ರಾಮ್ ಲಲ್ಲಾ ವಿಗ್ರಹಕ್ಕೆ 11 ಕೋಟಿ ರೂಪಾಯಿ ಮೌಲ್ಯದ ವಜ್ರದ ಕಿರೀಟ ನೀಡಿದ ಗುಜರಾತ್ನ ವ್ಯಾಪಾರಿ

Ayodhya : ಗ್ರೀನ್ಲ್ಯಾಬ್ ಡೈಮಂಡ್ಸ್ ಮುಖ್ಯಸ್ಥರಾಗಿರುವ ಸೂರತ್ ಮೂಲದ (Gift of 11 crore gold crown) ಕೈಗಾರಿಕೋದ್ಯಮಿ ಮುಖೇಶ್ ಪಟೇಲ್ ಅವರು ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಿರುವ

ರಾಮನ ವಿಗ್ರಹಕ್ಕೆ 11 ಕೋಟಿ ರೂಪಾಯಿ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಿರೀಟವನ್ನು ರಾಮ ಲಲ್ಲಾ (Ram Lalla) ದೇವರಿಗಾಗಿ ವಿಶೇಷವಾಗಿ ರಚಿಸಲಾಗಿದೆ.

ಇನ್ನು ಮುಕೇಶ್ ಪಟೇಲ್ (Mukesh Patel) ಅವರು ತಮ್ಮ ಕುಟುಂಬದೊಂದಿಗೆ ಖುದ್ದಾಗಿ ಅಯೋಧ್ಯೆಗೆ ಭೇಟಿ ನೀಡಿ ದೇವಾಲಯದ ಟ್ರಸ್ಟ್ ಅಧಿಕಾರಿಗಳಿಗೆ ನಿಖರವಾಗಿ ರಚಿಸಲಾದ ಕಿರೀಟವನ್ನು ಅರ್ಪಿಸಿದರು.

ರಾಮಮಂದಿರದ ಪ್ರಧಾನ ಅರ್ಚಕರು ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ (Sri Ram Janmabhoomi Teertha Kshetra Trust) ಟ್ರಸ್ಟಿಗಳ ಉಪಸ್ಥಿತಿಯಲ್ಲಿ, ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ

ಮುಖೇಶ್ ಪಟೇಲ್ ಅವರು ಕಿರೀಟವನ್ನು (Gift of 11 crore gold crown) ಹಸ್ತಾಂತರಿಸಿದರು.

ವಿಶ್ವ ಹಿಂದೂ ಪರಿಷತ್ತಿನ (Vishwa Hindu Parishad) ರಾಷ್ಟ್ರೀಯ ಖಜಾಂಚಿ ದಿನೇಶ್ ಭಾಯಿ ನವಿಯಾ ಅವರು, ದೇವಾಲಯದಲ್ಲಿ ಸ್ಥಾಪಿಸಲಾದ ಭಗವಾನ್ ರಾಮನ ವಿಗ್ರಹಕ್ಕೆ ಮುಕೇಶ್ ಪಟೇಲ್ ಕೂಡ

ಕೆಲವು ಆಭರಣಗಳನ್ನು ನೀಡಿದ್ದಾರೆ ಎಂದು ಬಹಿರಂಗಪಡಿಸಿದರು. ಕಿರೀಟವು ವಿವಿಧ ಗಾತ್ರದ ವಜ್ರಗಳು, ಮಾಣಿಕ್ಯಗಳು, ಮುತ್ತುಗಳು ಮತ್ತು ನೀಲಮಣಿಗಳ ಜೊತೆಗೆ 4 ಕಿಲೋಗ್ರಾಂಗಳಷ್ಟು ಚಿನ್ನವನ್ನು ಒಳಗೊಂಡಿದೆ.

2.51 ಕೋಟಿ ದೇಣಿಗೆ ನೀಡಿದ ಅಂಬಾನಿ :
ಉದ್ಯಮಿ ಮುಕೇಶ್ ಅಂಬಾನಿ ಅವರು ಅಯೋಧ್ಯೆಯ ರಾಮಮಂದಿರಕ್ಕೆ 2.51 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಬಾಲರಾಮನ ಪ್ರಾಣಪ್ರತಿಷ್ಠೆ (Ram Lalla Pranapratistha) ಕಾರ್ಯಕ್ರಮದಲ್ಲಿ

ಕುಟುಂಬದೊಂದಿಗೆ ಭಾಗಿಯಾಗಿದ್ದ ಉದ್ಯಮಿ ಮುಕೇಶ್ ಅಂಬಾನಿ ಅವರು ರಾಮಮಂದಿರಕ್ಕೆ 2.51 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಮುಕೇಶ್ ಅಂಬಾನಿ ದೇಣಿಗೆ ನೀಡಿರುವ ಕುರಿತು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, (Mukesh Ambani, wife Nita Ambani,) ಮಗಳು ಇಶಾ ಮತ್ತು ಅಳಿಯ ಆನಂದ್ ಪಿರಾಮಲ್, ಪುತ್ರರಾದ ಆಕಾಶ್

ಮತ್ತು ಅನಂತ್, ಸೊಸೆ ಶ್ಲೋಕಾ ಮೆಹ್ತಾ ಮತ್ತು ರಾಧಿಕಾ ಮರ್ಚೆಂಟ್ ಭಾಗಿಯಾಗಿದ್ದರು.

ಇನ್ನು ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರ ದೇವಾಲಯವನ್ನು ಜನವರಿ 22ರಂದು ಭವ್ಯ ಸಮಾರಂಭದ ಮೂಲಕ ಪ್ರಧಾನಿ ಮೋದಿ (PM Modi) ಅವರು ಉದ್ಘಾಟನೆ ಮಾಡಿದ್ದಾರೆ.

ಈ ಭವ್ಯ ಸಮಾರಂಭಕ್ಕೆ ದೇಶದ ಅನೇಕ ಗಣ್ಯರು ಆಗಮಿಸಿದ್ದರು.

Exit mobile version