ್ಯೊಂಗ್ಯಾಂಗ್‌ನಲ್ಲಿ ಅಗತ್ಯ ಆಹಾರ ಪದಾಥ೯ಗಳ ಬೆಲೆ ಗಗನಕ್ಕೆರಿದೆ. ಒಂದು ಕೆ.ಜಿ ಬಾಳೆಹಣ್ಣು $45 (ಸುಮಾರು 3,335 ರೂ.) ಒಂದು ಕಪ್ಪು ಚಹಾ $70  (ಸುಮಾರು 5,190 ರೂ.) ಮತ್ತು ಒಂದು ಪ್ಯಾಕೆಟ್‌ ಕಾಫಿ $100 (ಸುಮಾರು 7,414 ರೂ.)

ಯುಎನ್‌ನ ಆಹಾರ ಮತ್ತು ಕೃಷಿ ಸಂಸ್ಥೆಯ ಇತ್ತೀಚಿನ ವರದಿ ಪ್ರಕಾರ, ಉತ್ತರ ಕೊರಿಯಾ 8,60,000 ಟನ್ ಆಹಾರದ ಕೊರತೆಯನ್ನು ಎದುರಿಸುತ್ತಿದೆ. ಇಂಧನ ಮತ್ತು ಆಹಾರ ಸೇರಿದಂತೆ ಉತ್ಪಾದಿಸಲಾಗದ ಅನೇಕ ವಸ್ತುಗಳಿಗೆ ಕೊರಿಯಾ ಚೀನಾವನ್ನು ಅವಲಂಬಿಸಿತು. ಆದರೆ ಕೊರೊನಾ ಕಾರಣದಿಂದಾಗಿ ದೇಶದ ಗಡಿಗಳು ಮುಚ್ಚಲ್ಪಟ್ಟಿದ್ದು ಎಲ್ಲಾ ರೀತಿಯ  ಆಮದು-ರಫ್ತು ಸೇವೆಗಳು ಸ್ಥಗಿತಗೊಂಡಿದೆ. ಇದೇ ಆಹಾರ ಬಿಕ್ಕಟ್ಟಿಗೆ  ಮುಖ್ಯ ಕಾರಣ ಎಂದಿದ್ದಾರೆ.

Exit mobile version