ಚುನಾವಣಾ ಬಾಂಡ್ ಮೂಲಕ ಹಣ ಸಂದಾಯ ಮಾಡಿದವರಿಗೆ ಸರ್ಕಾರಿ ಟೆಂಡರ್:ಡಾ ಪರಕಾಲ ಪ್ರಭಾಕರ್

Bengaluru: ನರೇಂದ್ರ ಮೋದಿ (Narendra Modi) ಸರಕಾರದ ಆರ್ಥಿಕ ನೀತಿ ವಿಭಿನ್ನವಾಗಿದೆ.ದೇಶದ ಬಡವರಿಗೆ ಅಕ್ಕಿ, ಸಿಲಿಂಡರ್‌ (Government tender election bond pairs)

ಕೊಟ್ಟು ಮೆಚ್ಚಿಗೆ ಗಳಿಸಿ ಸರಕಾರಿ ಸ್ವಾಮ್ಯದ ಸ್ವತ್ತುಗಳನ್ನು ತಮ್ಮ ಮಿತ್ರರಿಗೆ ಬಿಟ್ಟು ಕೊಡುವುದೇ ಪ್ರಧಾನಿಯವರ ಬಹು ದೊಡ್ಡ ಆರ್ಥಿಕ ನೀತಿಯಾಗಿದೆ, ಎಂದು ಆರ್ಥಿಕ ತಜ್ಞ ಹಾಗೂ ಕೇಂದ್ರ ಹಣಕಾಸು

ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಪತಿ ಡಾ. ಪರಕಾಲ ಪ್ರಭಾಕರ್‌ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ಅಷ್ಟಕ್ಕೂ ಕಪ್ಪು ಹಣ (Black Money) ಭಾರತಕ್ಕೆ ವಾಪಸ್ ತರುತ್ತೇನೆ ಎಂದು ಆಶ್ವಾಸನೆ ನೀಡಿ ಪ್ರಧಾನಿ ಮೋದಿ (Modi) ಮಾಡಿದ್ದೇನು? ಅಕ್ರಮ ಹಣ ಸಾಗಣೆ, ಭ್ರಷ್ಟಾಚಾರ ಸೇರಿದಂತೆ ವಿವಿಧ

ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕಂಪನಿಗಳು ಚುನಾವಣಾ ಬಾಂಡ್‌ (Electoral bond ) ಖರೀದಿಸಿ ಪಕ್ಷಗಳಿಗೆ ಹಣ ಸಂದಾಯ ಮಾಡಿವೆ. ಹೀಗೆ ಸಂದಾಯ ಮಾಡಿದ ಕಂಪನಿಗಳಿಗೆ

ಈಗಾಗಲೇ ಸಾಕಷ್ಟು ಸರಕಾರಿ ಟೆಂಡರ್‌ಗಳನ್ನು(Government Tender) ನೀಡಲಾಗಿದೆ. ಇದು ಜಗತ್ತಿನ ದೊಡ್ಡ ಹಗರಣವಾಗಿದೆ ಆದರೆ ಇದು ಯಾರ ಗಮನಕ್ಕೂ ಬರುತ್ತಿಲ್ಲ. ಈ ಚುನಾವಣಾ ಬಾಂಡ್‌ ಅನ್ನು

ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್‌ (Supreme Court ) ತೀರ್ಪು ನೀಡಿದ ನಂತರವೂ ದೇಶದ ಮಹಾಪ್ರಭುಗಳು, ಇದನ್ನು ವಿರೋಧಿಸುವವರು ಪಶ್ಚಾತ್ತಾಪ ಪಡುತ್ತಾರೆ ಎಂದು ನಿನ್ನೆಯಷ್ಟೇ ಹೇಳಿಕೆ

ನೀಡಿ ಜನರ ಹಾದಿ (Government tender election bond pairs) ತಪ್ಪಿಸುತ್ತಿದ್ದಾರೆ ಎಂದಿದ್ದಾರೆ.

ಕೊವಿಡ್ (Covid) ಸಮಯದಲ್ಲಿ ಚುಚ್ಚುಮದ್ದು,ವಿಮಾನ ನಿಲ್ದಾಣ, ಬಂದರು ನಿರ್ವಹಣೆ, ಮೂಲಸೌಕರ್ಯ (Basic needs) ಅಭಿವೃದ್ಧಿಗೆ ಮುಂತಾದ ಭಾರೀ ಮೊತ್ತದ ಟೆಂಡರ್‌ಗಳನ್ನು ಪ್ರಧಾನಿ ತಮ್ಮ

ಮಿತ್ರರಿಗೆ ಕೊಡುತ್ತಿದ್ದಾರೆ. ಅಂದರೆ ಚುನಾವಣಾ ಬಾಂಡ್ ಖರೀದಿ ಮಾಡಿ ಪಕ್ಷಕ್ಕೆ ಬೆಂಬಲಿಸಿದ ಉದ್ಯಮಿಗಳಿಗೆ ನೀಡುತ್ತಿದ್ದಾರೆ.ಭಾರತದ ಶೇ. 40ರಷ್ಟು ಸಂಪತ್ತು ಕೇವಲ ಶೇ. 1ರಷ್ಟು ಜನ ಉಪಯೋಗಿಸುತ್ತಿದ್ದು,

ಅಸಮಾನತೆ ಹೋಗಲಾಡಿಸಲಾಗದ ಉತ್ತುಂಗದಲ್ಲಿದೆ. ಇನ್ನು ದೇಶದ ಉಳಿತಾಯದ ಪ್ರಮಾಣ ಶೇ. 5 ರಷ್ಟಿದ್ದರೆ, ಸಾಲದ ಪ್ರಮಾಣ ಶೇ. 40ರಷ್ಟಾಗಿದೆ. ಪಕ್ಕದ ಬಾಂಗ್ಲಾದೇಶದಲ್ಲಿ ನಿರುದ್ಯೋಗ ಪ್ರಮಾಣ

ಶೇ. 12ರಷ್ಟಿದ್ದರೆ, ಭಾರತದಲ್ಲಿ (Bharatha) ಅದು ಶೇ. 24ಕ್ಕೆ ತಲುಪಿದೆ. ಖಾಸಗಿ ಬಂಡವಾಳ ಹೂಡಿಕೆ ಕುಸಿದಿದೆ. ಕೇಂದ್ರ ಆರ್ಥಿಕತೆಗೆ ಸಂಬಂಧಿಸಿದ ಅಂಕಿ -ಅಂಶಗಳನ್ನು ಯಾರಿಗೂ ತಿಳಿಯದಂತೆ ಬಚ್ಚಿಟ್ಟಿದೆ

ಎಂದು ಆಪಾದಿಸಿದ್ದಾರೆ.

ಇದನ್ನು ಓದಿ : “ಆ ಮನುಷ್ಯನಿಗೆ ನನ್ನ ಸಲಾಮ್” – ರಾಹುಲ್ ಗಾಂಧಿಯ ಗುಣಗಾನ ಮಾಡಿದ ನಟ ಕಿಶೋರ್..!

Exit mobile version