ದೆಹಲಿ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ವಾಲಿಯಾ ಕೊರೊನಾ ಸೋಂಕಿನಿಂದ ಮೃತ

ದೆಹಲಿ, ಏ. 22: ಕೊರೋನಾ ಸೋಂಕಿಗೆ ತುತ್ತಾಗಿದ್ದ ದೆಹಲಿ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ವಾಲಿಯಾ, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಕೊರೊನಾ ಸೋಂಕು ತಗುಲಿದ ಬಳಿಕ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.
೭೨ ವರ್ಷದ ಎ.ಕೆ.ವಾಲಿಯಾ ವೃತ್ತಿಯಲ್ಲಿ ವೈದ್ಯರಾಗಿದ್ದವರು. ನಂತರ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದರು. ದೆಹಲಿ ವಿಧಾನಸಭೆಗೆ ನಾಲ್ಕು ಬಾರಿ ಆಯ್ಕೆ ಆಗಿ ಹೋಗಿದ್ದಾರೆ. ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿದ್ದಾಗ ಆರೋಗ್ಯ ಸಚಿವರಾಗಿ, ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

1993ರಲ್ಲಿ ಮೊದಲ ಬಾರಿಗೆ ಪೂರ್ವ ದೆಹಲಿಯ ಗೀತಾ ಕಾಲನಿಯಿಂದ ಚುನಾವಣೆಗೆ ಸ್ಪರ್ಧಿಸಿದರು. ನಂತರ ದೆಹಲಿ ಮುನ್ಸಿಪಲ್​ ಕಾರ್ಪೋರೇಶನ್​ ಚುನಾವಣೆಯಲ್ಲಿ ಹಣಕೊಟ್ಟವರಿಗೆ ಟಿಕೆಟ್ ಕೊಡಲಾಗಿದೆ ಎಂದು ಆರೋಪಿಸಿ 2017ರಲ್ಲಿ ಒಮ್ಮೆ ಕಾಂಗ್ರೆಸ್​​ನ್ನು ತೊರೆದಿದ್ದರು. ಮತ್ತೆ ಕಾಂಗ್ರೆಸ್​ ಸೇರಿದ್ದ ಎ.ಕೆ.ವಾಲಿಯಾ, 2020ರಲ್ಲಿ ಕಾಂಗ್ರೆಸ್​ನಿಂದ ಕೃಷ್ಣಾನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

Exit mobile version