ಕೋಮುವಾದಿ ಪಕ್ಷವನ್ನು ದೂರವಿಡಲು ಕಾಂಗ್ರೆಸ್ ನಮ್ಮನ್ನು ಬೆಂಬಲಿಸಬೇಕು : ರೇವಣ್ಣ!

HD Revanna

ರಾಜ್ಯಸಭಾ ಚುನಾವಣೆ(Rajyasabha Election) ಕುತೂಹಲ ಘಟ್ಟ ತಲುಪಿದೆ. ನಿನ್ನೆ ನಡೆದ ದಿಢೀರ್ ಬೆಳವಣಿಗೆಗಳು ರಾಜಕೀಯ(Political) ಲೆಕ್ಕಾಚಾರಗಳನ್ನೇ ತಲೆಕೆಳಗಾಗುವಂತೆ ಮಾಡಿವೆ.

ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಹೆಣೆದ ತಂತ್ರಕ್ಕೆ ಬಿಜೆಪಿ ಕೂಡಾ ಪ್ರತಿತಂತ್ರ ರೂಪಿಸಿದ ಪರಿಣಾಮ ಇದೀಗ ಜೆಡಿಎಸ್(JDS) ಇಕ್ಕಟ್ಟಿಗೆ ಸಿಲುಕಿದೆ. ನಿನ್ನೆ ಕಾಂಗ್ರೆಸ್ ಸಂಖ್ಯಾಬಲ ಇರದಿದ್ದರೂ 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಇದನ್ನರಿತ ಬಿಜೆಪಿ ಕೂಡಾ ಸಂಖ್ಯಾಬಲ ಇರದಿದ್ದರೂ 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲದಿಂದ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕೆಂದು ತಂತ್ರ ರೂಪಿಸಿದ್ದ ಜೆಡಿಎಸ್‍ಗೆ ಎರಡೂ ಪಕ್ಷಗಳ ನಡೆ ಆಘಾತ ನೀಡಿದೆ.

ಹೀಗಾಗಿ ಇದೀಗ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ(HD Revanna) ಕೋಮುವಾದಿ ಪಕ್ಷವನ್ನು ದೂರವಿಡಲು ಕಾಂಗ್ರೆಸ್ ನಮ್ಮನ್ನು ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ. ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿರುವ ಅವರು, ನಮಗೆ ಬೆಂಬಲ ನೀಡಲು ಒಂದು ಕೋಮುವಾದಿ ಪಕ್ಷ ಮತ್ತೊಂದು ಕೋಮುವಿರೋಧಿ ಪಕ್ಷವಿದೆ. ಹೀಗಾಗಿ ನಾವು ಕೋಮುವಾದಿ ವಿರೋಧಿ ಕಾಂಗ್ರೆಸ್ ಪಕ್ಷದ ಬೆಂಬಲ ಕೋರುತ್ತಿದ್ದೇವೆ. ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿ, ಕೋಮುವಾದಿಗಳನ್ನು ದೂರವಿಡಲು ಕಾಂಗ್ರೆಸ್ ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಬೇಕು.

ನಾವು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷೆ(Congress President) ಸೋನಿಯಾ ಗಾಂಧಿಯವರೊಂದಿಗೆ(Sonia Gandhi) ಮಾತನಾಡಿದ್ದೇವೆ. ಇನ್ನು ನಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ನಾವು ಕೂಡಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಬಲ ಕೇಳಲು ಸಮಯ ಕೇಳಿದ್ದೇವೆ ಎಂದು ರೇವಣ್ಣ ತಿಳಿಸಿದ್ದಾರೆ. ಇನ್ನು ಶುಕ್ರವಾರವೇ ದೇವೇಗೌಡರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆ ಮಾತನಾಡಿದ್ದರು,

ಆದರೆ ಸಿದ್ದರಾಮಯ್ಯನವರು ದಿಢೀರನೇ 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂದು ರೇವಣ್ಣ ಅಸಮಾಧಾನ ಹೊರಹಾಕಿದರು.

Exit mobile version