ಬಿಡುಗಡೆಯಾದ ಮೊದಲ ವಾರದಲ್ಲಿ ‘ಗಂಧದಗುಡಿ’ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

Bengaluru : ಕಳೆದ ಶುಕ್ರವಾರದಂದು ಅಧಿಕೃತವಾಗಿ ರಾಜ್ಯಾದ್ಯಂತ ತೆರೆಕಂಡಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅಭಿನಯದ ‘ಗಂಧದಗುಡಿ’(Gandadagudi Box Office Collection) ಸಾಕ್ಷ್ಯಚಿತ್ರ ಬಿಡುಗಡೆಯಾದ ಮೊದಲ ವಾರ ಬಾಕ್ಸ್ ಆಫೀಸ್‍ನಲ್ಲಿ ಉತ್ತಮ ಗಳಿಕೆ ಕಂಡಿದೆ.

ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಸೇರಿದಂತೆ ರಾಜ್ಯಾದ್ಯಂತ ಅನೇಕ ಜನರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದು, ಎರಡನೆಯ ವಾರವು ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.

ಸಿನಿ ಪಂಡಿತರ ಲೆಕ್ಕಾಚಾರದ ಪ್ರಕಾರ, ‘ಗಂಧದಗುಡಿ’ ಚಿತ್ರ ಬಿಡುಗಡೆಯಾದ ಮೊದಲ ವಾರ (Gandadagudi Box Office Collection) ಸುಮಾರು 25 ರಿಂದ 30 ಕೋಟಿ ರೂಪಾಯಿ ಗಳಿಕೆ ಕಂಡಿದೆ ಎನ್ನಲಾಗುತ್ತಿದೆ.

ಇದೊಂದು ಸಾಕ್ಷ್ಯಚಿತ್ರವಾಗಿದ್ದು, ಈ ಚಿತ್ರ ನಿರ್ಮಾಣಕ್ಕೆ ಸುಮಾರು 2 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಾಗಿದ್ದು, ಇದೀಗ ಚಿತ್ರ ಮೊದಲ ವಾರದಲ್ಲೇ 25 ಕೋಟಿ ರೂಪಾಯಿ ಗಳಿಕೆ ಕಂಡಿದೆ.

https://vijayatimes.com/delhi-schools-closed/

ಇನ್ನು ಈ ಚಿತ್ರವನ್ನು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪಿಆರ್‍ಕೆ(PRK) ಸಂಸ್ಥೆಯ ಅಡಿಯಲ್ಲಿ ನಿರ್ಮಾಣ ಮಾಡಿದ್ದು,

https://fb.watch/gAAr14sWiy/ ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ!

ಖ್ಯಾತ ವನ್ಯಜೀವಿ ತಜ್ಞ ಅಮೋಘವರ್ಷ ಗಂಧದಗುಡಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಪ್ರತೀಕ್ ಛಾಯಾಗ್ರಹಣವಿದೆ. ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ‘ಗಂಧದಗುಡಿ’ ಸಾಕ್ಷ್ಯಚಿತ್ರವು ಕರುನಾಡಿನ ಜೀವವೈವಿಧ್ಯತೆ ಮತ್ತು ವನ್ಯಸಂಪತ್ತನ್ನು ಪರಿಚಯಿಸುತ್ತದೆ.

ಈ ಚಿತ್ರವನ್ನು ಸುಮಾರು ಎರಡು ವರ್ಷಗಳ ಕಾಲ ಕರ್ನಾಟಕದ ಅನೇಕ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಬಿಳಿಗಿರಿ ರಂಗನ ಬೆಟ್ಟ, ಗಾಜನೂರು, ಚಾಮರಾಜನಗರ, ಕಾಳಿ ಹುಲಿ ಸಂರಕ್ಷಿತ ತಾಣ, ಭದ್ರಾ ವನ್ಯಜೀವಿ ತಾಣ, ಹೊನ್ನಾವರ, ಮುರುಡೇಶ್ವರ ಕಡಲತೀರ, ಉಡುಪಿ ಮತ್ತು ಮಂಗಳೂರಿನ ಕರಾವಳಿಯಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ.

Exit mobile version