ಕಿಡ್ನಿ ಸಮಸ್ಯೆಯಿಂದ ದೂರ ಇರ್ಬೇಕಾ? ಹಾಗಾದ್ರೆ ಗಿಡಮೂಲಿಕೆಗಳ ಬಗ್ಗೆ ತಿಳಿದುಕೊಳ್ಳಿ..

Herbs Benefits for Kidney Problem: ಆರೋಗ್ಯದಲ್ಲಿ (Health) ಒಂದಲ್ಲ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತಿರುತ್ತದೆ. ಪ್ರತಿಯೊಂದಕ್ಕೂ ಒಂದೊಂದು ಸಮಸ್ಯೆಯಿದ್ದು, ಮೂತ್ರಪಿಂಡ ಮತ್ತು ಲಿವರ್​ನ ಆರೋಗ್ಯವನ್ನು ಸುಧಾರಿಸಲು ನಾವು ಬಳಸುವ ಆಹಾರದಲ್ಲಿ ಯಾವ ಯಾವ ಗಿಡಮೂಲಿಕೆಗಳನ್ನು#Herbs ಡಯೆಟ್​ನಲ್ಲಿ ಸೇರಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಪ್ರಯೋಜನಗಳಿವೆ ಎಂಬುವುದರ ಉಪಯುಕ್ತ ಮಾಹಿತಿ ಇಲ್ಲಿದೆ…

ಕೊತ್ತಂಬರಿ:
ಕೊತ್ತಂಬರಿ ಸೊಪ್ಪನ್ನು (Coriander Leaves) ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಬಳಸುವುದರಿಂದ ಮೂತ್ರಪಿಂಡ ಮತ್ತು ಮೂತ್ರಕೋಶದ ಕಾರ್ಯಗಳನ್ನು ನಿಯಂತ್ರಿಸುವಲ್ಲಿ ಬಹಳಷ್ಟು ಪ್ರಯೋಜನಕಾರಿಯಾಗಿದೆ.

ಶುಂಠಿ:
ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ಶುಂಠಿ (Ginger) ಸಹಾಯಕಾರಿಯಾಗಿದ್ದು, ನೋವು ಮತ್ತು ಊತವನ್ನು ಕಡಿಮೆ ಮಾಡಲು ಶುಂಠಿ ತುಂಬಾ ಪ್ರಯೋಜನಕಾರಿಯಾಗಿದೆ.

ಶ್ರೀಗಂಧ:
ಶ್ರೀಗಂಧದ ಆಂಟಿಮೈಕ್ರೊಬಿಯಲ್ (Antimicrobial) ಗುಣಲಕ್ಷಣಗಳಿಂದಾಗಿ ಇದು ಯುಟಿಐ ಸೋಂಕಿಗೆ ಚಿಕಿತ್ಸೆ ನೀಡುವಾಗ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ.

ತ್ರಿಫಲ:
ತ್ರಿಫಲವು ಗಿಡಮೂಲಿಕೆಗಳ ಸಂಯೋಜನೆಯಾಗಿದೆ. ಇದು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡಗಳು ಮತ್ತು ಯಕೃತ್ತಿನ ನೈಸರ್ಗಿಕ ಕಾರ್ಯವನ್ನು ಸುಧಾರಿಸುತ್ತದೆ.

ತುಳಸಿ:
ತುಳಸಿ (Basil) ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಚಯಾಪಚಯವನ್ನು ಹೆಚ್ಚಿಸುವ ಮೂಲಕ ದೇಹದಿಂದ ವಿಷವನ್ನು ಬಿಡುಗಡೆ ಮಾಡುತ್ತದೆ.

ಅರಿಶಿನ:
ಅರಿಶಿನ ಪ್ಲಾಸ್ಮಾ ಪ್ರೋಟೀನ್‌ (Plasma protein) ಗಳನ್ನು ಹೆಚ್ಚಿಸುತ್ತದೆ ಮತ್ತು ಸೀರಮ್ ಯೂರಿಯಾವನ್ನು ಕಡಿಮೆ ಮಾಡುತ್ತದೆ. ಇದು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ.

ಆರೋಗ್ಯವೇ ಭಾಗ್ಯ ಎಂಬಂತೆ ನಮ್ಮ ಆರೋಗ್ಯವನ್ನು ಉತ್ತಮವಾಗಿ ನಿಭಾಯಿಸಲು ಆದಷ್ಟು ಮನೆಯಲ್ಲಿಯೇ ನೈಸರ್ಗಿಕವಾಗಿ ಸಿಗುವಂತಹ ಆಹಾರ ಪದಾರ್ಥಗಳನ್ನು ತಿನ್ನುವ ಮೂಲಕ ಹಲವಾರು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯುವುದರ ಜೊತೆಗೆ ಕಿಡ್ನಿ ಸಮಸ್ಯೆ #KidneyProblem ಯಿಂದ ಪಾರಾಗಲು ಗಿಡ ಮೂಲಿಕೆಗಳ ಬಳಕೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳೋಣ…

ಭವ್ಯಶ್ರೀ ಆರ್ ಜೆ

Exit mobile version