ನನ್ನ ಜೀವನದ ಕೊನೆ ಆಸೆ ಏನು ಗೊತ್ತಾ? : ದೇವೇಗೌಡರು ಹೇಳಿದ ಮಾತು!

HD Devegowda

‘ಇದು ನನ್ನ ಕೊನೆಯ ಚುನಾವಣೆ’ ಎಂದು ಚುನಾವಣೆ(Election) ಸಂದರ್ಭದಲ್ಲಿ ದೇವೇಗೌಡರು(HD Devegowda) ಹೇಳುವ ಸಾಮಾನ್ಯ ಮಾತು.

ಆದರೆ ಈ ಬಾರಿ ದೇವೇಗೌಡರು ‘ನನ್ನ ಜೀವನದ ಕೊನೆಯ ಆಸೆ ಏನು ಗೊತ್ತಾ..?’ ಎಂದು ಹೇಳುವ ಮೂಲಕ ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಪ್ರಶ್ನೆಗೆ ದೇವೇಗೌಡರು ಉತ್ತರವನ್ನು ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ(Chikkamagaluru) ಮಾದ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು ತಮ್ಮ ಜೀವನದ ಕೊನೆಯ ಆಸೆ ಏನು ಎಂಬುದನ್ನು ಹಂಚಿಕೊಂಡಿದ್ದಾರೆ. ನಾನು ಸಾಕಷ್ಟು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ.

ಒರ್ವ ರಾಜಕೀಯ ಮುಖಂಡನಾಗಿ ನಾವು ಎಲ್ಲಿ ತಲುಪಿದ್ದೇನೆ, ಚುನಾವಣೆಯಲ್ಲಿ ನಾವು ಏನು ಮಾಡಬೇಕು, ಪಕ್ಷದ ಮುಂದಿನ ದಾರಿಯ ಬಗ್ಗೆ ನಾನು ಆತಂಕಗೊಂಡಿದ್ದೇನೆ ಎಂದು ಹೇಳಿದರು. ನನಗೆ 90 ವರ್ಷ ವಯಸ್ಸಾಗಿದೆ ಎಂದು ಅನೇಕರು ಹೇಳುತ್ತಾರೆ. ಆದರೆ ನನಗೆ ಇನ್ನೂ 90 ವರ್ಷ ವಯಸ್ಸಾಗಿಲ್ಲ. ಇನ್ನು ಹೋರಾಡುವ ಶಕ್ತಿ ಇದೆ. ನನ್ನ ಜೀವನದಲ್ಲಿ ಸಾಧ್ಯವಾದರೆ ಮತ್ತೊಮ್ಮೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಜೀವನದ ಕೊನೆಯ ಆಸೆ. ಇದಕ್ಕಾಗಿ ನಾನು ಕೊನೆಯವರೆಗೂ ಹೋರಾಟ ಮಾಡುತ್ತೇನೆ. ರಾಜ್ಯದ ಜನರು ನಮಗೆ ಬೆಂಬಲ ನೀಡಿದರೆ ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ.

ಜಾತ್ಯಾತೀತ ಜನತಾದಳ ನೇತೃತ್ವದಲ್ಲಿ ಸ್ವತಂತ್ರ ಸರ್ಕಾರ ರಚಿಸುವುದೇ ನನ್ನ ಕೊನೆಯ ಆಸೆ ಎಂದು ದೇವೇಗೌಡರು ಹೇಳಿದರು. ಇನ್ನು ಮುಂಬರುವ ಚುನಾವಣೆ ದೃಷ್ಟಿಯಿಂದ ಜೆಡಿಎಸ್ ಈಗಾಗಲೇ ಪಕ್ಷ ಸಂಘಟನೆ ಆರಂಭಿಸಿದೆ. ‘ಜನತಾ ಜಲಧಾರೆ’ ಎನ್ನುವ ರಥಯಾತ್ರೆಯ ಮೂಲಕ ಹಳೆ ಮೈಸೂರು ಭಾಗದಲ್ಲಿ ಪಕ್ಷದ ಬಲವರ್ಧನೆಗೆ ದೇವೇಗೌಡರು ಮುಂದಾಗಿದ್ದಾರೆ.

ಹಳೆಮೈಸೂರು ಭಾಗದಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ನಿಟ್ಟಿನಲ್ಲಿ ದೇವೇಗೌಡರು ನಿರಂತರ ಪ್ರವಾಸ ನಡೆಸುತ್ತಿದ್ದಾರೆ.

Exit mobile version