ಚೈತ್ರಾ ಕುಂದಾಪುರ ಅರೆಸ್ಟ್‌: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಡೀಲ್ 7 ಕೋಟಿ ವಂಚನೆ ಆರೋಪ, ಸಿಸಿಬಿ ವಶಕ್ಕೆ

Bengaluru: ಹಿಂದೂಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ (Froud Case – Chaitra Kundapura) ಅವರು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಕೋಟ್ಯಾಂತರ

ರೂಪಾಯಿ ವಂಚಿಸಿರುವ ಆರೋಪದ ಅಡಿಯಲ್ಲಿ ಬೆಂಗಳೂರು (Bengaluru) ವಿಭಾಗದ ಸಿಸಿಬಿ ಪೊಲೀಸರು ಮಂಗಳವಾರ ರಾತ್ರಿ ಉಡುಪಿ ಕೃಷ್ಣ ಮಠದಿಂದ ವಶಕ್ಕೆ ಪಡೆದಿದ್ದಾರೆ ಹಾಗೂ

ಚೈತ್ರಾ ಕುಂದಾಪುರ ಸೇರಿದಂತೆ 8 ಮಂದಿಯ ವಿರುದ್ಧ ಕೂಡ ಉದ್ಯಮಿ ಗೋವಿಂದ ಪೂಜಾರಿ (Froud Case – Chaitra Kundapura) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Froud Case - Chaitra Kundapura

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರಿನ (Bainduru) ಸಮಾಜ ಸೇವಕರೊಬ್ಬರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ 7 ಕೋಟಿ ರುಪಾಯಿ ವಂಚಿಸಿರುವ

ಆರೋಪದ ಮೇಲೆ ಇವರನ್ನು ಬಂಧಿಸಲಾಗಿದ್ದು, ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ಜೊತೆಗೆ ಪ್ರಸಾದ್ (Prasad) , ಗಗನ್ ಕಡೂರು, ಪ್ರಜ್ವಲ್ ಶೆಟ್ಟಿ ಆರ್ ಎಸ್ ಧನರಾಜ್, ರಮೇಶ್

(Ramesh), ಶ್ರೀಕಾಂತ್ ನನ್ನೂ ಕೂಡಾ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೇಂದ್ರದ ನಾಯಕರು ಹಾಗೂ ಆರೆಸ್ಸೆಸ್ (RSS) ಮುಖಂಡರ ಹೆಸರಲ್ಲಿ ಚೈತ್ರಾ ಹಾಗೂ ಅವರ ಸಂಗಡಿಗರು ಈ ಮೋಸ ಮಾಡಿದ್ದು, ಆಕೆ ಹಾಗೂ ಆಕೆಯ ನಾಲ್ಕೈದು ಜನರ ತಂಡವು ಆರ್ ಎಸ್ ಎಸ್

ಪ್ರಮುಖರು ಎಂದು ನಕಲಿ ನಾಯಕರ ತಂಡವನ್ನೂ ಸೃಷ್ಟಿಮಾಡಿದ್ದರು ಎನ್ನಲಾಗಿದೆ.

ಮೋಸಕ್ಕೆ ಒಳಗಾಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ (Govinda Babu Poojari) ಅವರು ನೀಡಿರುವ ದೂರಿನಲ್ಲಿ ತಮಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದು,

ತಾವು ಮೋಸಕ್ಕೆ ಒಳಗಾಗಿರೋದು ತಿಳಿಯುತ್ತಿದ್ದನಂತೆ ಅವರು ಚೈತ್ರಾರವರಿಗೆ ನೀಡಿದ್ದ ಹಣ ಹಿಂದಿರುಗಿಸುವಂತೆ ಕೇಳಿದ್ದಾರೆ ಆದರೆ ಹಣ ಕೇಳಿದ್ದಕ್ಕೆ ಧಮ್ಕಿ ಹಾಕಲಾಗಿದೆ ಎಂದು ಹೇಳಿದ್ದಾರೆ.

ಒಂದು ವೇಳೆ ನೀವೇನಾದರೂ ಹಣ ವಾಪಸ್ ಕೇಳಲು ಮುಂದಾದರೆ ಜಡ್ಜುಗಳಿಗೆ ಹೇಳಿ ಶಾಶ್ವತವಾಗಿ ಜೈಲಿನಲ್ಲಿ ಇರಿಸುವುದಾಗಿ ಅಥವಾ ಭೂಗತ ಪಾತಕಿಗಳ ಸಂಪರ್ಕದಿಂದ ನನ್ನನ್ನು ಮಗಿಸಲು

ತಯಾರಿ ನಡೆಸಿದ್ದಾರೆ ಎಂದು ಹೇಳಲಾಗಿದೆ ಅಂತ ಉದ್ಯಮಿ ಹೇಳಿದ್ದು, ಇನ್ನು ಚೈತ್ರಾ ಕುಂದಾಪುರ ಮೋಸ ಮಾಡುವ ಉದ್ದೇಶದಿಂದಲೇ ಮೂವರನ್ನು ಕೇಂದ್ರ ನಾಯಕರು ಎಂದು ಸೃಷ್ಟಿಸಿ

ಉದ್ಯಮಿಯಿಂದ ಹಣ ಪೀಕಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೋಸಕ್ಕೆ ಒಳಗಾದ ಉದ್ಯಮಿ ಸೆಪ್ಟೆಂಬರ್ 8 ರಂದು ಚೈತ್ರಾ ಕುಂದಾಪುರ ವಿರುದ್ಧ ಬಂಡೆಪಾಳ್ಯ (Bandepalya) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, . ಈ ಪ್ರಕರಣ ಸಿಸಿಬಿಗೆ (CCB) ವರ್ಗಾವಣೆ

ಆಗಿತ್ತು. ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ನಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.

ಸದ್ಯಕ್ಕೆ ಆರೋಪಿಗಳನ್ನು ಉಡುಪಿಯಿಂದ (Udupi) ಬೆಂಗಳೂರಿಗೆ ಕರೆ ತರಲಾಗಿದ್ದು, ಸಿಸಿಬಿ ಕಚೇರಿಯಲ್ಲಿ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ.

ಇದನ್ನು ಓದಿ: ಮಂಡಿ ನೋವು – ಕೀಲು ನೋವಿಗೆ ಈ ಆಹಾರಗಳನ್ನ ಸೇವಿಸೋದು ಬೆಸ್ಟ್..!

Exit mobile version