ಪುಡ್ ಡೆಲಿವರಿ ಮಾಡಲು 30,000 ಕಿ.ಮೀ ಪ್ರಯಾಣಿಸಿದ ಮಹಿಳೆ ; ವೀಡಿಯೋ ವೈರಲ್

Antartica : ಇಂದಿನ ದಿನಗಳಲ್ಲಿ ಅದರಲ್ಲೂ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕೆಲಸಕ್ಕೆ ಹೋಗುವ(Food Delivered To 30K KM) ಅನೇಕರು ಆನ್ಲೈನ್ನಲ್ಲಿ ತಮಗೆ ಬೇಕಾದ ಆಹಾರವನ್ನು ಆರ್ಡರ್ ಮಾಡಿಕೊಂಡು ತಿನ್ನುತ್ತಾರೆ.

ಕೆಲಸಕ್ಕೆ ಹೋಗುವ ಅನೇಕರಲ್ಲಿ ಐಟಿ-ಬಿಟಿ ಸೆಂಟರ್ಗಳಲ್ಲಿ ಕೆಲಸ ಮಾಡುವವರೇ ಹೆಚ್ಚು ಆರ್ಡರ್ ಮಾಡಿ ಸೇವಿಸುತ್ತಾರೆ.

ಆನ್ಲೈನ್ ನಲ್ಲಿ ತಮಗೆ ಬೇಕಾದ ಆಹಾರವನ್ನು ಸುಲಭವಾಗಿ ಕುಳಿತಲ್ಲಿ ಆರ್ಡರ್ ಮಾಡುವ ಗ್ರಾಹಕರಿಗೆ,

ಕೊಟ್ಟ ನಿರ್ದಿಷ್ಟ ಸಮಯದೊಳಗೆ ಆಹಾರ ತಲುಪಿಸುವಲ್ಲಿ ಪುಡ್ ಡೆಲಿವರಿ(Food Delivery) ಏಜೆಂಟ್ಗಳು ಹೆಚ್ಚು ಶ್ರಮ ವಹಿಸುತ್ತಾರೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರವೇ!

ನಮ್ಮ ಆರ್ಡರ್‌ಗಳನ್ನು ನಮಗೆ ತಂದುಕೊಡಲು ಡೆಲಿವರಿ ಬಾಯ್ಸ್ ಅದೆಷ್ಟೋ ದೂರದ ನಗರದಿಂದ ಪ್ರಯಾಣಿಸುವುದನ್ನು ನಾವು ದಿನನಿತ್ಯ ನೋಡುತ್ತೀವಿ.

ಸದ್ಯ ಅದೇ ರೀತಿ ಇಲ್ಲೊಬ್ಬರು ತಮ್ಮ ಗ್ರಾಹಕರೊಬ್ಬರು ಆರ್ಡರ್ ಮಾಡಿದ ಆಹಾರವನ್ನು ತಲುಪಿಸಲು 30,000 ಕಿ.ಮೀ ಪ್ರಯಾಣಿಸಿದ್ದಾರೆ!

ಇದನ್ನೂ ಓದಿ : https://vijayatimes.com/kaushal-kishore-statement/

ಆಹಾರ ತಲುಪಿಸಲು 30,000 ಕಿಲೋಮೀಟರ್‌ಗಳಷ್ಟು ಹೋಗಿರುವ ಬಗ್ಗೆ ಈ ಹಿಂದೆ ಎಲ್ಲಾದರೂ ನೀವು ಕೇಳಿದ್ದೀರಾ? ನಿಜಕ್ಕೂ ಇಲ್ಲ. ಆದ್ರೆ, ಇವರ ಡೆಲಿವರಿ ಬಗ್ಗೆ ಕೇಳಲು ಮಾತ್ರ ಹೆಚ್ಚು ಆಸಕ್ತಿದಾಯಕವಾಗಿದೆ.

ಹೌದು, Instagram ನಲ್ಲಿ @nomadobudget ಎಂಬ ಮಹಿಳೆ ಹಂಚಿಕೊಂಡ ವೀಡಿಯೊದಲ್ಲಿ,

ಅವರು ಸಿಂಗಾಪುರದಿಂದ(Singapore) ಅಂಟಾರ್ಟಿಕಾದವರೆಗೆ ಪ್ರಯಾಣಿಸಿ ತಮ್ಮ ಗ್ರಾಹಕರು ಕೊಟ್ಟ ಆರ್ಡರ್ ಅನ್ನು ತಲುಪಿಸಿದ್ದಾರೆ.

ಈ ಬಗ್ಗೆ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ತಮ್ಮ ಕೈಯಲ್ಲಿ ಆಹಾರದ ಪ್ಯಾಕೆಟ್ ಅನ್ನು ಹಿಡಿದು ವೀಡಿಯೋ ಮಾಡಿದ್ದಾರೆ.

ಸಿಂಗಾಪುರದಿಂದ ಪ್ರಯಾಣಿಸಲು ಪ್ರಾರಂಭಿಸಿದ ಅವರು ನಂತರ ಹ್ಯಾಂಬರ್ಗ್ಗೆ, ಬ್ಯೂನಸ್ ಅರೆಸ್ ಮತ್ತು ಉಶುಯಾಯಾ ತಲುಪಿ. ಕೊನೆಯದಾಗಿ ಅಂಟಾರ್ಕ್ಟಿಕಾವನ್ನು(Antartica) ಪ್ರವೇಶಿಸಿದ್ದಾರೆ.

ವೀಡಿಯೊದಲ್ಲಿ ಅವರು ಹಿಮಭರಿತ ಪ್ರದೇಶಗಳನ್ನು ದಾಟುತ್ತಿರುವುದನ್ನು ಕಾಣಬಹುದು.

https://youtu.be/LCKhdJWdt_0 ೪ ವರ್ಷಗಳಿಂದ ಅಭಿವೃದ್ಧಿ ಕಾಣದ ಬೆಂಗಳೂರಿಗೆ ಚುನಾವಣೆಯಿಂದ ಅಭಿವೃದ್ಧಿ ಭಾಗ್ಯ!

ಕಡೆಯದಾಗಿ ತಮ್ಮ ಗ್ರಾಹಕರಿಗೆ ಆಹಾರವನ್ನು ತಲುಪಿಸಿದ್ದಾರೆ ಮತ್ತು ತಮ್ಮ ಪ್ರಯಾಣವನ್ನು ಅಲ್ಲಿಗೆ ಪೂರ್ಣಗೊಳಿಸಿದ್ದಾರೆ. ಈ ವಿಡಿಯೋ ಹಂಚಿಕೊಂಡ ಅವರು, ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ,

“ಇಂದು, ನಾನು ಸಿಂಗಾಪುರದಿಂದ ಅಂಟಾರ್ಕ್ಟಿಕಾಕ್ಕೆ ಪ್ರಯಾಣಿಸಿ, ಆಹಾರ ವಿತರಣೆಯನ್ನು ಮಾಡಿದ್ದೇನೆ!

ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು @foodpandasg ಬಹಳ ಖುಷಿಯಾಗುತ್ತಿದೆ. ಸಿಂಗಾಪುರದ ರುಚಿಗಳನ್ನು ತಲುಪಿಸಲು,

30,000ಕ್ಕೂ ಅಧಿಕ ಕಿಮೀ ಮತ್ತು ನಾಲ್ಕು ಖಂಡಗಳಲ್ಲಿ ಭೂಮಿಯ ಮೇಲಿನ ಅತ್ಯಂತ ದೂರದ ಸ್ಥಳಗಳಲ್ಲಿ ಪ್ರಯಾಣಿಸಿದ್ದು, ತೃಪ್ತಿ ನೀಡಿದೆ ಎಂದು ಹೇಳಿಕೊಂಡಿದ್ದಾರೆ.

https://www.instagram.com/reel/CjUd7X2D4FO/?utm_source=ig_web_copy_link

ಈ ವೀಡಿಯೊವನ್ನು ಹಂಚಿಕೊಂಡ ಬಳಿಕ, 37,000 ಬಾರಿ ವೀಕ್ಷಿಸಲಾಗಿದೆ ಮತ್ತು 6000 ಲೈಕ್ಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ವ್ಯಕ್ತವಾಗಿದೆ.

ಕಾಮೆಂಟ್‌ನಲ್ಲಿ ಕೆಲವರು ಇದು ನಿಜಕ್ಕೂ ಅದ್ಭುತ ಎಂದು ಹೇಳಿದರೇ, ಇನ್ನು ಕೆಲವರು ಇದು ಹುಚ್ಚುತನ ಎಂದು ಹೇಳಿದ್ದಾರೆ.

Exit mobile version