25 ದಿನಗಳಲ್ಲಿ ಇದೇ ಮೊದಲ ಬಾರಿಗೆ 3 ಲಕ್ಷಕ್ಕಿತ ಕಡಿಮೆ ಕೊರೋನಾ ಪ್ರಕರಣ ಪತ್ತೆ: 25 ಗಂಟೆಯಲ್ಲಿ 4,106 ಮಂದಿ ಸಾವು

ನವದೆಹಲಿ, ಮೇ. 17: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,81,386 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 24,965,463 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ 25 ದಿನಗಳಲ್ಲಿ ಇದೇ ಮೊದಲ ಬಾರಿ 3 ಲಕ್ಷಕ್ಕಿಂತ ಕಡಿಮೆ ಕೊರೋನಾ ಸೋಂಕು ದಾಖಲಾಗಿದೆ. ಆದರೆ , ಒಂದೇ ದಿನ 4,106 ಮಂದಿಮೃತಪಟ್ಟಿದ್ದು ದೇಶದಲ್ಲಿ ಕೊವಿಡ್​ನಿಂದ ಮೃತಪಟ್ಟವರ ಸಂಖ್ಯೆ 274,390ಕ್ಕೇರಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,516,997ಕ್ಕೆ ಇಳಿದಿದೆ.

ಭಾರತದಲ್ಲಿ ಭಾನುವಾರ 15,73,515 ಮಾದರಿಗಳನ್ನು ಪರೀಕ್ಷಿಸಿದ್ದು, ಇಲ್ಲಿಯವರೆಗೆ, 31,64,23,658 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. ದೇಶದ ಪಾಸಿಟಿವಿಟಿ ದರವು ಶೇ 16.98 ಕ್ಕೆ ಇಳಿದಿದೆ.

ಕಳೆದ ಕೆಲವು ದಿನಗಳಿಂದ ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, 10 ರಾಜ್ಯಗಳಲ್ಲಿ 74.69 ರಷ್ಟು ಪ್ರಕರಣಗಳು ವರದಿ ಆಗಿದೆ ಎಂದು ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ, ರಾಜಸ್ಥಾನ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಛತ್ತೀಸಗಡದಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿ ಇದೆ.

ಏತನ್ಮಧ್ಯೆ, ದೇಶಾದ್ಯಂತ ನೀಡಲಾಗುವ ಕೋವಿಡ್ -19 ಲಸಿಕೆ ಪ್ರಮಾಣವು ದೇಶಾದ್ಯಂತ ವ್ಯಾಕ್ಸಿನೇಷನ್ ಚಾಲನೆಯ 3 ನೇ ಹಂತದ ಅಡಿಯಲ್ಲಿ ಭಾನುವಾರ 18.29 ಕೋಟಿ ದಾಟಿದೆ. ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿನ ಅಂಕಿ ಅಂಶದ ಪ್ರಕಾರ ಈವರೆಗೆ 18,29,26,460 ಡೋಸ್ ಲಸಿಕೆ ನೀಡಲಾಗಿದೆ.

Exit mobile version