ಮುಂದಿನದು ಭಯೋತ್ಪಾದನಾ ಗ್ಯಾರಂಟಿ ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ವಾಗ್ದಾಳಿ ನಡೆಸಿದ ಎಚ್‌ಡಿ ದೇವೇಗೌಡ

Mysore: ಕಾಂಗ್ರೆಸ್ (Congress) ಸರ್ಕಾರ ಕನ್ನಡಿಗರ ಸಂಪತ್ತನ್ನು ಲೂಟಿ ಮಾಡಿ ಹೊರ ರಾಜ್ಯಗಳಿಗೆ ಕಳುಹಿಸಿ ಬಿಜೆಪಿಯನ್ನು ಸೋಲಿಸುವ ಪ್ರಯತ್ನ ನಡೆಸುತ್ತಿದೆ. ಆದರೆ, ಕಾಂಗ್ರೆಸ್‌ನ ಈ ಪ್ರಯತ್ನ ಫಲಿಸುವುದಿಲ್ಲ ಅವರು ಗೆಲ್ಲುವುದಿಲ್ಲ.ಗ್ಯಾರಂಟಿ ಭಾಗ್ಯಗಳ ಮೂಲಕ ಅಧಿಕಾರಕ್ಕೆ ಬಂದವರು ಆರನೇ ಗ್ಯಾರಂಟಿ ಯೋಜನೆಯಾಗಿ ಭಯೋತ್ಪಾದನೆ ಗ್ಯಾರಂಟಿ ಕೂಡಾ ನೀಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರು ಭಾನುವಾರ ಹೇಳಿದ್ದಾರೆ ಮೈಸೂರಿನಲ್ಲಿ (Mysore) ಭಾನುವಾರ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ದೇವೇಗೌಡ (Devegowda) ಅವರು ಅಬ್ಬರದ ಪ್ರಚಾರ ನಡೆಸಿ, ಎನ್‌ಡಿಎ ಅಭ್ಯರ್ಥಿಗಳ ಪರ ಮತ ಯಾಚಿಸಿದರು.

ನನ್ನಿಂದ ಕಲಿತವರು ನಮ್ಮ ಪಕ್ಷದಲ್ಲಿ ಗುರುತಿಸಿಕೊಂಡವರೆ ನಮ್ಮನ್ನು ಹಳ್ಳಕ್ಕೆ ತಳ್ಳಲು ಯೋಚಿಸುತ್ತಿದ್ದಾರೆ. ಗ್ಯಾರಂಟಿ ಭಾಗ್ಯಗಳ (Guarantee Scheme) ಮೂಲಕ ಜನರನ್ನು ನಂಬಿಸಿ ಮೋಸ ಮಾಡಿದ್ದಾರೆ. ನನ್ನ 64 ವರ್ಷ ರಾಜಕೀಯ ಜೀವನದಲ್ಲಿ ಇಂತಹ ಲೂಟಿ ಮಾಡುವ ಸರ್ಕಾರವನ್ನು ನೋಡಿಲ್ಲ. ರಾಜ್ಯದ ಸಂಪತ್ತು ಕಾಂಗ್ರೆಸ್ ದೋಚುತ್ತಿದೆ. ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‌ಗಢಕ್ಕೆ ರಾಜ್ಯದ ಜನರ ಸಂಪತ್ತನ್ನು ಲೂಟಿ ಮಾಡಿ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಜೆಡಿಎಸ್ (JDS) ಮುಂದಿನ ದಿನಗಳಲ್ಲಿ ಬಿಜೆಪಿಯೊಂದಿಗೆ ವಿಲೀನವಾಗುತ್ತದೆ ಎಂದು ಟೀಕೆ ಮಾಡುತ್ತಾರೆ ಆದರೆ ನಮಗೆ ಕೇವಲ ಮೂರು ಸೀಟು ಮುಖ್ಯವಲ್ಲ. ನಮಗೆ 28 ಕ್ಷೇತ್ರಗಳೂ ಮುಖ್ಯ. ಎಲ್ಲ ಕಡೆಗಳಲ್ಲೂ ಪ್ರಚಾರಕ್ಕೆ ಬರುತ್ತೇನೆ, ನೀವು ಕರೆದ ಕಡೆಗೆ ಬರುತ್ತೇನೆ. ನಾವು ಕನಿಷ್ಠ 24 ಕ್ಷೇತ್ರಗಳಲ್ಲಾದರೂ ಗೆಲುವು ಸಾಧಿಸಬೇಕು. ದೇಶವನ್ನು ಉಳಿಸಲು ಎನ್‌ಡಿಎ ಮೈತ್ರಿಕೂಟ (NDA Alliance) 400 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಇದಕ್ಕೆ ಕರ್ನಾಟಕ ರಾಜ್ಯದಿಂದ ಕೊಡುಗೆ ನೀಡಬೇಕು.

ಬಳಿಕ ತಮ್ಮ ಪುತ್ರ ಕುಮಾರಸ್ವಾಮಿಯವರು ರಾಜ್ಯದ ಜನತೆಯ ಒಳಿತಿಗಾಗಿ ನಡೆಸಿದ ಪಂಚರತ್ನ ಕಾರ್ಯಕ್ರಮಗಳನ್ನು ಸ್ಮರಿಸಿದರು. ನನ್ನ ತಲೆಯಲ್ಲಿ ಬುದ್ಧಿ ಇಲ್ಲದೆ ಎನ್‌ಡಿಎ ಮೈತ್ರಿಕೂಟದೊಂದಿಗೆ ಹೋಗು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (H.D Kumaraswamy) ಗೆ ನಾನು ಹೇಳಿಲ್ಲ. ಈ ರಾಜ್ಯವನ್ನು ಕಾಂಗ್ರೆಸ್ ಲೂಟಿ ಮಾಡುತ್ತಿರುವುದನ್ನು ತಪ್ಪಿಸಲು ನೀನು ಮೋದಿ ಅವರೊಂದಿಗೆ ಹೋಗು ಎಂದು ನಾನೇ ಕುಮಾರಸ್ವಾಮಿ ಅವರನ್ನು ಕಳುಹಿಸಿಕೊಟ್ಟೆ ಎಂದು ಹೇಳಿದ್ದಾರೆ.

Exit mobile version