ಭಾರತೀಯ ವಿಜ್ಞಾನಿ ಉಡುಪಿ ರಾಮಚಂದ್ರ ರಾವ್​ ಜನ್ಮದಿನವನ್ನು ಸ್ಮರಿಸಿದ ಗೂಗಲ್​ ಡೂಡಲ್

ಗೂಗಲ್​ ವಿಶೇಷ ದಿನವನ್ನು ತನ್ನ ಡೂಡಲ್​ ಮೂಲಕ ವಿಭಿನ್ನವಾಗಿ ಸ್ಮರಿಸುತ್ತದೆ. ಅದರಂತೆ ಇಂದು ಭಾರತದ ಸ್ಯಾಟಲೈಟ್​ ಮ್ಯಾನ್​, ಪ್ರೊಫೆಸರ್​​, ವಿಜ್ಞಾನಿ ಉಡುಪಿ ರಾಮಚಂದ್ರ ರಾವ್​​​ ಅವರ ಜನ್ನದಿನವನ್ನು ಸ್ಮರಿಸಿದೆ.

ರಾಮಚಂದ್ರ ರಾವ್ ಅವರು ಇಸ್ರೋದ ಮುಖ್ಯಸ್ಥರಾಗಿದ್ದು, 1975ರಲ್ಲಿ ಭಾರತದ ಮೊದಲ ಉಪಗ್ರಹ​​ ಆರ್ಯಭಟ ಉಡಾವಣೆಯ ನೇತೃತ್ವ ವಹಿಸಿದ್ದರು. ಹಾಗಾಗಿ ಗೂಗಲ್ ಅವರ ಫೋಟೋದ ಜೊತೆಗೆ ಭೂಮಿಯ ಚಿತ್ರವಿರುವ ಡೂಡಲ್​ ಅನ್ನು ರಚಿಸುವ ಮೂಲಕ ಅವರ ಜನ್ಮದಿನವನ್ನು ಸ್ಮರಿಸಿದೆ.

ರಾಮಚಂದ್ರ ರಾವ್ ಅವರು 1932ರಲ್ಲಿ ಉಡುಪಿಯ ಹಳ್ಳಿಯೊಂದರಲ್ಲಿ ಜನಿಸಿದರು. ಭೌತಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿ ನಂತರ ಅಮೆರಿಕದಲ್ಲಿ ಪ್ರೊಪೆಸರ್​ ಆಗಿ ದುಡಿದ ಬಳಿಕ ನಾಸಾ ಬಾಹ್ಯಾಕಾಶ ಶೋಧಕಗಳಲ್ಲಿ ಪ್ರಯೋಗ ಮಾಡಿದರು. 1966ರಲ್ಲಿ ಭಾರತಕ್ಕೆ ಮರಳಿದ ಅವರು 1972ರಲ್ಲಿ ಭಾರತದ ಪ್ರಮುಖ ಬಾಹ್ಯಕಾಶ ವಿಜ್ಞಾನ ಸಂಸ್ಥೆಯಾದ ಭೌತಿಕ ಸಂಶೋಧನಾ ಪ್ರಯೋಗಾಲಯದಲ್ಲಿ ಸಮಗ್ರ ಉನ್ನತ ಶಕ್ತಿಯ ಖಗೋಳವಿಜ್ಞಾನ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಪ್ರೊ, ರಾವ್​ ಸುಮಾರು 20ಕ್ಕೂ ಹೆಚ್ಚು ಉಪಗ್ರಹಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. 1994ರಲ್ಲಿ ಭಾರತ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರು ಆಗಿದ್ದರು. 2013ರಲ್ಲಿ ಸ್ಯಾಟಲೈಟ್​​ ಹಾಲ್​ ಆಫ್​ ಪ್ರೇಮ್​ಗೆ ಸೇರ್ಪಡೆಯಾದ ಮೊದಲ ಭಾರತೀಯ ಹೆಗ್ಗಳಿಕೆ ಇವರ ಮೇಲಿದೆ.

Exit mobile version