ಚಲನಚಿತ್ರ ಅಕಾಡೆಮಿಯಲ್ಲಿದೆ ಸಹಾಯವಾಣಿ!

ಸೇವಾಸಿಂಧು ಮೂಲಕ ವಿಶೇಷ ಪ್ಯಾಕೇಜ್ ಪಡೆಯುವ ಕನ್ನಡ ಚಿತ್ರರಂಗದ ಫಲಾನುಭವಿಗಳ ಅನುಕೂಲಕ್ಕಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಚಾಲನೆ ದೊರೆತಿದೆ.

ಸಹಾಯವಾಣಿಗೆ ಚಾಲನೆ ನೀಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಕೋವಿಡ್-19 ಎರಡನೆ ಅಲೆಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ನೀಡಿರುವ ವಿಶೇಷ ಪ್ಯಾಕೇಜ್ ಸೇವಾಸಿಂಧು ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ದಾಖಲೆಗಳನ್ನು ಸಲ್ಲಿಸಿ ಫಲಾನುಭವಿಗಳು ಸಹಾಯಧನ ಪಡೆಯಬಹುದಾಗಿದೆ. ಚಿತ್ರರಂಗದ ಕೆಲವು ವಿಭಾಗದ ಕೆಲಸಗಾರರಿಗೆ ಈ ಪ್ರಕ್ರಿಯೆ ಬಗ್ಗೆ ಪೂರ್ಣ ಅರಿವಿಲ್ಲದಿರುವುದರಿಂದ ಅಕಾಡೆಮಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ ಎಂದು ತಿಳಿಸಿದರು.

ಕನ್ನಡ ಚಿತ್ರರಂಗದ ಅಸಂಘಟಿತ ಕಲಾವಿದರು, ತಂತ್ರಜ್ಞರು, ಕಾರ್ಮಿಕರು, ಇತರೆ ವಿಭಾಗದಲ್ಲಿ ಕೆಲಸ ನಿರ್ವಹಿಸುವವರಿಗೆ ಕೋವಿಡ್ ಸಂಕಷ್ಟದ ಸಂದರ್ಭದ ಅನುಕೂಲಕ್ಕಾಗಿ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪಂದಿಸಿದ್ದು, ಎರಡನೇ ಹಂತದ ಪ್ಯಾಕೇಜ್ ಘೋಷಣೆಯಲ್ಲಿ ಚಿತ್ರಮಂದಿರದ ಕಾರ್ನಿಕರೂ ಸೇರಿದಂತೆ ಚಿತ್ರೋದ್ಯಮದ 22ಸಾವಿರ ಜನರಿಗೆ ತಲಾ ಮೂರು ಸಾವಿರ ರೂ.ಗಳ ಸಹಾಯಧನ ಘೋಷಿಸಿದ್ದು, ಚಿತ್ರರಂಗ ಸದಾ ಸ್ಮರಿಸಿಸುತ್ತದೆ ಎಂದು ಹೇಳಿದರು.

ಅಲ್ಲದೆ ಚಿತ್ರೋದ್ಯಮದ ಕಾರ್ಮಿಕರಿಗಾಗಿ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಸಹಕರಿಸಿದ ಕಾರ್ಮಿಕ ಸಚಿವರು, ಆಹಾರ ಸಚಿವರು ಹಾಗೂ ವಾರ್ತಾ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ಗೌರವಪೂರ್ವ ಅಭಿನಂದನೆಗಳು. ಈ ಪ್ರಕ್ರಿಯೆಯಲ್ಲಿ ಶ್ರಮಿಸಿದ ನಿರ್ದೇಶಕಿ ರೂಪ ಅಯ್ಯರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೆ ಹಾಗೂ ಚಿತ್ರೋದ್ಯಮದ ಇತರ ಗಣ್ಯರಿಗೆ ಅಕಾಡೆಮಿ ಆಭಾರಿಯಾಗಿದೆ ಎಂದರು.

Exit mobile version