ಪ್ರಧಾನಿ ಮೋದಿ ಅವರ ಭೇಟಿಯ ದಿನವೇ ಗಿನ್ನಿಸ್ ದಾಖಲೆ ಬರೆದ ಅಸ್ಸಾಂ!

Assam : 11,300 ಕ್ಕೂ ಹೆಚ್ಚು ನೃತ್ಯಗಾರರು, ಡ್ರಮ್ಮರ್‌ಗಳೊಂದಿಗೆ ಬಿಹು ಪ್ರದರ್ಶನ ನೀಡಿದ ಅಸ್ಸಾಂ ರಾಜ್ಯ ಇದೀಗ ಗಿನ್ನೆಸ್ ವಿಶ್ವ ದಾಖಲೆಗೆ (World Record) ಸೇರ್ಪಡೆಯಾಗಿದೆ! ಗುವಾಹಟಿಯಲ್ಲಿ 11,304 ನೃತ್ಯಗಾರರು ಮತ್ತು ಡ್ರಮ್ಮರ್‌ಗಳನ್ನು ಒಳಗೊಂಡ ಬಿಹು (Guinness World Record holder Assam) ಪ್ರದರ್ಶನದೊಂದಿಗೆ ಅಸ್ಸಾಂ ಗುರುವಾರ ವಿಶ್ವ ದಾಖಲೆಯನ್ನು ನಿರ್ಮಿಸಿದೆ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಸ್ಸಾಂ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಈ ತಯಾರಿಗಳನ್ನು ಅಸ್ಸಾಂ ಸಿದ್ಧಪಡಿಸಿತ್ತು.

ಇದೇ ವೇಳೆ ಪ್ರಧಾನಿ ಅವರ ಆಗಮನದ ಸಂದರ್ಭದಲ್ಲಿ ಬಿಹು ನೃತ್ಯವನ್ನು ಪ್ರದರ್ಶಿಸಲಾಗಿದೆ. ಅಸ್ಸಾಂ ಒಂದೇ ಸ್ಥಳದಲ್ಲಿ 11,304 ನೃತ್ಯಗಾರರು ಮತ್ತು ಡ್ರಮ್ಮರ್‌ಗಳು ಬಿಹು ನೃತ್ಯ ಪ್ರದರ್ಶಿಸುವ

ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Assam Chief Minister Himanta Biswa Sharma) ಹೇಳಿದ್ದಾರೆ.

ಇಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಬಿಹು ನೃತ್ಯವೂ ನಡೆಯಲಿದೆ. ಪ್ರಧಾನಿ ಮೋದಿ ಶುಕ್ರವಾರ ಅಸ್ಸಾಂಗೆ ಒಂದು ದಿನದ ಭೇಟಿ ನೀಡಲಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ ಅವರು ಸಾಂಪ್ರದಾಯಿಕ ಅಸ್ಸಾಮಿ ಸ್ಕಾರ್ಫ್ ‘ಗಾಮೋಸಾ’ ಗಾಗಿ ಭೌಗೋಳಿಕ ಸೂಚಕ ನೋಂದಣಿ ಪ್ರಮಾಣಪತ್ರವನ್ನು ಸಹ ಪಡೆದಿದ್ದಾರೆ.

ಇದನ್ನೂ ಓದಿ : https://vijayatimes.com/motivation-to-online-game/

ಕಳೆದ ವರ್ಷ ಡಿಸೆಂಬರ್‌ನಲ್ಲಿ ಗಮೋಸಾಕ್ಕೆ ಜಿಐ ಟ್ಯಾಗ್ ನೀಡಲಾಗಿತ್ತು. ಈ ಪ್ರದರ್ಶನವು ಜಾನಪದ ನೃತ್ಯ ಪ್ರಕಾರದ ಅತಿದೊಡ್ಡ ಪ್ರದರ್ಶನವಾಗಿದೆ (Guinness World Record holder Assam) ಎಂದು ಹಿಮಂತ ಬಿಸ್ವಾ ಶರ್ಮಾ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಲಂಡನ್‌ನಲ್ಲಿರುವ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಧಾನ ಕಛೇರಿಯಿಂದ ತೀರ್ಪುಗಾರರ ಸಮ್ಮುಖದಲ್ಲಿ,

ಪ್ರದರ್ಶಕರು ತಮ್ಮ ಪ್ರದರ್ಶನವನ್ನು ಪ್ರಸ್ತುತಪಡಿಸಿದ್ದಾರೆ ಮತ್ತು ಬಿಹು ನೃತ್ಯ ಮತ್ತು ಧೋಲ್ ವಾದನಕ್ಕಾಗಿ ಜಾಗತಿಕ ಸಾಧನೆಯನ್ನು ಮಾಡಿದ್ದಾರೆ.

ನಾವು 11,304 ನೃತ್ಯಗಾರರು ಮತ್ತು ಡ್ರಮ್ಮರ್‌ಗಳೊಂದಿಗೆ ಬಿಹು ನೃತ್ಯ ಮತ್ತು ಬಿಹು ಡೋಲ್‌ಗಳೆರಡಕ್ಕೂ ವಿಶ್ವ ದಾಖಲೆಗಳನ್ನು ಮಾಡಿದ್ದೇವೆ.

ಇದನ್ನೂ ಓದಿ : https://vijayatimes.com/motivation-to-online-game/

ಇದು ಒಂದೇ ಸ್ಥಳದಲ್ಲಿ ಅತಿದೊಡ್ಡ ಬಿಹು ನೃತ್ಯ ಮತ್ತು ಬಿಹು ಧೋಲ್ ಪ್ರದರ್ಶನವಾಗಿದೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಗುವಾಹಟಿಯ ಇಂದಿರಾ ಗಾಂಧಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ (Indira Gandhi Athletic Stadium) ಹೇಳಿದರು.

ಬಿಹುವನ್ನು ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ನೋಂದಾಯಿಸುವ ಪ್ರಕ್ರಿಯೆಯನ್ನು ಅಸ್ಸಾಂ ಸರ್ಕಾರವು ಪ್ರಾರಂಭಿಸಿದೆ ಮತ್ತು ಅದರ ವೆಚ್ಚವನ್ನು ಅದರ ಸಂಸ್ಕೃತಿ ಇಲಾಖೆ ಭರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Exit mobile version