ಭಾರತದಲ್ಲಿನ ವಿದೇಶಿಗರಿಗೂ ಉಚಿತ ಕೊರೊನಾ ಲಸಿಕೆ

ನವದೆಹಲಿ, ಆ. 10: ಭಾರತದಲ್ಲಿನ ವಿದೇಶಿಗರೂ ಕೂಡ ಕೋವಿನ್ ಪೋರ್ಟಲ್ ನ್ಲಲಿ ನೋಂದಾಯಿಸಿದರೆ ಅಂತವರಿಗೂ ಕೂಡ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ  ಕೆಂದ್ರ ಆರೋಗ್ಯ ಸಚಿವಾಲಯ ಭಾರದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು ಕೂಡ ತಮ್ಮ ಪಾಸ್ಫೋರ್ಟ ದಾಖಲೆಯ ಮೂಲಕ ಕೋವಿನ್ ಪೋರ್ಟಲ್ ನಲ್ಲಿ ಹೆಸರನ್ನು ನೊಂದಾಯಿಸಿ ಲಸಿಕೆ ಪಡೆಯಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ಕಳೆದ ಒಂದು ತಿಂಗಳಿನಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗಿತ್ತು. ಆದರೆ ಆಗಸ್ಟ್ ಮೊದಲ ವಾರದಿಂದ ಕೊರೊನಾ ಪಾಸಿಟಿವ್ ಪ್ರಕರಗಳು ಹೆಚ್ಚುತ್ತಿದ್ದು, ದೇಶಾದ್ಯಂತ ವಿದೇಶಿಗರು ಸಾಕಷ್ಟು ಸಂಖ್ಯೆಯಲ್ಲಿದ್ದು ಅವರಿಗೆ ಸೋಂಕು ತಗುಲಿದ್ದಲ್ಲಿ ಅದು ಆ ಪ್ರದೇಶದಲ್ಲಿರು ಎಲ್ಲರಿಗೂ ಹರಡುವ ಸಾಧ್ಯತೆಯಿದ್ದು, ಅದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯ ವಿದೇಶಿಗರಿಗೂ ಉಚಿತ ಲಸಿಕೆ ಕೊಡುವ ತೀರ್ಮಾನವನ್ನು ಕೈಗೊಂಡಿದೆ.

Exit mobile version