‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಸುದೀಪ್, ಯಶ್ ಸೇರಿದಂತೆ ಹಲವು ನಟರು ಸಾಥ್

National Flag

75ನೇ ವರ್ಷದ ಸ್ವಾತಂತ್ರ್ಯ(75th Independence Day) ದಿನದ ಪ್ರಯುಕ್ತ ಈ ವರ್ಷ ದೇಶದ ಪ್ರತಿ ನಾಗರಿಕನು ತನ್ನ ಮನೆಯ ಮೇಲೆ ರಾಷ್ಟ್ರ ಧ್ವಜವನ್ನು(National Flag) ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವನ್ನು ಆಚರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಕರೆ ನೀಡಿದ್ದಾರೆ.
ರೆಡಿಯೋ(Radio) ಕಾರ್ಯಕ್ರಮ “ಮನ್ ಕೀ ಬಾತ್”ನಲ್ಲಿ(Mann ki Baat) ಈ ಕುರಿತು ವಿಶೇಷವಾಗಿ ಹಲವು ವಿಚಾರಗಳನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು,

ಆಗಸ್ಟ್ 13 ಮತ್ತು 15ರ ನಡುವೆ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ದೇಶಭಕ್ತಿ ಸಾರುವಂತೆ ಕರೆ ನೀಡಿದ್ದಾರೆ. ಹೀಗಾಗಿ ಭಾರತದ ಅನೇಕ ಕಲಾವಿದರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ‘ಹರ್ ಘರ್ ತಿರಂಗಾ’(Har Ghar Thiranga) ಅಭಿಯಾನಕ್ಕೆ ಸಾಕ್ಷಿಯಾಗಲು ಅನೇಕ ಕನ್ನಡದ ನಟರು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಅಭಿಯಾನಕ್ಕೆ ಬೆಂಬಲ ಸೂಚಕವಾಗಿ ಸಾಮಾಜಿಕ ಜಾಲತಾಣಗಳಲ್ಲಿನ(Social Media) ತಮ್ಮ ಡಿಪಿ(DP) ಬದಲಾಯಿಸಿಕೊಂಡಿದ್ದು, ರಾಷ್ಟ್ರ ಧ್ವಜವನ್ನು ಡಿಪಿಯಾಗಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್(Kiccha Sudeep), ಯಶ್(Yash), ಪ್ರಣೀತಾ, ಜಗ್ಗೇಶ್(Jaggesh), ತಾರಾ(Tara), ಸೇರಿದಂತೆ ಅನೇಕ ಕಲಾವಿದರು ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಸಾಥ್ನೀಡುವಂತೆ ಮನವಿ ಮಾಡಿದ್ದಾರೆ.
ಇನ್ನೊಂದೆಡೆ ಬಾಲಿವುಡ್ ಸೇರಿದಂತೆ ದೇಶದ ಅನೇಕ ಸೆಲೆಬ್ರಿಟಿಗಳು(Celebrities) ತಮ್ಮ ಡಿಪಿ ಬದಲಾಯಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ(Virat Kohli), ಮಿಥಾಲಿ ರಾಜ್(Mithali Raj), ಕೆ.ಎಲ್.ರಾಹುಲ್(KL Rahul), ನಟ ಅಮಿತಾಭ್ ಬಚ್ಚನ್(Amithabh Bacchan), ಅಕ್ಷಯ್ ಕುಮಾರ್,

ಗಾಯಕ ಸೋನು ನಿಗಮ್, ಆಶಾ ಭೋಂಸ್ಲೆ, ತೆಲುಗಿನ ಪ್ರಭಾಸ್(Prabhas), ಕೀರ್ತಿ ಸುರೇಶ್(Keerthy Suresh), ಅಜಯ್ ದೇವಗನ್, ಅನುಷ್ಕಾ ಶರ್ಮಾ ಹೀಗೆ ಅನೇಕ ತಾರೆಯರು ಈ ಆಂದೋಲನದಲ್ಲಿ ಭಾಗಿಯಾಗಿದ್ದಾರೆ. ಸಾಮಾನ್ಯ ನಾಗರಿಕರು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಈ ಅಭಿಯಾನಕ್ಕೆ ಬೆಂಬಲ ಸೂಚಕವಾಗಿ ತಮ್ಮ ಡಿಪಿ ಬದಲಾಯಿಸಿಕೊಳ್ಳುತ್ತಿದ್ದಾರೆ. ಈ ಅಭಿಯಾನಕ್ಕೆ ಭಾರೀ ಜನ ಬೆಂಬಲ ವ್ಯಕ್ತವಾಗುತ್ತಿದೆ.

Exit mobile version