ಹಿಜಾಬ್ ಪ್ರಕರಣಕ್ಕೂ ಪರೀಕ್ಷೆಗೂ ಸಂಬಂಧವಿಲ್ಲ : ಸುಪ್ರೀಂಕೋರ್ಟ್ ಸಿಜೆಐ!

supreme court

ಹಿಜಾಬ್(Hiajb) ಪ್ರಕರಣವನ್ನು ತುರ್ತು(Emergency) ವಿಚಾರಣೆ(Enquiry) ನಡೆಸಬೇಕೆಂದು ಕೋರಿ ಉಡುಪಿಯ(Udupi) ಆರು ವಿದ್ಯಾರ್ಥಿನಿಯರ ಪರ ವಕೀಲ(Lawyer) ದೇವದತ್ ಕಾಮತ್(Devadath Kamath) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿಗಳು ತಿರಸ್ಕರಿಸಿದರು. ತುರ್ತು ವಿಚಾರಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಈಗಾಗಲೇ ಒಮ್ಮೆ ತಿರಸ್ಕರಿಸಿದ್ದ ಸುಪ್ರೀಂಕೋರ್ಟ್(Supreme Court), ಇದೀಗ ಮತ್ತೊಮ್ಮೆ ಈ ಅರ್ಜಿಯೂ ತುರ್ತು ವಿಚಾಣೆಯ ಅಗತ್ಯತೆಯನ್ನು ಹೊಂದಿಲ್ಲ ಎಂಬುದು ನ್ಯಾಯಾಲಯದ ಅಭಿಪ್ರಾಯ ಎಂದು ಮುಖ್ಯನ್ಯಾಯಮೂರ್ತಿಗಳಾದ ರಮಣ ಹೇಳಿದ್ದಾರೆ.

ಮಾರ್ಚ್ ೧೬ ರಂದು ಹೋಳಿ ಹಬ್ಬದ ನಂತರ ವಿಚಾರಣೆ ನಡೆಸುವ ಕುರಿತು ನಿರ್ಧರಿಸಲಾಗುವುದು ಎಂದಿದ್ದರು. ಇನ್ನು ವಿದ್ಯಾರ್ಥಿನಿಯರ ಪರ ವಕೀಲ ದೇವದತ್ ಕಾಮತ್ ಅವರು ಪರೀಕ್ಷೆಗಳು ಹತ್ತಿರ ಬರುತ್ತಿವೆ, ಹೀಗಾಗಿ ತುರ್ತು ವಿಚಾರಣೆ ನಡೆಸಬೇಕೆಂದು ಕೋರಿದರು. ಆಗ ನ್ಯಾಯಮೂರ್ತಿಗಳು, “ಪರೀಕ್ಷೆಗಳಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ” ಎಂದರು. ಆಗ ದೇವದತ್ ಕಾಮತ್ ಪದೇ ಪದೇ ಪರೀಕ್ಷೆ ವಿಚಾರವನ್ನು ಪ್ರಸ್ತಾಪಿಸಿದರು. ಆಗ ಸರ್ಕಾರದ ಸಾಲಿಸಿಟರ್ ಜನರಲ್ ಅವರು ಪದೇ ಪದೇ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ” ಎಂದರು.

ಆಗ ಮುಖ್ಯನ್ಯಾಯಮೂರ್ತಿಗಳು ” ಮಿ. ಸಾಲಿಸಿಟರ್ ಜನರಲ್ ಅವರೇ ನೀವು ಸ್ವಲ್ಪ ಕಾಯಬಹುದೇ. ಈ ಸಮಸ್ಯೆಯನ್ನು ಸೂಕ್ಷ್ಮಗೊಳಿಸಬೇಡಿ” ಎಂದರು. ಆಗ ಮತ್ತೊಮ್ಮೆ ವಿಷಯ ಪ್ರಸ್ತಾಪಿಸಿದ ದೇವದತ್ ಕಾಮತ್ ಪರೀಕ್ಷೆಗಳು ಇದೇ ೨೮ ರಿಂದ ಪ್ರಾರಂಭವಾಗುತ್ತಿವೆ. ಸದ್ಯ ವಿದ್ಯಾರ್ಥಿನಿಯರನ್ನು ಶಾಲೆಗಳಿಗೆ ಬರದಂತೆ ನಿರ್ಬಂಧ ಹೇರಲಾಗುತ್ತಿದೆ. ಪರೀಕ್ಷೆಗೆ ಹಾಜರಾಗದಿದ್ದರೆ ಒಂದು ವರ್ಷ ವಿದ್ಯಾರ್ಥಿನಿಯರ ಭವಿಷ್ಯ ಹಾಳಾಗುತ್ತದೆ ಎಂದು ಮನವಿ ಮಾಡಿದರು. ಆಗ ಮುಖ್ಯನ್ಯಾಯಮೂರ್ತಿಗಳು ಯಾವುದೇ ಪ್ರತಿಕ್ರಿಯೆ ನೀಡದೆ, ಮುಂದಿನ ದಿನಾಂಕವನ್ನು ನೀಡಲಿಲ್ಲ ಎನ್ನಲಾಗಿದೆ.

Exit mobile version