ಬೇಸಿಗೆಯಲ್ಲಿ ಮಾವಿನ ಹಣ್ಣಿನ ರಸ ಕುಡಿಯುವವರಿಗೆ ಈ ಮಾಹಿತಿ ತಿಳಿದಿರಲಿ!

ಈ ಬೇಸಿಗೆಯ ಬಿಸಿಲಿಗೆ ದೇಹಕ್ಕೆ ತಂಪು ಪಾನೀಯ ಆಹಾರಗಳನ್ನು ಸೇವಿಸುವುದು ಒಳ್ಳೆಯದು ಎಂದು ಡಾಕ್ಟರ್ (Doctor) ಹೇಳುತ್ತಾರೆ. ಅದೇ ರೀತಿ ಮಾವಿನ ಹಣ್ಣಿನ ಫ್ರೆಶ್ ಜ್ಯೂಸ್ ಕುಡಿಯುವುದರಿಂದ ತೇವಗಳೆತ ತಡೆಯಬಹುದು. ಮಾವಿನ ಹಣ್ಣಿನ ದ್ರವ ಕುಡಿಯುವುದರಿಂದ ದೇಹಕ್ಕೆ ವಿಟಮಿನ್ ಗಳು, ಫೈಬರ್ (Fiber) ಮತ್ತು ಇನ್ನಿತರ ಪೋಷಕಾಂಶಗಳು ದೊರೆಯುತ್ತವೆ. ಅದಕ್ಕಾಗಿ ದಿನನಿತ್ಯ ಮಾವಿನ ಹಣ್ಣಿನ ಜ್ಯೂಸ್ ಸೇವಿಸುವುದನ್ನು ರೂಢಿ ಮಾಡಿಕೊಳ್ಳಿ. ಇದರಿಂದ ಆಗುವ ಅನುಕೂಲಗಳೇನು? ಅನಾನುಕೂಲಗಳೇನು? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.

ಹಣ್ಣುಗಳಲ್ಲಿ ರಾಜನ ಸ್ಥಾನ ಪಡೆದಿರುವ ಮಾವಿನ ಹಣ್ಣು ಬೇಸಿಗೆ ಕಾಲದಲ್ಲಿ ಹೆಚ್ಚು ದೊರೆಯುತ್ತವೆ . ಈ ರುಚಿ ಭರಿತ ಹಣ್ಣುಗಳನ್ನು ಅದರ ರುಚಿ ಮಾತ್ರವಲ್ಲದೆ ಆರೋಗ್ಯ ಉಪಯೋಗಗಳಿಂದ ಪ್ರಪಂಚದ ವಿವಿಧ ಕಡೆಗಳಲ್ಲಿ ಸೇವಿಸಲಾಗುತ್ತದೆ. ತಾಜಾ ಮಾವು ತಿನ್ನುವುದರಿಂದ ಅದರ ಎಲ್ಲ ವಿಟಮಿನ್ (Vitamin)ಗಳು ದೇಹಕ್ಕೆ ಲಭ್ಯವಾಗಲಿದೆ ಮತ್ತು ದ್ರವ ರೂಪದಲ್ಲೂ ಸೇವಿಸಬಹುದು.

ಈ ಬೇಸಿಗೆಯ ತಾಪಕ್ಕೆ. ತಂಪು ಪಾನೀಯಗಳನ್ನೂ ಕುಡಿಯುವುದರಿಂದ ದೇಹಕ್ಕೆ ಉತ್ತಮ ಎಂದು ತಜ್ಞರು ಹೇಳುತ್ತಾರೆ. ಅದೇ ರೀತಿ ಹಣ್ಣಿನ ಫ್ರೆಶ್ ಜ್ಯೂಸ್ ಸೇವಿಸುವುದರಿದ ದೇಹದ ಡಿಹೈಡ್ರೇಷನ್ ತಡೆಯುವ ಮೂಲಕ ಆರೋಗ್ಯದಿಂದ ಇರಬಹುದು. ಆದ್ದರಿಂದ ಇಂದೇ ಮಾವಿನ ಹಣ್ಣಿನ ಜ್ಯೂಸ್ (Mango Juice) ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಕುಡಿಯುತ್ತಿದ್ದರೆ ಉತ್ತಮ.

ಮಾವಿನ ಹಣ್ಣಿನ ರಸ ಕುಡಿಯುವುದರಿಂದ ಆಗುವ ಅನುಕೂಲಗಳು :
ಪೋಷಕಾಂಶಗಳು ದೊರೆಯುತ್ತವೆ :
ಮಾವಿನ ದ್ರವವು ವಿಟಮಿನ್ ಸಿ , ಕ್ಯಾಲ್ಸಿಯಂ ಮತ್ತು ಅಗತ್ಯ ಅಂಶಗಳೂ ಸೇರಿದಂತೆ ಖನಿಜಗಳಿಂದ ಕೂಡಿಕೊಂಡಿದೆ ,ಹೇಳಬೇಕೆಂದರೆ ಇದು ಆರೋಗ್ಯಕ್ಕೆ ಅನುಕೂಲವಾಗಿರುತ್ತದೆ ಎಂದು ಡಾಕ್ಟರ್ ಹೇಳುತ್ತಾರೆ .

ರೋಗ ನಿರೋಧಕ ಶಕ್ತಿ ಲಭಿಸುತ್ತದೆ:
ಮಾವಿನ ಜ್ಯೂಸ್ನಲ್ಲಿ ವಿಟಮಿನ್ ಸಿ (Vitamin C) ದೊರಕುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ. ಜೊತೆಗೆ ವಿಟಮಿನ್ ಸಿ ಬಿಳಿ ರಕ್ತ ಕಣಗಳ ಉತ್ಪನ್ನ ಹೆಚ್ಚುಸುತ್ತದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ:
ಮಾವಿನ ದ್ರವವು ಜೀರ್ಣಕ್ರಿಯೆಗೆ ಸಹಾಯಕಾರಿಯಾಗಿದ್ದು, ಮಲಬದ್ಧತೆ ತಡೆಯಲು ಅನುಕೂಲವಾಗುತ್ತದೆ .

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ:
ಮಾವಿನ ರಸದಲ್ಲಿ ವಿಟಮಿನ್ ಸಿ ಇರುವುದರಿಂದ ಮುಖದ ಮೇಲಾಗುವ (Skin Problem) ಸುಕ್ಕುಗಳನ್ನು ತಡೆಗಟ್ಟುವುದರಲ್ಲಿ ಅನುಕೂಲವಾಗಿದೆ. ಇದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

ಕಣ್ಣಿನ ದೃಷ್ಟಿ ಸುಧಾರಿಸುತ್ತದೆ:
ಮಾವಿನ ಜ್ಯೂಸ್ ಸೇವಿಸುವುದರಿಂದ ಇದು ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ಕಣ್ಣಿನ ದೃಷ್ಟಿಗೂ ಉತ್ತಮವಾಗಿದೆ.

ಮೆದುಳಿನ ಆರೋಗ್ಯವನ್ನು ಕಾಪಾಡಲು ಉತ್ತಮವಾಗಿದೆ :
ಮಾವು ಮೆದುಳಿನ ಕೋಶಗಳನ್ನು ಒತ್ತಡದಿಂದ ಪಾರುಮಾಡಲು ಸಹಾಯ ಮಾಡುತ್ತದೆ.

ಮಾವಿನ ಹಣ್ಣಿನ ರಸದ ಸೇವನೆಯಿಂದ ಆಗುವ ಅನಾನುಕೂಲಗಳು ಯಾವುವು?
ಅತಿಯಾದ ಸೇವನೆಯಿಂದ ಕೆಲವು ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು
ಜೀರ್ಣಕಾರಿ ಸಮಸ್ಯೆ .
ಕೆಲವರಿಗೆ ಅಲರ್ಜಿಯಾಗಬಹುದು.
ನೈಸರ್ಗಿಕ ಸಕ್ಕರೆ ಅಂಶದಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ ಆದ್ದರಿಂದ ಮಧುಮೇಹಿಗಳು ಮಾವಿನ ರಸವನ್ನು ಸೇವಿಸುವಾಗ ಸ್ವಲ್ಪ ಜಾಗ್ರತೆವಹಿಸಬೇಕು.
ಕೆಲವರಲ್ಲಿ ತೂಕ ಹೆಚ್ಚಳವಾಗಬಹುದು.

Exit mobile version