ಈ ವರ್ಷ ರಾಜ್ಯಾದ್ಯಂತ ಹಿಂದೆಂದೂ ಕಾಣದ ಸೂರ್ಯನ ಶಾಖದ ಪ್ರಖರತೆ ಫೆಬ್ರವರಿಯಿಂದ ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೂ ಈ ಪ್ರಖರತೆ ಜೂನ್ (June) ಎರಡನೇ ವಾರದ ವರೆಗೂ ಮುಂದುವರೆಯುವುದರಿಂದ ಖಂಡಿತವಾಗಿ ನಾವು ಕೆಲವೊಂದು ವ್ಯವಸ್ಥೆಗಳನ್ನು ಮಾಡಿಕೊಳ್ಳಲೇಬೇಕಿದೆ. ಇಲ್ಲವಾದರೆ ವಯಸ್ಕರು ಮಕ್ಕಳು ವಯೋವೃದ್ಧರು ಎಲ್ಲರೂ ಜೀವಕ್ಕೆ ಅಪಾಯ ತಂದುಕೊಳ್ಳಬೇಕಾದೀತು, ಮಕ್ಕಳಲ್ಲಿ Dehydration ವೃದ್ಧರಲ್ಲಿ Sun stroke ಮಧ್ಯವಯಸ್ಕರಲ್ಲಿ ವಿಪರೀತ ತಲೆನೋವು ಹೆಚ್ಚಾಗುತ್ತದೆ. ಆದ್ದರಿಂದ ಕೆಳಗೆ ಸೂಚಿಸುವಂತೆ ಈ ಬೇಸಿಗೆಯಲ್ಲಿ ತಮ್ಮನ್ನು ತಾವು ಕಾಪಾಡಿಕೊಳ್ಳಿ
1) ಗೃಹಿಣಿಯರು ನಿಮ್ಮ ಹೊರಗಿನ ಕೆಲಸಗಳನ್ನು ಸಂಜೆ ವೇಳೆಯಲ್ಲಿ ಮುಗಿಸಿಕೊಳ್ಳಿ.
2) ಬಿಸಿಲಿನಲ್ಲಿ ಹೊರ ಹೋಗಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಬಿಳಿ ಬಣ್ಣದ ಛತ್ರಿಯನ್ನು ಬಳಸಿ.
3) ಬಿಸಿಲಿನ ಪ್ರಖರತೆಯನ್ನು ಕಪ್ಪು ಮತ್ತು ನೀಲಿ ಬಣ್ಣ ಬೇಗ ಹೀರುವುದರಿಂದ ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ.
4) ಸಾಧ್ಯವಾದಷ್ಟೂ ಕಾಟನ್ ಬಟ್ಟೆಗಳನ್ನು (Cotton Dress) ಧರಿಸಿ.
5) ವಯೋವೃದ್ಧರಿಗೆ ಮತ್ತು ಮಕ್ಕಳಿಗೆ ಮನೆಯಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯಲು ಹೇಳಿ.
6) ಈ ಬಿಸಿಲಿನಲ್ಲಿ ವಿಟಮಿನ್ “ಸಿ” (Vitamin C) ಕೊರತೆ ಎದುರಾಗುವುದರಿಂದ ಪ್ರಕೃತಿಯ ಅಮೂಲ್ಯ ಕೊಡುಗೆ ನಿಂಬೆಹಣ್ಣಿನ ಪಾನಕ ಮಾಡಿಕೊಂಡು ಕುಡಿಯಿರಿ ಇಲ್ಲಿಸಕ್ಕರೆ ಬದಲು ಬೆಲ್ಲವನ್ನು ಬಳಸಿ.
7) ಬೆಳಗ್ಗೆ ಎದ್ದ ತಕ್ಷಣ “ತುಳಸಿ” ಎಲೆಗಳನ್ನು Mixi ಯಲ್ಲಿ ರುಬ್ಬಿಕೊಂಡು ಎರಡು ಲೋಟದಷ್ಟು ನೀರನ್ನು ಬೆರೆಸಿ ಕುಡಿಯಿರಿ ಇದರಿಂದ ಕೆಲ ಮಾಡುವಾಗ ಸುಸ್ತಾಗುವುದಿಲ್ಲ.
8 ) ಈ ಸಮಯದಲ್ಲಿ ತಲೆ ಮತ್ತು ಮೆದುಳು ತಂಪಾಗಿರಬೇಕು ಆದ್ದರಿಂದ ಮಕ್ಕಳಿಗೆ ಎರಡು ದಿನಕ್ಕೊಮ್ಮೆ ಕೊಬ್ಬರಿ ಎಣ್ಣೆ ಬದಲು ರಾತ್ರಿ ಮಲಗುವಾಗ “ಹರಳೆಣ್ಣೆ” ಹಚ್ಚಿ ಬೆಳಗ್ಗೆ ಸ್ನಾನ ಮಾಡಿಸಿ.ವಯಸ್ಕರೂ ಇದನ್ನು ಅನುಸರಿಸಬೇಕು.
9) ರಾತ್ರಿ ಮಲಗುವ ಮೊದಲು ತಣ್ಣೀರಿನ ಬಟ್ಟೆಯಿಂದ ನೆಲವನ್ನು ಒರೆಸಿಕೊಂಡು ತೆಳುವಾದ ಬಟ್ಟೆಯೊಂದಿಗೆ ಚಾಪೆ ಮೇಲೆ ಮಲಗುವುದು ಸೂಕ್ತ, ಹಾಸಿಗೆ ಕೂಡ ಈ ಸಮಯದಲ್ಲಿ ಉಷ್ಣ ಹೆಚ್ಚು ಮಾಡುತ್ತದೆ.
10) ಹೆಸರು ಕಾಳುಗಳನ್ನು ನೀರಿನಲ್ಲಿ ಅರ್ಧ ಗಂಟೆಯಷ್ಟು ನೆನಸಿಟ್ಟು ನಂತರ ಮಿಕ್ಸಿಯಲ್ಲಿ ಜ್ಯೂಸ್ (Juice) ಮಾಡಿಕೊಂಡು. ದಿನಕ್ಕೆರಡು ಬಾರಿ ಕುಡಿಯಿರಿ ಇದರಿಂದ ದೇಹ ತಂಪಾಗಿರುತ್ತದೆ.
11 ) ಬಾಣಂತಿ ಹೆಣ್ಣು ಮಕ್ಕಳು ಕಾಯಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಇಲ್ಲವಾದರೆ ತಾಯಿ ಮತ್ತು ಮಗುವಿಗೆ ಯಾವುದೇ ಸೋಂಕು ತಗುಲಬಹುದು.
12) ಈ ಸಮಯದಲ್ಲಿ ಮೊಸರಿನ ಬದಲು ಕಡೆದ ಮಜ್ಜಿಗೆಯನ್ನು ಆಹಾರಕ್ಕೆ ಬಳಸಿ, ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುವುದರಿಂದ ಅಸಿಡಿಟಿ ಆಗುವುದಿಲ್ಲ.
13) 5 ವರ್ಷದ ಒಳಗಿನ ಮಕ್ಕಳಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಒಂದು ಚಿಟಿಕೆಯಷ್ಟು ಅಯೋಡಿನ್ ಉಪ್ಪು ಬೆರೆಸಿದ ನೀರನ್ನು ಕುಡಿಸುತ್ತಿರಬೇಕು. ಇದರಿಂದ ಮಕ್ಕಳನ್ನು Dehydration ನಿಂದ ಕಾಪಾಡಿಕೊಳ್ಳಬಹುದು.
14) ಈ ಬೇಸಿಗೆ ದಿನಗಳಲ್ಲಿ ತಣ್ಣೀರಿನ ಸ್ನಾನ ಕ್ಷೇಮ. ದಿನಕ್ಕೆರಡು ಬಾರಿ ಅಂದರೆ ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಒಂದು ಬಕೆಟ್ ತಣ್ಣೀರಿಗೆ ಕನಿಷ್ಠ 10 ಪುದಿನ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ತಣ್ಣೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ಬೆವರಿನ ದುರ್ಗಂಧ ದೂರವಾಗುವುದಲ್ಲದೇ ಬೆವರು ಗುಳ್ಳೆಗಳು ಚರ್ಮದ ಮೇಲೆ ಬರುವುದಿಲ್ಲ.
15) ಹೆಚ್ಚಾಗಿ ಫ್ರೆಷ್ ತರಕಾರಿ (Fresh Vegetable) ಮತ್ತು ಹಣ್ಣು ಉಪಯೋಗಿಸಿ.
ಈ ಸಂದೇಶವನ್ನು ನೀವೂ ಪಾಲಿಸಿ. ಸಾಧ್ಯವಾದರೆ ನಿಮ್ಮ ಮಿತ್ರರಿಗೂ ತಿಳಿಸಿ.