Bengaluru : ಬಹು ನಿರೀಕ್ಷಿತ ಕಾಂಗ್ರೆಸ್ (Congress) ಪಕ್ಷದ ಗ್ಯಾರಂಟಿಗಳ ಘೋಷಣೆಯಾಗಿದ್ದು, ಕೆಲವು ಕಂಡಿಷನ್ಸ್ಗಳೊಂದಿಗೆ ಗ್ಯಾರಂಟಿಗಳನ್ನು ಜಾರಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ (Gruha Lakshmi Scheme 2023)
ಮುಂದಾಗಿದ್ದಾರೆ. ಕಾಂಗ್ರೆಸ್ನ ಬಹು ನಿರೀಕ್ಷಿತ 5 ಗ್ಯಾರಂಟಿಗಳಲ್ಲಿ ಒಂದಾಗಿರುವ ಮನೆ ಒಡತಿಯ ಖಾತೆಗೆ ಪ್ರತಿ ತಿಂಗಳು 2,000 ರೂ. ಬರುವಂತಹ ಗೃಹಲಕ್ಷ್ಮಿ ಯೋಜನೆಯೂ (Grilahakshmi Yojana) ಆಗಸ್ಟ್ 15 ರಿಂದ
ಜಾರಿಗೆ ಬರುವುದಾಗಿ ಸಿಎಂ ಸಿದ್ದರಾಮಯ್ಯ (Gruha Lakshmi Scheme 2023) ಘೋಷಿಸಿದ್ದಾರೆ.

ಯಾರು ಅರ್ಜಿ ಸಲ್ಲಿಸಬೇಕು..?
• ಮನೆ ಯಜಮಾನಿ ಯಾರು ಎಂಬುದನ್ನು ಮನೆಯವರೇ ಸ್ಪಷ್ಟಪಡಿಸಬೇಕು.
• ಮನೆಯಲ್ಲಿ ಒಬ್ಬರಿಗೆ ಮಾತ್ರ ಹಣ ನೀಡಲಾಗುವುದು.
• ಮನೆಯ ಯಜಮಾನಿಗೆ 18 ವರ್ಷ ತುಂಬಿರಬೇಕು.
• ಅವಳ ಬಳಿ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಡ್ಡಾಯವಾಗಿ ಇರಬೇಕು.
• ಎಪಿಎಲ್ ಮತ್ತು ಬಿಪಿಎಲ್ ಕಾರ್ಡುದಾರರು (BPL Card) ಇದಕ್ಕಾಗಿ ಅರ್ಜಿ ಹಾಕಬಹುದು.
• ಅಂಗವಿಕಲ, ವಿಧವಾವೇತನ, ವೃದ್ದಾಪ್ಯ ವೇತನ ಸೇರಿ ಸಾಮಾಜಿಕ ಭದ್ರತೆ ಪಿಂಚಣಿ ಪಡೆಯುವವರಿಗೂ ಹಣ ಸಿಗಲಿದೆ.
ಅರ್ಜಿ ಸಲ್ಲಿಕೆ :
• ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳೊಂದಿಗೆ ಆನ್ಲೈನ್ ಅಥವಾ ಆಪ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
• ಮನೆಯೊಡತಿ ಯಾರೆಂದು ಘೋಷಣೆ ಮಾಡಿಕೊಳ್ಳಬೇಕು.
• ಜೂನ್ 15 ರಿಂದ ಜುಲೈ 15 ರ ಅವಧಿಯಲ್ಲಿ ಅರ್ಜಿ ಹಾಕಬೇಕು.
• ಅರ್ಜಿಗಳ ಪರಿಶೀಲನೆ ನಂತರ ಈ ಯೋಜನೆ ಆಗಸ್ಟ್ 15 ರಿಂದ ಚಾಲನೆಯಾಗಲಿದೆ.
ಇದನ್ನೂ ಓದಿ : https://vijayatimes.com/junior-asia-cup-award/
ಇನ್ನು ಕಾಂಗ್ರೆಸ್ (Congress) ಪಕ್ಷದ ಇನ್ನೊಂದು ಗ್ಯಾರಂಟಿ ಶಕ್ತಿ ಯೋಜನೆಯೂ ಜೂನ್ 11ರಿಂದ ಆರಂಭವಾಗಲಿದೆ. ಈ ಯೋಜನೆ ರಾಜ್ಯದ ಎಲ್ಲ ಮಹಿಳೆಯರಿಗೂ ಅನ್ವಯವಾಗಲಿದ್ದು,
ಇದು ಕರ್ನಾಟಕದ ಒಳಗೆ ಮತ್ತು ಕರ್ನಾಟಕದವರಿಗೆ ಮಾತ್ರ ಸೀಮಿತವಾಗಿದೆ. ಎಸಿ ಬಸ್, ನಾನ್-ಎಸಿ ಬಸ್, ರಾಜಹಂಸ ಬಸ್, ಲಕ್ಷುರಿ, ಸ್ಲಿಪರ್ ಬಸ್ಗಳನ್ನು ಬಿಟ್ಟು ಎಲ್ಲಾ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು.
ಕೆ.ಎಸ್.ಆರ್.ಟಿ.ಸಿ (KSRTC) ಬಸ್ಸುಗಳಲ್ಲಿ ಶೇ.50ರಷ್ಟು ಸೀಟನ್ನು ರಿಸರ್ವ್ ಮಹಿಳೆಯರಿಗೆ ನೀಡಲಾಗುವುದು. ಆದರೆ ಬೆಂಗಳೂರಿನ ಬಿಎಂಟಿಸಿಯಲ್ಲಿ ಈ ನಿಯಮ ಇರುವುದಿಲ್ಲ. ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ಶೇಕಡಾ
50ರಷ್ಟು ಸೀಟ್ಗಳನ್ನು ಪುರುಷರಿಗಾಗಿ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.