ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ: ಎಸ್‌ಐಟಿಯ ಸಹಾಯವಾಣಿಗೆ ಬಂದ 30ಕ್ಕೂ ಅಧಿಕ ಕರೆಗಳು.

Bengaluru: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ (Prajwal Revanna Sex Assault Case) ನಡೆದು ಹಲವು ದಿನಗಳು ಕಳೆದ ನಂತರ ಎಸ್‌ಐಟಿಯು ಸಂತ್ರಸ್ತೆಯರಿಗಾಗಿ ಸಹಾಯವಾಣಿಗೆ ಕರೆ ಮಾಡಲು ಅವಕಾಶ ನೀಡಿತ್ತು. ಸಹಾಯವಾಣಿಗೆ ಈವರೆಗೆ 30ಕ್ಕೂ ಹೆಚ್ಚು ಕರೆಗಳು ಬಂದಿವೆ. ಆದರೆ ಯಾವ ಮಹಿಳೆಯು ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ಎಸ್‌ಐಟಿಯು ತಿಳಿಸಿದೆ. ಸಂತ್ರಸ್ತೆಯರು ದೂರು ನೀಡಲು ಮುಂದೆ ಬಂದರೆ ಮಾಹಿತಿ ಸಂಗ್ರಹಿಸಲು ಸಿದ್ಧರಿದ್ದೇವೆ. ಅವರ ಗುರುತನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎಸ್‌ಐಟಿ (SIT) ಭರವಸೆ ನೀಡಿದೆ.

ಹಾಸನ ಸಂಸದ ಪ್ರಜ್ವಲ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಮತ್ತು ಅಶ್ಲೀಲ ವಿಡಿಯೋ ಆರೋಪ ಪ್ರಕರಣವು ಬಗೆದಷ್ಟೂ ಹೊರಗೆ ಬರುತ್ತಲೆ ಇದೆ. ದೌರ್ಜನ್ಯ ಪ್ರಕರಣ ಸಂಬಂಧ ಸಂತ್ರತೆಯರಿಂದ ಎಸ್‌ಐಟಿ ಆರಂಭಿಸಿದ ಸಹಾಯವಾಣಿಗೆ 30ಕ್ಕೂ ಹೆಚ್ಚು ಕರೆಗಳು ಬಂದಿವೆ ಎಂದು ಎಸ್‌ಐಟಿ ಮಾಹಿತಿ ನೀಡಿದೆ. ಆದರೆ ಯಾವ ಸಂತ್ರಸ್ತ ಮಹಿಳೆಯು ದೂರು ನೀಡಿಲ್ಲ ಹಾಗಾಗಿ ಸಹಾಯವಾಣಿ ಸಂಖ್ಯೆಯನ್ನು (6360938947) ಸಂಪರ್ಕಿಸಿ ದೂರು ನೀಡಲು ಎಸ್‌ಐಟಿ ಮತ್ತೊಮ್ಮೆ ಮನವಿ ಮಾಡಿದೆ.

ಮಾಹಿತಿಯನ್ನು ಸಂಗ್ರಹಿಸಿ ಗುರುತನ್ನು ಗೌಪ್ಯವಾಗಿ ಇಡುವುದಾಗಿ ಎಸ್‌ಐಟಿಯು ಭರವಸೆ ನೀಡಿದೆ. ಮತ್ತು ಅಧಿಕಾರಿಗಳನ್ನು ನೇರವಾಗಿಯೂ ಸಂಪರ್ಕಿಸಿ ದೂರು ನೀಡಬಹುದು ಎಂದು ಎಸ್‌ಐಟಿ ಹೇಳಿದೆ ಮತ್ತು ಸಹಾಯವಾಣಿಯ ಮೂಲಕ ಬರುವ ದೂರುಗಳನ್ನು ಸಹ ಪರಿಗಣಿಸಲಾಗುವುದು ಎಂದು ತಿಳಿಸಿದೆ. ಈಗಾಗಲೇ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ.

ಶಾಸಕ ಎಚ್‌ಡಿ ರೇವಣ್ಣ (H D Revanna) ವಿರುದ್ಧದ ಮಹಿಳಾ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣರವರ ಪತ್ನಿ ಭವಾನಿಯವರ ಕಾರು ಚಾಲಕ ಅಜಿತ್‌ಗೆ ಎಸ್‌ಐಟಿ ಮೂರು ಬಾರಿ ನೋಟಿಸ್ ನೀಡಿದೆ. ಈಗಾಗಲೇ ಎಸ್‌ಐಟಿಯು ಚಾಲಕ ಅಜಿತ್‌ಗೆ ೨ ಬಾರಿ ನೋಟಿಸ್ ನೀಡಿದರೂ ಸಹ ಅಜಿತ್ (Ajith) ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಚಾಲಕ ಅಜಿತರವರ ವಿಚಾರಣೆಯಿಂದ ಪ್ರಕರಣವು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ.

ಸಂತ್ರಸ್ತೆಯ ವಿಡಿಯೋ ಮಾಡಿದ್ದು ಚಾಲಕ ಅಜಿತ್ ಎಂಬ ಸಂಶಯವಿದ್ದು ಈಗಾಗಲೇ ತನಿಖೆ ಚುರುಕುಗೊಂಡಿದೆ. ಈ ಬಗ್ಗೆ ತನಿಖೆಯ ವಿಚಾರಣೆಗೆ ಹಾಜರಾಗುವಂತೆ ಅಜಿತ್‌ಗೆ ನೋಟಿಸ್ (Notice) ನೀಡಲಾಗಿದೆ. ಪ್ರಾಥಮಿಕ ತನಿಖೆಯ ವೇಳೆ ಅಜಿತ ವಿಡಿಯೋ ಮಾಡಿಕೊಂಡಿರುವ ಬಗ್ಗೆ ಎಸ್‌ಐಟಿಗೆ ಮಾಹಿತಿ ದೊರೆತಿದೆ. ಆದ ಕಾರಣ ಐಪಿಸಿ ಸೆಕ್ಷನ್ 120ಬಿ ಅಡಿಯಲ್ಲಿ ಎಸ್‌ಐಟಿಯು ತನಿಖೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಪೋಲೀಸರೂ ಕೂಡ ಚಾಲಕ ಅಜಿತ್‌ಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ

Exit mobile version