ಕೇಂದ್ರದ ಮಾಜಿ ಸಚಿವ ದಿಲೀಪ್ ಗಾಂಧಿ ನಿಧನ

ಮುಂಬೈ, ಮಾ. 17: ಕೊರೊನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ದಿಲೀಪ್ ಗಾಂಧಿ ಸಾವನ್ನಪ್ಪಿದ್ದಾರೆ.ನವದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 69 ವರ್ಷದ ಗಾಂಧಿ ಅವರು ಮೃತಪಟ್ಟಿರುವುದನ್ನು ಕುಟುಂಬ ಮೂಲಗಳು ದೃಢಪಡಿಸಿವೆ.

ಅಟಲ್ ಬೀಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ಗಾಂ ಅವರಿಗೆ ಇತ್ತಿಚೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.ಸೋಂಕಿನಿಂದ ಗುಣಮುಖರಾದ ನಂತರ ಅವರು ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

1980ರಲ್ಲಿ ಕಾರ್ಪೊರೇಟರ್ ಆಗಿ ರಾಜಕೀಯಕ್ಕೆ ಬಂದಿದ್ದ ಗಾಂಧಿ ಅವರು 1999ರಿಂದ ಸತತವಾಗಿ ಮೂರು ಭಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಅದರೆ, 2019 ರ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿತ್ತು.

Exit mobile version