ಕೊನೆಗೂ ವಿಚಾರಣೆಗೆ ಹಾಜರಾದ ಹಂಸಲೇಖ

 ಬೆಂಗಳೂರು: ಪೇಜಾವರ ಶ್ರೀಗಳ ವಿರುದ್ಧ ಹೇಳಿಕೆ ನೀಡಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಗೀತ ನಿರ್ದೇಶಕ ಹಂಸಲೇಖ ಅವರು ಇಂದು ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಇದೀಗ ಒಂದು ಗಂಟೆಯ ವಿಚಾರಣೆ ಮುಗಿಸಿ ವಾಪಸ್​ ತೆರಳಿದ್ದಾರೆ.

ಬಸವನಗುಡಿ ಇನ್ಸ್​ಪೆಕ್ಟರ್​ ರಮೇಶ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ. ವಿಚಾರಣೆ ಬಳಿಕ ಮಾತನಾಡಿದ ಹಂಸಲೇಖ ಪರ ವಕೀಲ ಮಹದೇವಸ್ವಾಮಿ, ಇಂದಿನ ವಿಚಾರಣೆ ಮುಗಿದಿದೆ. ಪೊಲೀಸರು ಮುಂದೆ ಯಾವಾಗ ಕರೆಯುತ್ತಾರೋ ಆಗ ಬರಬೇಕಿದೆ. ಮತ್ತೆ ವಿಚಾರಣೆ ಅವಶ್ಯಕತೆ ಇದ್ದರೆ ಕರೆಸುತ್ತೇವೆ ಎಂದಿದ್ದಾರೆ. ನಾವು ಕಾನೂನು ಮುಖಾಂತರ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಹಂಸಲೇಖ ಅವರಿಗೆ ನಟ ಚೇತನ್ ಸಾಥ್ : ಪೇಜಾವರ ಶ್ರೀಗಳ ವಿರುದ್ಧ ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಹಂಸಲೇಖ ಅವರು ಬಸವನಗುಡಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.

ಹಂಸಲೇಖ ಅವರ ಜೊತೆ ನಟ ಚೇತನ್ ಕೂಡ ಆಗಮಿಸಿದ್ದಾರೆ. ಹಂಸಲೇಖ ಜೊತೆ ನಟ ಚೇತನ್​ ಆಗಮಿಸಿರುವುದನ್ನು ಖಂಡಿಸಿ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ದಲಿತ ಸಂಘಟನೆಗಳು ಕೂಡ ಹಂಸಲೇಖ ಅವರನ್ನು ಬೆಂಬಲಿಸಿ ಬಸವನಗುಡಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿವೆ. ಎರಡೂ ಸಂಘಟನೆಗಳು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದು, ಜನರನ್ನ ಚದುರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ನಟ ಚೇತನ್ ಠಾಣೆ ಒಳಗೆ ಹೋಗದ ರೀತಿಯಲ್ಲಿ ಹಿಂದೂ ಸಂಘಟನೆಗಳು ತಡೆದಿವೆ.

Exit mobile version