ಕ್ಷೌರದ ಅಂಗಡಿ ಇಟ್ಟುಕೊಳ್ಳಲು ಅಗ್ನಿವೀರರು ಅಂತ ಸರ್ಟಿಫಿಕೇಟ್ ಕೊಡಬೇಕಾ? : ಹೆಚ್.ಡಿಕೆ

HDK - HD Kumarswamy Statement over Devanalli land

‘ಅಗ್ನಿಪಥ್’ ಯೋಜನೆ(Agnipath Yojana) ಆರ್‍ಎಸ್‍ಎಸ್ ಐಡಿಯಾ. ಆರ್‍ಎಸ್‍ಎಸ್(RSS) ತನ್ನ ಚಟುವಟಿಕೆಗಳನ್ನು ಸೇನೆಯೊಳಗೆ ನುಸುಳಿಸಲು ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಹಿಂದೆ ಜರ್ಮನಿಯ(Germany) ಹಿಟ್ಲರ್‍ನ(Hitler) ನಾಜಿ ಪಡೆಯನ್ನು ಭಾರತದಲ್ಲಿ ಪ್ರಾಯೋಗಿಕವಾಗಿ ತರುವ ಕಾರ್ಯಯೋಜನೆ ಇದಾಗಿದೆ. ಇನ್ನು ಯಾವ ಉದ್ದೇಶದಿಂದ 10 ಲಕ್ಷ ಯುವಕರಿಗೆ ಈ ಯೋಜನೆ ಮೂಲಕ ಉದ್ಯೋಗ ಕೊಡಲು ಕೇಂದ್ರ ಸರ್ಕಾರ(Central Government) ಮುಂದಾಗಿದೆ.

ಕ್ಷೌರದ ಅಂಗಡಿ ತೆಗೆಯಲು ಅವರನ್ನು ಮಿಲಿಟರಿಗೆ ಸೇರಿಸಿಕೊಳ್ಳಲಾಗುವುದು ಎಂದು ಈಗಾಗಲೇ ಅನೇಕ ಬಿಜೆಪಿ(BJP) ನಾಯಕರೇ ಹೇಳಿದ್ದಾರೆ. ಹಾಗಾದರೆ ಕ್ಷೌರದ ಅಂಗಡಿ ಇಟ್ಟುಕೊಳ್ಳಲು ಮಿಲಿಟರಿ ಟ್ರೈನಿಂಗ್ ಕೊಡಬೇಕಾ? ಕ್ಷೌರದ ಅಂಗಡಿ ಇಟ್ಟುಕೊಳ್ಳಲು ಅಗ್ನಿವೀರರು ಅಂತ ಸರ್ಟಿಫಿಕೇಟ್ ಕೊಡಬೇಕಾ? ಎಂದು ಜೆಡಿಎಸ್ ನಾಯಕ(JDS Leader) ಎಚ್.ಡಿ.ಕುಮಾರಸ್ವಾಮಿ(HD Kumarswamy) ಅವರು ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಹಾಸನದಲ್ಲಿ(Hassan) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಯಾರನ್ನ ಕೇಳಿ ಕೇಂದ್ರ ಸರ್ಕಾರ ‘ಅಗ್ನಿಪಥ್’ ಯೋಜನೆಯನ್ನು ಜಾರಿ ಮಾಡುತ್ತಿದೆ. ಈ ಯೋಜನೆ ಜಾರಿಗೆ ರಕ್ಷಣಾ ಸಂಸತ್ ಸಮಿತಿ ಶಿಫಾರಸು ಮಾಡಿತ್ತಾ? ಅಥವಾ ಈ ರೀತಿಯ ಯೋಜನೆಯನ್ನು ಜಾರಿಗೆ ತರಬೇಕೆಂದು ಭಾರತೀಯ ಸೇನೆ ಒತ್ತಾಯಿಸಿತ್ತಾ? ಈ ಬಗ್ಗೆ ಕೇಂದ್ರ ಸರ್ಕಾರ ದೇಶದ ಜನತೆಗೆ ಉತ್ತರ ನೀಡಬೇಕಿದೆ ಎಂದರು. ಇನ್ನು ಈಗಾಗಲೇ ಇರುವ ಸೇನೆಯಿಂದಲೇ ಇಷ್ಟು ವರ್ಷಗಳ ಕಾಲ ದೇಶವನ್ನು ರಕ್ಷಣೆ ಮಾಡಲಿಲ್ಲವೇ?

ಸದ್ಯದ ನಮ್ಮ ಭಾರತೀಯ ಸೇನೆ(Indian Army) ಬಲಿಷ್ಠವಾಗಿಲ್ಲವೇ? ಯಾವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರುತ್ತಿದೆ ಎಂದು ಬಿಜೆಪಿ ಸರ್ಕಾರ ಜನತೆಗೆ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.

Exit mobile version