ಬಾಡಿಗೆ ಮನೆಯಲ್ಲಿ ಇರುವವರಿಗೆ 200 ಯೂನಿಟ್ ವಿದ್ಯುತ್​​ ಫ್ರೀ ಇದೆಯೇ?

Bengaluru : ಚುನಾವಣೆಯಲ್ಲಿ ಘೋಷಿಸಿದ ಐದು ಗ್ಯಾರೆಂಟಿಯನ್ನು ಅನುಷ್ಠಾನವನ್ನು ಕಾಂಗ್ರೆಸ್ ಸರ್ಕಾರ (Gruha jyoti scheme karnataka) ಇಂದು ಘೋಷಿಸಿದೆ. ಪ್ರಮುಖ ಸಚಿವ ಸಂಪುಟ ಸಭೆ ಕರೆದ ಸಿದ್ದರಾಮಯ್ಯ

(Siddaramaiah) ಸರ್ಕಾರ 5 ಖಾತರಿ ಯೋಜನೆ ಜಾರಿಗೊಳಿಸಿದೆ. ಐದು ಯೋಜನೆಗಳಲ್ಲಿ ಜೂನ್ 11 ರಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಪ್ರಾರಂಭಿಸಿದರೆ,

ಇತರ ನಾಲ್ಕು ಗ್ಯಾರಂಟಿ ಯೋಜನೆಗಳು ಜುಲೈ 1 ರಂದು ಪ್ರಾರಂಭವಾಗುತ್ತವೆ. ಇದೇ ಬರುವ ಜುಲೈ 1 ರಿಂದ ಬಳಕೆ ಮಾಡುವ ವಿದ್ಯುತ್ ಉಚಿತವಾಗಿರಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

200 ಯೂನಿಟ್ ವಿದ್ಯುತ್​ನ್ನು ಕಾಂಗ್ರೆಸ್​ ಸರ್ಕಾರ ಉಚಿತ ನೀಡುತ್ತಿದೆ.ಹಾಗಾದರೆ ಈ ಯೋಜನೆ ಬಾಡಿಗೆದಾರರಿಗೂ ಅನ್ವಯಿಸುತ್ತಾ ಎನ್ನುವ ಕುತೂಹಲಕ್ಕೆ (Gruha jyoti scheme karnataka) ಕಾರಣವಾಗಿದೆ.

ಬಾಡಿಗೆದಾರರಿಗೂ ಅನ್ವಯಿಸುತ್ತಾ ಉಚಿತ ವಿದ್ಯುತ್ :

‘ಗೃಹಜ್ಯೋತಿ’ ಯೋಜನೆ (‘Griha Jyoti’ scheme) ವಾಣಿಜ್ಯ ಬಳಕೆದಾರರಿಗೆ ಅನ್ವಯಿಸಲ್ಲ ಎಂದಿದ್ದಾರೆ. ಒಂದಕ್ಕಿಂತ ಹೆಚ್ಚು ಆರ್​ಆರ್ ನಂಬರ್ ಒಂದು ಕಟ್ಟಡದಲ್ಲಿ ಹೊಂದಿದ್ದರೆ ಅದನ್ನು ಕಮರ್ಷಿಯಲ್​ ಎಂದು

ಪರಿಗಣಿಸಲಾಗುವುದು. ಗೃಹಜ್ಯೋತಿ’ ಯೋಜನೆ ಹಾಗಾಗಿ ಬಾಡಿಗೆದಾರರಿಗೆ ಅನ್ವಯವಾಗಲ್ಲ ಎಂದಿದ್ದಾರೆ. ಒಂದು ವೇಳೆ ಸಿಂಗಲ್ ಬಿಲ್ಡಿಂಗ್​ನಲ್ಲಿ ಬಾಡಿಗೆದಾರರಿದ್ದರೆ ಮಾತ್ರ ಉಚಿತವಿರುತ್ತದೆ.

ಇದನ್ನೂ ಓದಿ : https://vijayatimes.com/coromandel-express-train-tragedy/

ಒಂದು ಬಿಲ್ಡಿಂಗ್​ನಲ್ಲಿ ಒಂದು ಮನೆಯ RR ನಂಬರ್​ ಮಾತ್ರ ಪರಿಗಣನೆ ಮಾಡಲಾಗುತ್ತಿದೆ. ಹಾಗಾಗಿ ಒಂದು ಬಿಲ್ಡಿಂಗ್​ನಲ್ಲಿ ಒಂದಕ್ಕಿಂತ ಹೆಚ್ಚು ಆರ್​ಆರ್​ ನಂಬರ್​ಯಿದ್ದರೆ, ಅದರ ಲಾಭವನ್ನು ಬಿಲ್ಡಿಂಗ್ ಮಾಲೀಕರು ಮಾತ್ರ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

12 ತಿಂಗಳ ಸರಾಸರಿ ವಿದ್ಯುತ್​ ಬಿಲ್​ ಪರಿಗಣೆ :

ಎಲ್ಲರಿಗೂ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಭರವಸೆಯನ್ನು ಜಾರಿಗೊಳಿಸುತ್ತಿದ್ದೇವೆ. 12 ತಿಂಗಳಲ್ಲಿ ಒಂದು ಮನೆ ಎಷ್ಟು ವಿದ್ಯುತ್ ಬಳಸುತ್ತದೆ? 10 ಪರ್ಸೆಂಟ್ ಅದರ ಮೇಲೆ ಹೆಚ್ಚಿಗೆ ಮಾಡಿ ಲೆಕ್ಕ ತೆಗೆದುಕೊಳ್ಳುತ್ತೇವೆ.

ಉದಾಹರಣೆಗೆ ಒಬ್ಬ ವ್ಯಕ್ತಿಯು ಒಂದು ತಿಂಗಳು 190 ಯುನಿಟ್ ಖರ್ಚು ಮಾಡಿರಬಹುದು.

ಮತ್ತೊಂದು ತಿಂಗಳು 180 ಯುನಿಟ್ ವಿದ್ಯುತ್ ಬಳಸಿರಬಹುದು. 12 ತಿಂಗಳಲ್ಲಿ ಆತನ ಸರಾಸರಿ ಯುನಿಟ್ ಬಳಕೆಯ ಮೇಲೆ ಸರ್ಕಾರ 10 ಪರ್ಸೆಂಟ್ ಹೆಚ್ಚು ಸೇರಿಸಲಾಗುತ್ತದೆ.

ಈ ವೇಳೆ ಸರಾಸರಿ 200 ಯೂನಿಟ್ ಇದ್ದರೆ ಉಚಿತವಾಗಿ ವಿದ್ಯುತ್ (Free electricity) ನೀಡಲಾಗುವುದು.

Exit mobile version