Dehli: ವಿಶ್ವ ಆರೋಗ್ಯ ಸಂಸ್ಥೆಯು 2022 ರಲ್ಲಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಕ್ಷಯರೋಗ ಪ್ರಕರಣಗಳನ್ನು (Highest TB Cases in India – WHO) ಹೊಂದಿತ್ತು ಎಂದು ಜಾಗತಿಕ
ಟಿಬಿ (TB) ವರದಿ 2023 ಹೇಳುತ್ತದೆ. ವಿಶ್ವದ ಒಟ್ಟು ಕ್ಷಯ ರೋಗ ಪ್ರಕರಣಗಳಲ್ಲಿ ದೇಶದಲ್ಲಿ ಶೇಕಡಾ 27 ರಷ್ಟು ಪ್ರಕರಣಗಳಿದ್ದು, 28.2 ಲಕ್ಷ ಪ್ರಕರಣಗಳಿದೆ. ಅವುಗಳಲ್ಲಿ ಶೇ 12ರಷ್ಟು (3,42,000)
ಜನರು ಈ ಕಾಯಿಲೆಯಿಂದ ಸಾವಿಗೀಡಾಗಿದ್ದಾರೆ ಎಂದು ಮಂಗಳವಾರ (Highest TB Cases in India – WHO) ಬಿಡುಗಡೆಯಾದ ವರದಿ ತಿಳಿಸಿದೆ.
ಇಂಡೋನೇಷ್ಯಾ (Indonesia) (ಶೇ 10), ಚೀನಾ (ಶೇ 7.1), ಫಿಲಿಪೈನ್ಸ್ (ಶೇ 7.0), ಪಾಕಿಸ್ತಾನ (ಶೇ 5.7), ನೈಜೀರಿಯಾ (ಶೇ 4.5), ಬಾಂಗ್ಲಾದೇಶ (ಶೇ 3.6), ಮತ್ತು ಡೆಮಾಕ್ರಟಿಕ್
ರಿಪಬ್ಲಿಕ್ ಆಫ್ ಕಾಂಗೋ (Democratic Republic of Kango) (ಶೇ 3.0) ನಂತರದ ಸ್ಥಾನದಲ್ಲಿದೆ. 30 ರಾಷ್ಟ್ರಗಳು ವಿಶ್ವದ ಶೇ.87 ರಷ್ಟು ಟಿಬಿ ಪ್ರಕರಣಗಳಿಗೆ ಕಾರಣವೆಂದು ವರದಿ
ಬಹಿರಂಗಪಡಿಸಿದೆ.2015 ರಲ್ಲಿ 1,00,000 ಜನರ ಪೈಕಿ 258 ರೋಗಿಗಳಿದ್ದರೆ, 2022 ರಲ್ಲಿ 1,00,000 ಜನರಿಗೆ 199 ಕ್ಕೆ ರೋಗ ಪ್ರಕರಣಗಳಿವೆ. ಆದರೆ ದರವು ಇನ್ನೂ ಜಾಗತಿಕ ಸರಾಸರಿ 100,000 ಕ್ಕೆ
133 ಕ್ಕಿಂತ ಹೆಚ್ಚಾಗಿದ್ದು, ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಭಾರತವು ಪ್ರಗತಿ ಸಾಧಿಸಿದೆ ಎಂದು ವರದಿ ತೋರಿಸುತ್ತದೆ.
ಚಿಕಿತ್ಸಾ ಸೇವೆಗಳಲ್ಲಿ ಚೇತರಿಕೆ
ಈ ವರದಿಯು 2022 ರಲ್ಲಿ ಕ್ಷಯ ರೋಗನಿರ್ಣಯ ಮತ್ತು ಚಿಕಿತ್ಸಾ ಸೇವೆಗಳಲ್ಲಿನ ಚೇತರಿಕೆಯ ಪ್ರವೃತ್ತಿಯನ್ನು ತೋರಿಸುವುದಲ್ಲದೆ ಅದೇ ವೇಳೆ ಟಿಬಿ ನಿಯಂತ್ರಣ ಪ್ರಯತ್ನಗಳ ಮೇಲೆ COVID-19
ಪ್ರಭಾವದ ಸಂಭಾವ್ಯ ಹಿಮ್ಮುಖವನ್ನು ಸೂಚಿಸುತ್ತದೆ.
ಸಾವಿಗೀಡಾದವರ ಸಂಖ್ಯೆ:
ರೋಗವು ಎಷ್ಟು ತೀವ್ರವಾಗಿದೆ ಎಂಬುದರ ಮಾಪನಕೇಸ್ ಫರ್ಟಿಲಿಟಿ ರೇಶಿಯೋ (Fertility Ratio) (CFR) ಭಾರತದಲ್ಲಿ ಶೇಕಡಾ 12 ರಷ್ಟಿದ್ದು, ಅಂದರೆ 100 ರೋಗಿಗಳಲ್ಲಿ 12 ಜನರು ಈ
ಕಾಯಿಲೆಯಿಂದ ಸಾವಿಗೀಡಾಗಿದ್ದಾರೆ. ಈ ಅಂಕಿ ಅಂಶವು ಜಾಗತಿಕ ಸರಾಸರಿಯ ದ್ವಿಗುಣವಾಗಿದ್ದು,ಇದು ಶೇಕಡಾ 5.8 ರಷ್ಟಿದೆ. ಸಿಂಗಾಪುರವು ಶೇಕಡಾ 1 ರಷ್ಟು ಕಡಿಮೆ ಅಂಕಗಳನ್ನು ಹೊಂದಿದ್ದರೆ,
ಚೀನಾ ಶೇಕಡಾ 4 ರೊಂದಿಗೆ 14 ನೇ ಸ್ಥಾನದಲ್ಲಿದೆ. ಟಿಬಿ ಗುಣಪಡಿಸಬಹುದಾದರೂ, ತಡವಾಗಿ ಪತ್ತೆಯಾದಾಗ ಸಾವು ಸಂಭವಿಸಬಹುದು.
ಇದನ್ನು ಓದಿ: ಫೋಟೋ ಹಂಚಿಕೆ ವಿವಾದ: ಬೆಂಗಳೂರಿನಲ್ಲಿ 18 ವರ್ಷದ ಬಾಲಕನನ್ನು ಚಾಕುವಿನಿಂದ ಇರಿದು ಕೊಲೆ
- ಭವ್ಯಶ್ರೀ ಆರ್. ಜೆ