ಕಾಲೇಜಿನಲ್ಲಿ ಹಿಜಾಬ್ ನಿಷೇಧ: ಕಾಲೇಜು ನಿರ್ಧಾರ ಎತ್ತಿಹಿಡಿದ ಬಾಂಬೆ ಹೈಕೋರ್ಟ್

Mumbai (Maharashtra): ಕಾಲೇಜಿನ (College) ಆವರಣದಲ್ಲಿ ಯಾವುದೇ ರೀತಿಯ ಮುಖ ಮುಚ್ಚುವ ರೀತಿಯ ಬಟ್ಟೆಗಳನ್ನು ಧರಿಸಬಾರದು, ಕ್ಯಾಪ್ಗಳನ್ನು ಹಾಕಬಾರದು ಎಂದು ಮುಂಬೈನ ಕಾಲೇಜು (Mumbai Collage) ರೂಪಿಸಿದ್ದ ನಿಯಮವನ್ನು ಪ್ರಶ್ನಿಸಿ 9 ಮುಸ್ಲಿಂ ವಿದ್ಯಾರ್ಥಿನಿಯರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಕಾಲೇಜಿನ ಆಡಳಿತ ಮಂಡಳಿ ತೆಗೆದುಕೊಂಡಿರುವ ನಿರ್ಧಾರವನ್ನು ಎತ್ತಿಹಿಡಿದಿದೆ. ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ ಮನವಿಯನ್ನು ಬಾಂಬೆ ಹೈಕೋರ್ಟ್ (Bombay Highcourt) ತಿರಸ್ಕರಿಸಿದೆ.

Mumbai College

ಮಹಾರಾಷ್ಟ್ರದ ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಯ (Chembur Trombay Education Society’s College of Maharashtra), ಎನ್ಜಿ ಆಚಾರ್ಯ ಮತ್ತು ಚೆಂಬೂರಿನ ಡಿಕೆ ಮರಾಠೆ ಕಾಲೇಜಿನ ಆಡಳಿತ ಮಂಡಳಿಗಳು ತೆಗೆದುಕೊಂಡ ನಿರ್ಧಾರದಲ್ಲಿ ನಾವು ಮಧ್ಯ ಪ್ರವೇಶಿಸಲ್ಲ ಎಂದು ನ್ಯಾಯಮೂರ್ತಿ ಎ.ಎಸ್.ಚಂದೂರ್ಕರ್ ಮತ್ತು ನ್ಯಾಯಮೂರ್ತಿ ರಾಜೇಶ್ ಪಾಟೀಲ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಹೇಳಿದೆ. ಸಂವಿಧಾನದ ಆರ್ಟಿಕಲ್ 19 (1) (ಎ) ಮತ್ತು ಆರ್ಟಿಕಲ್ 25 ರ ಅಡಿಯಲ್ಲಿ ವಸ್ತ್ರ ಸಂಹಿತೆ ಉಲ್ಲಂಘಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹಿಜಾಬ್ (Hijab) ಧರಿಸಲು ಅವಕಾಶ ನೀಡುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ ಮನವಿಯಲ್ಲಿ. ಕಾಲೇಜಿನ ಆಡಳಿತ ಮಂಡಳಿಗಳು ತೆಗೆದುಕೊಂಡಿರುವ ನಿರ್ಧಾರವನ್ನು, ನಿರಂಕುಶ, ಅಸಮಂಜಸವಾಗಿದ್ದು, ಕಾಲೇಜು ವಿಧಿಸಿರುವ ವಸ್ತ್ರಸಂಹಿತೆ ನಮ್ಮ ಖಾಸಗಿತನ, ಘನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಉಲ್ಲೇಖಿಸಿದ್ದರು. ವಿದ್ಯಾರ್ಥಿನಿಯರ ಅರ್ಜಿ ವಜಾ ಆಗಿರುವುದರಿಂದ ಈಗ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ (Supreme Court) ಪ್ರಶ್ನಿಸುವ ಸಾಧ್ಯತೆಯಿದೆ. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಕೋರ್ಟ್ ಮೊರೆ ಹೋಗುವ ಮುನ್ನ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸುವುದಾಗಿ ವಿದ್ಯಾರ್ಥಿನಿಯರ ಪರ ವಕೀಲ ಅಲ್ತಾಫ್ ಖಾನ್ (Altaf Khan) ತಿಳಿಸಿದ್ದಾರೆ.

Exit mobile version