ಈ 12 ಜಿಲ್ಲೆಗಳಿಗೆ ಗಣರಾಜ್ಯೋತ್ಸವ ದಿನದಂದು ಮಧ್ಯವರ್ತಿ-ಮುಕ್ತ ಸರ್ಕಾರಿ ಸೇವಾ ಕೇಂದ್ರಗಳು ಘೋಷಣೆ.!

grama one

ಬೆಂಗಳೂರು ಜ 18 : ಗಣರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಬೊಮ್ಮಾಯಿ ನೇತೃತ್ವದ  ರಾಜ್ಯ ಬಿಜೆಪಿ ಸರ್ಕಾರವು, ಹಲವು ವಿಚಾರಗಳನ್ನು ಹಾಗೂ ಹೊಸ ಆಯಾಮಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಭರದಿಂದ ಕೆಲಸ ಮುಂದುವರೆಸುತ್ತಿದೆ. ಈ ಬಾರಿ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇದೇ ಜನವರಿ 26ರಂದು ಆಚರಿಸಲಾಗುವ ಗಣರಾಜ್ಯೋತ್ಸವ ದಿನದಂದು ಪ್ರಮುಖವಾಗಿ ಗ್ರಾಮಾಂತರ ಪ್ರಾಂತ್ಯಗಳಿಗೆ ಮಧ್ಯವರ್ತಿ-ಮುಕ್ತ ಸರ್ಕಾರಿ ಸೇವಾ ಕೇಂದ್ರಗಳನ್ನು ನೀಡಲು ಮುಂದಾಗಿದೆ. ಈ ಯೋಜನೆಯವು 12 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಜಾರಿಯಾಗಲಿದೆ. ಪ್ರಾರಂಭಿಕವಾಗಿ  ಯಾವ ಜಿಲ್ಲೆಗಳಲ್ಲಿ ಈ ಯೋಜನೆಯು ಲಭ್ಯವಾಗಲಿದೆ .? ಮತ್ತು  ಈ ಯೋಜನೆಯಲ್ಲಿ ನಿಮ್ಮ ಜಿಲ್ಲೆಯೂ ಸೇರಿದೆಯಾ ಎಂಬುದನ್ನು ಗಮನಿಸಿ.

ಈ ಕೇಂದ್ರಗಳು ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಂತೆಯೇ ಇರುತ್ತವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಸಭೆ ನಡೆಸಿ ಯೋಜನೆಯ ಉಪಕ್ರಮದ ಪ್ರಾರಂಭದ ಸಿದ್ಧತೆಗಳನ್ನು ಪರಿಶೀಲಿಸಿದರು. ಜನವರಿ 26 ರಿಂದ ರಾಜ್ಯದ 12  ಜಿಲ್ಲೆಗಳಲ್ಲಿ ಇದನ್ನು ಜಾರಿಗೊಳಿಸಲಾಗುವುದು. ಈ ಉದ್ದೇಶಕ್ಕಾಗಿ ಸುಮಾರು 3000 ಗ್ರಾಮ ಒನ್ ಸೇವಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಅವರು ಹೇಳಿದರು.

“ಸದ್ಯಕ್ಕೆ, ಈ ಯೋಜನೆಯನ್ನು 12 ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗುವುದು ಮತ್ತು ಇದು ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತದೆ. ಪ್ರಮುಖ ಇಲಾಖೆಗಳ ಸೇವೆಗಳು ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲು ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.  “ಈಗ ಜನರು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ  ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಏಕೆಂದರೆ ಅವರು ಗ್ರಾಮ ಒನ್ ಕಚೇರಿಗಳಲ್ಲಿ ಸೇವೆಗಳನ್ನು ಪಡೆಯಬಹುದು. ಎಂದು ತಿಳಿಸಿದರು.

ಗ್ರಾಮ ಒನ್ ಅನ್ನು ಗ್ರಾಮ ಮಟ್ಟದಲ್ಲಿ ಎಲ್ಲಾ ನಾಗರಿಕ-ಕೇಂದ್ರಿತ ಚಟುವಟಿಕೆಗಳಿಗೆ ಏಕ-ಪಾಯಿಂಟ್ ಸಹಾಯ ಕೇಂದ್ರವಾಗಿ ರೂಪಿಸಲಾಗಿದೆ ಎಂದು ಈ   ಯೋಜನೆಯಲ್ಲಿ ಕೆಲಸ ಮಾಡುವ ಇ-ಆಡಳಿತ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೇವೆಗಳಲ್ಲಿ ಬ್ಯಾಂಕಿಂಗ್ ಸೇವೆಗಳು ಮತ್ತು ಆರ್‌ಟಿಐ ಪ್ರಶ್ನೆಗಳನ್ನು ಸಲ್ಲಿಸುವ ಸೌಲಭ್ಯಗಳೂ ಸೇರಿವೆ ಎಂದು ತಿಳಿಸಿದ್ದಾರೆ.

Exit mobile version